ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಇಂದು ಹುಳಿಯಾರು ಪಟ್ಟಣ ಬಂದ್

ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಹುಳಿಯಾರ್​ ಪಟ್ಟಣ ಬಂದ್​ ಮಾಡಲಾಗುವುದು. ಜನರು ಕೂಡ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಬೇಕು ಎಂದು ಕೂಡ ಒಕ್ಕೂಟ ಮನವಿ ಮಾಡಿದೆ.

G Hareeshkumar | news18-kannada
Updated:November 21, 2019, 12:08 PM IST
ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಇಂದು ಹುಳಿಯಾರು ಪಟ್ಟಣ ಬಂದ್
ಹುಳಿಯಾರು ಪಟ್ಟಣ
  • Share this:
ತುಮಕೂರು(ನ.21):  ಕುರುಬ ಸಮುದಾಯದ ಸ್ವಾಮೀಜಿ ಈಶ್ವರನಂದ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿರುವ ಸಚಿವ ಜೆ.ಸಿ ಮಾಧುಸ್ವಾಮಿ  ಕ್ಷಮೆಕೇಳುವಂತೆ ಆಗ್ರಹಿಸಿ ಕುರುಬ ಸಮುದಾಯದ ವತಿಯಿಂದ ಹುಳಿಯಾರು ಬಂದ್ ಗೆ ಕರೆ ನೀಡಲಾಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಹುಳಿಯಾರ್​ ಪಟ್ಟಣ ಬಂದ್​ಗೆ ಕರೆ ನೀಡಲಾಗಿದೆ. ಜನರು ಕೂಡ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ದಾರೆ. ಜನರು ಕೂಡ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಬೇಕು ಎಂದು ಕೂಡ ಒಕ್ಕೂಟ ಮನವಿ ಮಾಡಿದೆ. ಪಟ್ಟಣದಾದ್ಯಂತ ವ್ಯಾಪಕ ಪೊಲೀಸ್​​ ಬಂದೋಬಸ್ತ್ ಮಾಡಲಾಗಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ವೃತ್ತಕ್ಕೆ ಕನಕದಾಸರ ಹೆಸರು ಇಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯವಿತ್ತು. ಈ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಈಶ್ವರಾನಂದ ಸ್ವಾಮೀಜಿಗಳ ವಿರುದ್ದ ಏರುಧ್ವನಿಯಲ್ಲಿ ಮಾತನಾಡಿದ್ದರು.

ಸಚಿವರ ವರ್ತನೆ ವಿರುದ್ದ ಕುರುಬ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಈ ಬಗ್ಗೆ ಸಚಿವ ಮಾಧುಸ್ವಾಮಿ ಪರವಾಗಿ ಕ್ಷಮೆಯಾಚಿಸಿದ್ದರು. ಆದರೆ ಸಚಿವ ಮಾಧುಸ್ವಾಮಿ ಅವರು ಕ್ಷಮೆ ಕೇಳಿಲ್ಲ. ಹೀಗಾಗಿ ಸಚಿವರ ಕ್ಷಮೆಯಾಚನೆಗೆ ಪಟ್ಟು ಹಿಡಿದು ಕುರುಬ ಸಮುದಾಯದ ಒಕ್ಕೂಟ ಹುಳಿಯಾರು ಬಂದ್ ಗೆ ಕರೆ ನೀಡಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚಿವೆ.

ಇದನ್ನೂ ಓದಿ : ಕುರುಬ ಸಮುದಾಯದ ಆಕ್ರೋಶಕ್ಕೆ ಬೆದರಿದ ಸಿಎಂ; ಕನಕದಾಸರ ಹೆಸರಿಡಲು ಅಭ್ಯಂತರವಿಲ್ಲ ಎಂದ ಬಿಎಸ್​ವೈ

ಸಿಎಂ ಯಡಿಯೂರಪ್ಪ ಅವರ ಕ್ಷಮೆಗೂ ವಿಷಾದ ಅಂತಾ ಮಾಧುಸ್ವಾಮಿ ಹೇಳಿದ್ದಾರೆ. ಇನ್ನೂ ಉದ್ದಟತನ ಮೆರೆಯುತ್ತಿದ್ದಾರೆ. ಕನಕದಾಸ ವೃತ್ತ ಹೆಸರಿಡೋದಕ್ಕೆ ನಮ್ಮದೆನೂ ತಕರಾರು‌ ಇಲ್ಲಾ ಅಂತಾ ಹೇಳ್ತಾರೆ. ಆದರೆ ಇಲ್ಲಿ ಪೊಲೀಸರು ಯಾಕೆ ಬ್ಯಾರಿಕೇಡ್ ಹಾಕಿದ್ದಾರೆ. ಬೋರ್ಡ್ ಹಾಕಿದಮೇಲೆ ನಮ್ಮ ಗುರುಗಳ‌ ಸಂದೇಶಕ್ಕೆ ಒಪ್ಪುತ್ತೇವೆ‌ ಎಂದು ಜಿಪಂ ಸದಸ್ಯ ಸಿದ್ದರಾಮಯ್ಯ ಹೇಳಿದ್ದಾರೆ.

First published: November 21, 2019, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading