ಕುರುಬರ ಸಂಘದ ಚುನಾವಣೆ: ಸಿದ್ದರಾಮಯ್ಯ ಬೆಂಬಲಿಗರಿಗೆ ಭರ್ಜರಿ ಗೆಲುವು, ಈಶ್ವರಪ್ಪಗೆ ತೀವ್ರ ಮುಖಭಂಗ

ಸಂಘದಲ್ಲಿ ರಾಜಕೀಯ ಬೇಡ ಹೀಗಾಗಿ ಎಲ್ಲರನ್ನೂ ಅವಿರೋಧವಾಗಿಯೇ ಆಯ್ಕೆ ಮಾಡೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಒಲವು ತೋರಿದ್ದರು. ಆದರೆ, ಸಚಿವ ಕೆ.ಎಸ್‌. ಈಶ್ವರಪ್ಪ ಚುನಾವಣೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, 34 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಶ್ವರಪ್ಪ ಬೆಂಬಲಿಗರು ಒಂದೇ ಒಂದು ಸ್ಥಾನವನ್ನೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಸಿದ್ದರಾಮಯ್ಯ-ಈಶ್ವರಪ್ಪ.

ಸಿದ್ದರಾಮಯ್ಯ-ಈಶ್ವರಪ್ಪ.

  • Share this:
ಬೆಂಗಳೂರು (ಜೂನ್‌ 26); ಪ್ರದೇಶ ಕುರುಬರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಭರ್ಜರಿ ಗೆಲುವು ದಾಖಲಸಿದ್ದರೆ, ಆಡಳಿತ ಪಕ್ಷದ ಕೆ.ಎಸ್‌. ಈಶ್ವರಪ್ಪ ಬಣ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದೆ ಹೀನಾಯ ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಇಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ನಾನಾ ಹುದ್ದೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿ ಬಳ್ಳಾರಿ ಮೂಲದ ಕೃಷ್ಣ ಎಂಬವರು 83 ಮತಗಳೊಂದಿಗೆ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ (81 ಮತಗಳು) ಆಯ್ಕೆಯಾಗಿದ್ದರೆ, ಕಾರ್ಯಾಧ್ಯಕ್ಷರಾಗಿ ಮೈಸೂರು ಸುಬ್ಬಣ್ಣ (84 ಮತಗಳು)‌, ಖಜಾಂಚಿಯಾಗಿ ದೇವರಾಜು (84 ಮತಗಳು),  ಹಿರಿಯ ಉಪಾಧ್ಯಕ್ಷರಾಗಿ ಈರಣ್ಣ ಝಳಕಿ (83 ಮತಗಳು), ಜಗದೀಶ (78 ಮಗಳು), ಬಸವರಾಜ್ ಬಸಲಗುಂದಿ (75 ಮತಗಳು), ರೇಖಾ ಹುಲಿಯಪ್ಪಗೌಡ (85 ಮತಗಳು) ಆಯ್ಕೆಯಾಗಿದ್ದಾರೆ.

ಇನ್ನೂ ಸಂಘದ ಉಪಾಧ್ಯಕರಾಗಿ ಕೃಷ್ಣ ಕುಮಾರ್ (78 ಮತಗಳು), ಪುಟ್ಟಬಸವಯ್ಯ (78 ಮತಗಳು), ಮಿರ್ಜಾಪುರ ಮಹಾದೇವಪ್ಪ (76 ಮತಗಳು), ಎಂ.ಸಿ.ರಾಜಣ್ಣ (81 ಮತಗಳು), ವೆಂಕಟರಮಣಪ್ಪ(75 ಮತಗಳು) ಹಾಗೂ ಶಂಕರ ವಿಠೋಬ ಹೆಗಡೆ (79 ಮತಗಳು) ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಕಾರ್ಮಿಕರ ’ಭವಿಷ್ಯ ನಿಧಿ’ ಮೇಲಿನ ಬಡ್ಡಿದರ ಮತ್ತಷ್ಟು ಕಡಿತ; ದುಡಿಯುವ ವರ್ಗಕ್ಕೆ ಮತ್ತೊಂದು ಬರೆ

ಅಸಲಿಗೆ ಸಂಘದಲ್ಲಿ ರಾಜಕೀಯ ಬೇಡ ಹೀಗಾಗಿ ಎಲ್ಲರನ್ನೂ ಅವಿರೋಧವಾಗಿಯೇ ಆಯ್ಕೆ ಮಾಡೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಒಲವು ತೋರಿದ್ದರು. ಆದರೆ, ಸಚಿವ ಕೆ.ಎಸ್‌. ಈಶ್ವರಪ್ಪ ಚುನಾವಣೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಚುನಾವಣೆ ನಡೆಸಲೇಬೇಕಾಯ್ತು. ಆದರೆ, 34 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈಶ್ವರಪ್ಪ ಬೆಂಬಲಿಗರು ಒಂದೇ ಒಂದು ಸ್ಥಾನವನ್ನೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
First published: