• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • D Roopa-Rohini Sindhuri: ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್

D Roopa-Rohini Sindhuri: ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್

ಡಿ ರೂಪಾ Vs ರೋಹಿಣಿ ಸಿಂಧೂರಿ

ಡಿ ರೂಪಾ Vs ರೋಹಿಣಿ ಸಿಂಧೂರಿ

ಸಿಬಿಐ ರಿಪೋರ್ಟ್​ನಲ್ಲಿ ಏನೆಲ್ಲಾ ಆಗಿದೆ ಅಂತ ಕಂಪ್ಲೀಟ್​ ಮಾಹಿತಿ ಇದೆ. ಈಗ ಆದರೂ ಈ ಬಗ್ಗೆ ಜನರಿಗೆ ಸತ್ಯ ತಿಳಿದರೆ ಸಾಕು. ಜವಾಬ್ದಾರಿಯುವ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರೆ ನನಗೆ ಅಚ್ಚರಿ ಆಗುತ್ತಿದೆ ಎಂದು ಕುಸುಮಾ ಹೇಳಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಎಎಸ್​​-ಐಪಿಎಸ್  (Lady Officers)​​​ ನಡುವೆ ಶುರುವಾಗಿರುವ ವಾರ್​ ಮತ್ತಷ್ಟು ಹೆಚ್ಚಾಗುತ್ತಿದೆ. ಇಬ್ಬರ ಟಾಕ್​ ವಾರ್ ನಡುವೆ ಡಿಕೆ ರವಿ ಅವರ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ವಿರುದ್ಧ ಐಪಿಎಸ್ ಅಧಿಕಾರಿ ​ ಡಿ.ರೂಪಾ (IPS Officer D. Roopa) 20 ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ನಡುವೆ ಡಿಕೆ ರವಿ ಅವರ ಸಾವಿನ ಬಗ್ಗೆ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್​ ಮಾಡಿದ್ದ ಡಿಕೆ ರವಿ (DK Ravi) ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆನ್ನು ನೀಡಿದ್ದಾರೆ. ಈ ವೇಳೆ ರವಿ ಅವರಿಗೆ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ. ಈ ರೀತಿ ಹೇಳಿಕೆಗಳನ್ನು ನೀಡಿ ಅವರಿಗೆ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಕುಸುಮಾ ಹನುಮಂತರಾಯಪ್ಪ ಅವರು, ಐಎಎಸ್ ಮತ್ತು ಐಪಿಎಸ್ ವಾರ್ ಮಧ್ಯೆ ನಾನು ಬರುವುದಿಲ್ಲ. ಆದರೆ ನನ್ನ ಪತಿ ರವಿ ಅವರ ಹೆಸರು ಬಂದಿರುವುದರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ಅನುಭವಿಸರುವ ನೋವು, ಕಷ್ಟ ಯಾವ ಹೆಣ್ಣಿಗೂ ಆಗಬಾರದು ಎಂದು ಹೇಳಿದರು.ಇದನ್ನೂ ಓದಿ: Rohini Sindhuri: 'ನಿಧಾನಕ್ಕೆ ಆದ್ರೂ ಕರ್ಮ ಹಿಂದಿರುಗಿ ಬರುತ್ತೆ'! ಡಿ ರೂಪಾ Vs ರೋಹಿಣಿ ಸಿಂಧೂರಿ ಟಾಕ್​ ವಾರ್​ ನಡುವೆ ಕುಸುಮಾ ಎಂಟ್ರಿ


ಸಿಬಿಐ ರಿಪೋರ್ಟ್​​ನಲ್ಲಿ ಮೆಸೇಜ್​ ಚಾಟ್ ಮಾಡಿರುವ ವಿಚಾರ ಸ್ಪಷ್ಟವಾಗಿದೆ. ನನಗೆ ಆಗಿದ್ದ ನೋವು ಎಂದರೆ, ರವಿ ಅವರು ಸಾವನ್ನಪ್ಪಿದ ಸಂದರ್ಭದಲ್ಲಿ ಆದ ಚರ್ಚೆ ಅವರು ಕೇಸ್​​ನಲ್ಲಿ ಸಿಬಿಐ ರಿಪೋರ್ಟ್​ ಬಂದ ಮೇಲೆ ಆದ ಅಂಶಗಳ ಬಗ್ಗೆ ಚರ್ಚೆಯೇ ಆಗಲಿಲ್ಲ. ಒಂದೆರಡು ಮಾಧ್ಯಮಗಳು ಬಿಟ್ಟರೆ ಬೇರೆ ಯಾರು ಈ ಬಗ್ಗೆ ಮಾತನಾಡಿಲ್ಲ, ಚರ್ಚೆಯೂ ಮಾತನಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಡಿ ರೂಪಾ ಅವರು ಮಾಡುತ್ತಿರುವ ಹೋರಾಟವನ್ನು ನಾನು ಗಮನಿಸಿಕೊಂಡು ಬಂದಿದ್ದೇನೆ. ಕರ್ಮ ಯಾರನ್ನೂ ಬಿಡುವುದಿಲ್ಲ, ಹಾಗಾಗಿ ತಪ್ಪು ಮಾಡಿದವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು. ಡಿಕೆ ರವಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂದರೆ ನನಗೆ ನೋವಾಗುತ್ತೆ. ಅವರಿಗೆ ಅಂತಹ ಸ್ಥಿತಿ ಇರಲಿಲ್ಲ. ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು.


ಸಿಬಿಐ ರಿಪೋರ್ಟ್​ನಲ್ಲಿ ಏನೆಲ್ಲಾ ಆಗಿದೆ ಅಂತ ಕಂಪ್ಲೀಟ್​ ಮಾಹಿತಿ ಇದೆ. ಈಗ ಆದರೂ ಈ ಬಗ್ಗೆ ಜನರಿಗೆ ಸತ್ಯ ತಿಳಿದರೆ ಸಾಕು. ಜವಾಬ್ದಾರಿಯುವ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡುತ್ತಿದ್ದಾರೆ ಎಂದರೆ ನನಗೆ ಅಚ್ಚರಿ ಆಗುತ್ತಿದೆ. ಅವರು ಮಾನಸಿಕ ಅಸ್ವಸ್ಥತೆ ಯಾವುದೇ ಸಮಸ್ಯೆ ಇರಲಿಲ್ಲ. ರವಿ ಅವರು ತೀರಿಕೊಂಡ ಸಂದರ್ಭದಲ್ಲಿ ಇದ್ದ ಇಂಟರೆಸ್ಟ್​ ಸಿಬಿಐ ವರದಿ ಬಗ್ಗೆ ಇರಲಿಲ್ಲ. ಯಾವುದೇ ಹೆಣ್ಣು ಮಗುವಿಗೆ ನನಗೆ ಆದ ಅನ್ಯಾಯ, ನೋವು, ಅವಮಾನ ಬೇರೆ ಯಾರಿಗೂ ಆಗಬಾರದು ಅನ್ನೋದು ನನ್ನ ಉದ್ದೇಶ.
ಇದನ್ನೂ ಓದಿ: Rohini Sindhuri: 'ಸಿಂಧೂರಿ ಫೋಟೋ ಫೇಕ್​ ಅಲ್ಲ, ಇದು ಜಸ್ಟ್ ಸ್ಯಾಂಪಲ್​ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ


ಇನ್ನು, ರೂಪಾ ಅವರ ಆರೋಪಿಗಳಿಗೆ ಪ್ರತಿಕ್ರಿಯೆ ನೀಡಿದ್ದ ರೋಹಿಣಿ ಸಿಂಧೂರಿ ಅವರು, ಐಪಿಎಸ್‌ ರೂಪಾ ಅವರದ್ದು, ಇದೊಂದು ಅಭ್ಯಾಸವಾಗಿ ಬಿಟ್ಟಿದೆ ಅಂತ ರೋಹಿಣಿ ಸಿಂಧೂರಿ ಕಿಡಿಕಾರಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಮಾ‍ಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇ಼ಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಪ್ರಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದ್ದರು.

Published by:Sumanth SN
First published: