ಸಚಿವರಿಗೆ ಅಧಿಕಾರ ಶಾಶ್ವತವಲ್ಲ, ಆದರೆ ರೈತರಿಗೆ ಹೋರಾಟ ಶಾಶ್ವತ : ರೈತ ಮುಖಂಡ ಕುರುಬೂರು ಶಾಂತಕುಮಾರ್

ನಾಳೆ ಜೈಲೋ ಭರೋ ಚಳುವಳಿ ನಡೆಯಲಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಲಿದೆ. 25 ಕ್ಕೂ ಹೆಚ್ಚು ಜಿಲ್ಲೆಗಳಿಂದ ರೈತರ ಬೆಂಬಲವಿದೆ, ರಸ್ತೆ ತಡೆ, ಪ್ರತಿಭಟನೆ ಜರುಗಲಿದೆ. ಜನರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಇದು ರೈತರ ಬದುಕಿನ‌ ಪ್ರಶ್ನೆ ರೈತರ ಬದುಕು ನಾಶವಾಗುತ್ತಿದೆ

ಕುರುಬೂರು ಶಾಂತಕುಮಾರ್

ಕುರುಬೂರು ಶಾಂತಕುಮಾರ್

  • Share this:
ಬೆಂಗಳೂರು(ಸೆಪ್ಟೆಂಬರ್​. 24): ಸಚಿವರಿಗೆ ಅಧಿಕಾರ ಶಾಶ್ವತವಲ್ಲ. ಅಧಿಕಾರ ಹೋಗುತ್ತೆ ಬರುತ್ತೆ. ಆದರೆ, ರೈತರಿಗೆ ಹೋರಾಟ ಶಾಶ್ವತ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಮಂತ್ರಿಗಳಿಗೆ ಅಧಿಕಾರ ಶಾಶ್ವತ ಅಲ್ಲ. ಆದರೆ, ರೈತರಿಗೆ ಹೋರಾಟ ಶಾಶ್ವತ ಕಾಯ್ದೆಯಿಂದ ಅನುಕೂಲ ಆಗುತ್ತೆ ಅಂತಾ ಸಚಿವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಸಚಿವರು ನಮ್ಮನ್ನು ಬಂದು ಭೇಟಿ ಮಾಡಿಲ್ಲ. ಒಂದು ಸಭೆ ಮಾಡಿಲ್ಲ. ನಮ್ಮ ಅಭಿಯಾನ ಕೇಳಿಲ್ಲ. ಇದು ಸರ್ಕಾರ ಎಂದು ಹೇಳಬೇಕಾ ? ಇದು ಮಾಫಿಯಾ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ಸಿಗದೇ ಅನ್ಯಾಯ ಆಗುತ್ತಿದೆ.  52 ರೈತರ ಉತ್ಪನ್ನಗಳಿವೆಅವುಗಳಲ್ಲಿ 5, 6 ಮಾತ್ರ ಬೆಂಬಲ ಬೆಲೆ ಕೊಟ್ಟಿದೆ ಎಂದರು.

ಸ್ವಾಮಿನಾಥನ್ ವರದಿ ಜಾರಿಗೆ ತರುತ್ತವೆ ಅಂತಾ 136 ಕಡೆ ಭಾಷಣದಲ್ಲಿ ಹೇಳಿ ಅಧಿಕಾರಕ್ಕೆ ಬಂದು ರೈತರನ್ನ ಕಾರ್ಪೋರೆಟ್ ಕಂಪನಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಭೂ ಸುಧಾರಣೆ ಎಪಿಎಂಸಿ ಕಾಯ್ದೆಯನ್ನು ಮಂಡನೆ ಮಾಡಿದೆ. ಇಂಥ ಸಂದರ್ಭದಲ್ಲಿ ಚಳುವಳಿದಾರರ ಜೊತೆ ಚರ್ಚೆ ಮಾಡುವ ಸೌಜನ್ಯ ಸರ್ಕಾರ ಮಾಡಿಲ್ಲ. ಇದು ರೈತ ಸಮುದಾಯಕ್ಕೆ ಮಾಡಿದ ಅಪಮಾನ. ಅನ್ನದಾತನ ರಕ್ಷಣೆಗಾಗಿ ಬೆಂಬಲ ಕೊಡಿ. ಅನ್ನದಾತನಿಗೆ ದ್ರೋಹ ಬಗೆಯುವವರು ಕೈ ಜೋಡಿಸಬೇಡಿ ಎಂದು  ತಿಳಿಸಿದರು.

ನಮ್ಮ‌ಹೋರಾಟದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ ರಾಜ್ಯದ ಉದ್ದಗಲಕ್ಕೂ ನಾಳೆ ರಸ್ತೆ ತಡೆ ಮಾಡಲಾಗುವುದು. ಬಹುತೇಕ ರಾಜ್ಯದ 25 ಜಿಲ್ಲೆಗಳಲ್ಲಿ ರಸ್ತೆ ತಡೆ ಮಾಡುತ್ತೇವೆ. ಐಕ್ಯ ಹೋರಾಟ ಹಾಗೂ ಎಲ್ಲಾ ರೈತಸಂಘ ಹೋರಾಟ‌ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಪಂಜಾಬ್ ಹರಿಯಾಣ ದಲ್ಲಿ‌ ಪ್ರತಿಭಟನೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇವತ್ತು ಎಂಟು ಕಡೆ ವಿವಿಧ ಪ್ರತಿಭಟನೆ; ಎಲ್ಲೆಲ್ಲಿ ಟ್ರಾಫಿಕ್ ಕಿರಿಕಿರಿ?

ನಾಳೆ ಜೈಲೋ ಭರೋ ಚಳುವಳಿ ನಡೆಯಲಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಲಿದೆ. 25 ಕ್ಕೂ ಹೆಚ್ಚು ಜಿಲ್ಲೆಗಳಿಂದ ರೈತರ ಬೆಂಬಲವಿದೆ, ರಸ್ತೆ ತಡೆ, ಪ್ರತಿಭಟನೆ ಜರುಗಲಿದೆ. ಜನರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಇದು ರೈತರ ಬದುಕಿನ‌ ಪ್ರಶ್ನೆ ರೈತರ ಬದುಕು ನಾಶವಾಗುತ್ತಿದೆ ಎಂದು ತಿಳಿಸಿದರು.

ಅನ್ನದಾತನ‌ ಬದುಕು‌ ನಶಿಸಿ ಹೋಗುತ್ತಿದೆ. ಅನ್ನದಾತನ ಜೊತೆ ಕೈಜೋಡಿಸಿ.ಬೆಂಗಳೂರಿನ ನಾಯಂಡಹಳ್ಳಿ, ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ ನಾವು ರಸ್ತೆ ತಡೆ ನಡೆಸುತ್ತೇವೆನಾಳೆ ನಾನು ಮೈಸೂರು ಬ್ಯಾಂಕ್ ಸರ್ಕಲ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದರು.
Published by:G Hareeshkumar
First published: