ಮೊದಲು ಶಾಂತರೀತಿಯ ಹೋರಾಟ, ನಂತರ ಉಗ್ರ ಸ್ವರೂಪದ ಹೋರಾಟ; ಕಾಗಿನೆಲೆ ಶ್ರೀಗಳು

ಹಾಲುಮತ ಸಮುದಾಯ ಜೇನುಗೂಡಂತೆ ಸೇರಿ ಹೋರಾಟ ಮಾಡುತ್ತಿದೆ. ಎಸ್​ಟಿ ಮೀಸಲಾತಿಗಾಗಿ ಪಾದಯಾತ್ರೆ ಮಾಡಲಾಗಿದೆ ಹೊರತು ರಾಜಕೀಯಕ್ಕಾಗಿ ಮಾಡಿದ ಹೋರಾಟವಲ್ಲ.

ಕುರುಬ ಸಮುದಾಯದ ಸಮಾರೋಪ ಸಮಾರಂಭ

ಕುರುಬ ಸಮುದಾಯದ ಸಮಾರೋಪ ಸಮಾರಂಭ

  • Share this:
ಬೆಂಗಳೂರು (ಫೆ. 3): ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂಬ ನಡೆಸುತ್ತಿರುವ ಈ ಹೋರಾಟವನ್ನು ಶಾಂತಿಯುತವಾಗಿ ಮಾಡಿಕೊಂಡು ಬಂದಿದ್ದೇವೆ. ಸರ್ಕಾರ ನಮ್ಮ ಮನವಿಗೆ ಒಪ್ಪದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಎಚ್ಚರಿಕೆ ನೀಡಿದರು.  ಕುರುಬರಿಗೆ ಎಸ್​ಟಿ ಮೀಸಲಾತಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಡೆಸಲಾದ ಪಾದಯಾತ್ರೆ ಇಂದು ಅಂತ್ಯಗೊಂಡಿದ್ದು, ಫ್ರೀಡಂ ಪಾರ್ಕಿನಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು. ಕುರುಬ ಸಮುದಾಯದ ನಾಯಕರಾದ  ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್​.ಎಂ.ರೇವಣ್ಣ, ಹೆಚ್​.ವಿಶ್ವನಾಥ್​ ಮಾಜಿ ಸಚಿವರಾದ ಎಚ್ ಎಂ ರೇವಣ್ಣ,  ಬಂಡೆಪ್ಪ ಕಾಶಂಪುರ  ಸೇರಿ ಹಲವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಕಾಗಿನೆಲೆ ಶ್ರೀಗಳು, ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಪಾದಯಾತ್ರೆ ಇಂದು ಅಂತ್ಯವಾಗಿದೆ. 340 ಕಿಲೋಮೀಟರ್ ಯಾವುದೇ ತೊಂದರೆಯಿಲ್ಲದೆ ಪಾದಯಾತ್ರೆ ಮಾಡಲಾಗಿದೆ. ಹಾಲುಮತ ಸಮುದಾಯ ಜೇನುಗೂಡಂತೆ ಸೇರಿ ಹೋರಾಟ ಮಾಡುತ್ತಿದೆ. ಎಸ್​ಟಿ ಮೀಸಲಾತಿಗಾಗಿ ಪಾದಯಾತ್ರೆ ಮಾಡಲಾಗಿದೆ ಹೊರತು ರಾಜಕೀಯಕ್ಕಾಗಿ ಮಾಡಿದ ಹೋರಾಟವಲ್ಲ. ಪಾದಯಾತ್ರೆಯಲ್ಲಿ ಮಹಿಳೆಯರು ಸಹ ಉತ್ಸಾಹದಿಂದ ಭಾಗವಹಿಸಿದ್ದಾರೆ. ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಕುರುಬರ ಸಮಾವೇಶ "ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ" ಎಂಬಂತೆ ಎಲ್ಲರೂ ಭಾಗಿಯಾಗುವಂತೆ ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವನಾಥ್​, ಕುರುಬರು ವಿಶೇಷ ಸಂಸ್ಕೃತಿ ಹೊಂದಿದ ಸಮುದಾಯವರು. ವೃತ್ತಿ, ಸಂಸ್ಕಾರ, ಸಂಸ್ಕೃತಿ ಹೊಂದಿದ ವಿಶೇಷಣ ಸಮುದಾಯ. ಇದಕ್ಕಾಗಿಯೇ ಕುರುಬ ಸಮುದಾಯವನ್ನು ಎಸ್ ಟಿ ಸೇರಿಸಲು ಕೇಳುತ್ತಿದ್ದೇವೆ. ಈ ಬಗ್ಗೆ ಸ್ವಾತಂತ್ರ್ಯಪೂರ್ವದಿಂದ ಹೋರಾಟವಿದ್ದು, ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ.  ವೀರಶೈವ ಸಮುದಾಯವು ನಮ್ಮ‌ ಹೋರಾಟಕ್ಕೆ ದನಿ‌ಕೊಟ್ಟಿದ್ದಾರೆ. ನಮ್ಮಲ್ಲಿ‌ ಬಿಳಿಬಟ್ಟೆ ಧರಿಸಿದವರು ಬಹಳ‌ ಕಡಿಮೆ. ರಾಜಕೀಯ ಶಕ್ತಿಗಾಗಿ ಎಸ್ ಟಿ ಸೇರಿಸಬೇಕು ಎಂದು ಒತ್ತಾಯಿಸಿದರು.
Published by:Seema R
First published: