Kurup ಸಿನಿಮಾ ಶೈಲಿಯಲ್ಲಿ ಹತ್ಯೆ; ತನ್ನನ್ನೇ ಹೋಲುವ ವ್ಯಕ್ತಿಯನ್ನ ಬೆಂಕಿ ಹಚ್ಚಿ ಕೊಲೆಗೈದ

ಇನ್ನು ಕೊಲೆಯಾದ ವ್ಯಕ್ತಿ ಕಾರ್ಕಳ ಮೂಲದವನು ಎಂದು ತಿಳಿದು ಬಂದಿದೆ. ಆದ್ರೆ ಆತನ ಗುರುತು ಪತ್ತೆಯಾಗಿಲ್ಲ.

ಮೃತದೇಹ ಪತ್ತೆಯಾದ ಕಾರ್

ಮೃತದೇಹ ಪತ್ತೆಯಾದ ಕಾರ್

  • Share this:
ನಟ ದುಲ್ಖರ್ ಸಲ್ಮಾನ್ (Dulquer Salman) ನಟನೆಯ ಮಲಯಾಳಂನ (Malayalam) ಕುರುಪ ಸಿನಿಮಾದ (Kurup Cinema) ಶೈಲಿಯಲ್ಲಿ ನಡೆದ ಕೊಲೆ ಪ್ರಕರಣವನ್ನು (Murder Case) ಉಡುಪಿ ಪೊಲೀಸರು (Udupi Police) ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಕೊಲೆ ನಡೆದಿದೆ ಎಂದು ಬಿಂಬಿಸಲು ಅಮಾಯಕನ ಜೀವ ಬಲಿ ಪಡೆದ ವ್ಯಕ್ತಿ ಮತ್ತು ಆತನಿಗೆ ಸಹಾಯ ಮಾಡಿದ್ದ ಮಹಿಳೆಯನ್ನು ಬಂಧಿಸಿ, ಜೈಲಿಗೆ (Jail) ಅಟ್ಟಿದ್ದಾರೆ. 54 ವರ್ಷದ ಸದಾನಂದ್ ಶೇರಿಗಾರ್ ಮತ್ತು 40 ವರ್ಷದ ಶಿಲ್ಪಾ ಬಂಧಿತ ಆರೋಪಿಗಳು. ಕುರುಪ ಸಿನಿಮಾದಂತೆಯೇ ಈ ಜೋಡಿ ಕೊಲೆ ಮಾಡಿದ್ದು, ಸದ್ಯ ಕತ್ತಲ ಕೋಣೆಯಲ್ಲಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಕೊಲೆ ಮಾಡಿರೋದಾಗಿ ಆರೋಪಿಗಳು ಹೇಳಿಕೆ ದಾಖಲಿಸಿದ್ದಾರೆ.

ಏನಿದು ಪ್ರಕರಣ?

ಜುಲೈ 13 ರಂದು ಬೈಂದೂರಿನ ಹೆನುಬೇರು ಬಳಿ ಕಾರಿನೊಳಗೆ ಸುಟ್ಟು ಕರಕಲಾಗಿರುವ ಶವ ಪತ್ತೆಯಾಗುತ್ತದೆ. ಕಾರ್ ಹಿಂಬದಿಯ ಆಸನದಲ್ಲಿದ್ದ ಶವ ಗುರುತು ಸಿಗದಷ್ಟು ಸುಟ್ಟು ಕರಕಲಾಗಿತ್ತು. ಇದೀಗ ಈ ಉಡುಪಿ ಪೊಲೀಸರು ಆರೋಪಿಗಗಳಿಬ್ಬರನ್ನು ಬಂಧಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿದ್ದ ಸದಾನಂದ್

ಬಂಧಿತ ಸದಾನಂದ್ ಪರವಾನಗಿ ಪಡೆದ ಭೂಮಾಪಕನಾಗಿ (Licensed land Surveyor) ಕೆಲಸ ಮಾಡಿಕೊಂಡಿದ್ದನು. ಸದಾನಂದ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗೆ ಸಂಬಂಧಿಸಿದಂತೆ ನಕಲಿ ಸ್ಕೆಚ್ಚ ಸಿದ್ಧಪಡಿಸಿದ್ದನು. ಸ್ಕೆಚ್ ನಲ್ಲಿ ಇಲ್ಲದ ರಸ್ತೆಯನ್ನು ಸಹ ಸದಾನಂದ್ ತೋರಿಸಿ ಮೋಸ ಮಾಡಿದ್ದನು. ಈ ಸಂಬಂಧ ಸದಾನಂದ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:  Crime News: ಸರಸದಾಟಕ್ಕೆ ಅಡ್ಡಿಯಾದ ಗಂಡನನ್ನ ಕೊಂದು ಶವದ ಪಕ್ಕದಲ್ಲಿಯೇ ಮಲಗಿದ ದಿಲ್ಲಿ ರಾಣಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಹ ಸಲ್ಲಿಕೆ ಮಾಡಿದ್ದರು. ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆರೋಪಿ ಸದಾನಂದನನಿಗೆ ಸಮನ್ಸ್ ಸಹ ನೀಡಲಾಗಿತ್ತು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಲೆಯ ನಾಟಕ

ಸಮನ್ಸ್ ಬಂದ ಹಿನ್ನೆಲೆ ಆರೋಪಿ ಸದಾನಂದನಿಗೆ ಬಂಧನದ ಭೀತಿ ಎದುರಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಕೊಲೆ ನಡೆದಿದೆ ಎಂದು ಬಿಂಬಿಸಲು ಕುರುಪ್ ಸಿನಿಮಾದಂತೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದನು. ಇದಕ್ಕೆ ತನ್ನ ಸಹವರ್ತಿಯಾಗಿದ್ದ ಶಿಲ್ಪಾ ಸಹಾಯ ಪಡೆದುಕೊಂಡಿದ್ದನು. ಶಿಲ್ಪಾ ಈ ಮೊದಲು ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಅಲ್ಲಿ ಸದಾನಂದ್ ಮತ್ತು ಶಿಲ್ಪಾಳ ಪರಿಚಯವಾಗಿತ್ತು.

ನಿದ್ದೆ ಮಾತ್ರೆ ಮಿಶ್ರಿತ ಮದ್ಯ ಕುಡಿಸಿದ್ರು

ತನ್ನ ಕೊಲೆ ನಡೆದಿದೆ ಎಂದು ಬಿಂಬಿಸಲು ಸದನಾಂದ್ ತನ್ನ ವಯೋಮಾನದ ವ್ಯಕ್ತಿಯೊಬ್ಬನನ್ನು ಹುಡುಕಿಕೊಂಡಿದ್ದರು. ಆತನಿಗೆ ನಿದ್ದೆ ಮಾತ್ರೆ ಮಿಶ್ರಿತ ಮದ್ಯ ಕುಡಿಸಿದ್ದಾರೆ. ಆತ ನಿದ್ದೆಗೆ ಜಾರುತ್ತಿದ್ದಂತೆ ಕಾರ್ ಗೆ ಬೆಂಕಿ ಹಚ್ಚಿದ್ದಾರೆ.

ಈ ಬೀಕರ ಹತ್ಯೆಯನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಕೊಲೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಕೊಲೆಯಾದ ವ್ಯಕ್ತಿ ಕಾರ್ಕಳ ಮೂಲದವನು ಎಂದು ತಿಳಿದು ಬಂದಿದೆ. ಆದ್ರೆ ಆತನ ಗುರುತು ಪತ್ತೆಯಾಗಿಲ್ಲ.

14 ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿದ ಲವರ್​​

ದೆಹಲಿಯಲ್ಲೊಬ್ಬ ಮಹಿಳೆ 8 ವರ್ಷದಿಂದ ತನ್ನ ಪ್ರಿಯಕರ ಜೊತೆ ಲಿವ್ ಇನ್ ರಿಲೇಶನ್‍ಶಿಪ್ (Live in relationship) ಇದ್ದಳು. ಆ ಸಮಯದಲ್ಲಿ ಆತ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಮಹಿಳೆ 14 ಬಾರಿ ಗರ್ಭಿಣಿಯಾದ್ರೂ, ಮಗು ಬೇಡ ಎಂದು 14 ಬಾರಿಯೂ ಒತ್ತಾಯವಾಗಿ ಗರ್ಭಪಾತ (Abortion) ಮಾಡಿಸಿದ್ದಾನೆ. ಮನನೊಂದು ಮಹಿಳೆ ಸೂಸೈಡ್ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:  Bengaluru Crime News: ಕಟ್ಕೊಂಡ ಪತ್ನಿ ಜೊತೆಯಲ್ಲಿದ್ರೂ ನಾದಿನಿಯ ಮೇಲೆ ಕಣ್ಣಾಕಿದವ ಮಾಡಿದ್ದೇನು?

ದೆಹಲಿಯಲ್ಲಿ ಜುಲೈ 5ರಂದು ದೆಹಲಿಯ ಜೈತ್ಪುರದಲ್ಲಿ ಮಹಿಳೆಯೊಬ್ಬಳು ತನ್ನ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ತನಿಖೆಗೆ ನಡೆಸುತ್ತಿದ್ದ ಪೊಲೀಸರು ಹೇಳಿರುವ ಹೇಳಿಕೆ ಬೆಚ್ಚಿ ಬೀಳಿಸುವಂತೆ ಇದೆ. ಸೂಸೈಡ್ ಮಾಡಿಕೊಂಡ ಮಹಿಳೆ ಹಿಂದಿಯಲ್ಲಿ ಡೆತ್‍ನೋಟ್ ಬರೆದಿಟ್ಟಿದ್ದಳು. ಅದರಲ್ಲಿ 14 ಬಾರಿ ತನ್ನ ಪ್ರಿಯಕರ ಬಲವಂತವಾಗಿ ಗರ್ಭಪಾತ ಮಾಡಿಸಿರುವ ವಿಷಯ ಬರೆದಿದ್ದಳು
Published by:Mahmadrafik K
First published: