ಹುಳಿಯಾರು ವಿವಾದವನ್ನು ಜೀವಂತವಾಗಿರಿಸಲು ಕುರುಬ ಸಮುದಾಯದ ಮುಖಂಡರ ಪ್ಲಾನ್​?

ಮುಖಂಡರು ರಾಜಕೀಯಕ್ಕೋಸ್ಕರ ಮಾಧುಸ್ವಾಮಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಮಾಧುಸ್ವಾಮಿ ಶ್ರೀಗಳ ಹಾಗೂ ಸಮುದಾಯದ ಕ್ಷಮಾಪಣೆ ಕೇಳಿಲ್ಲ ಶ್ರೀಗಳ ಮುಂದೆ ಹೋಗಿ ಕಣ್ಣೀರು ಸುರಿಸಿ ಸ್ವಾಮಿಜಿಗಳ ಮನಸ್ಸು ಕರಗುವ ಹಾಗೆ ವರ್ತನೆ ಮಾಡಿದ್ದಾರೆ ಅಷ್ಟೇ. ಆ ಮೂಲಕ ವಿವಾದ ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದ್ದಾರೆ.

Latha CG | news18-kannada
Updated:November 22, 2019, 8:40 PM IST
ಹುಳಿಯಾರು ವಿವಾದವನ್ನು ಜೀವಂತವಾಗಿರಿಸಲು ಕುರುಬ ಸಮುದಾಯದ ಮುಖಂಡರ ಪ್ಲಾನ್​?
ಕುರುಬ ಮುಖಂಡರು
  • Share this:
ಕನಕ ವೃತ್ತ ನಿರ್ಮಾಣ ವಿವಾದ ಮತ್ತೆ ಜೀವಂತ ಇರಿಸಲು ತೆರೆಮರೆ ಪ್ರಯತ್ನ ನಡೆಯುತ್ತಿದೆ. ಉಪಚುನಾವಣೆ ಮುಂದಿಟ್ಟುಕೊಂಡು ಕುರುಬ ಸಮುದಾಯದ ಹೋರಾಟ ನಡೆಸುತ್ತಿದೆಯಾ? ಇಂತಹ ಪ್ರಶ್ನೆ ಮೂಡುವಂತೆ ಮಾಡಿದೆ ಕರ್ನಾಟಕ ಪ್ರದೇಶ ಕುರುಬ ಸಂಘದ ನಡೆ. 

ರಾಜ್ಯ ರಾಜಕೀಯದಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗುವಂತೆ ಮಾಡಿತ್ತು ಹುಳಿಯಾರು ಕನಕ ವೃತ್ತ ನಾಮಫಲಕ ವಿವಾದ. ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿ ತಾಲೂಕಿನ ಹುಳಿಯಾರು ಸದ್ಯ ವಿವಾದದ ಕೇಂದ್ರ ಬಿಂದು. ಆರೋಪ, ಪ್ರತ್ಯಾರೋಪ, ಹೋರಾಟ. ಬಂದ್ ನಡುವೆ ವಿವಾದಿತ ಸ್ಥಳದಲ್ಲಿ ಹೊಸ ಕನಕ ವೃತ್ತದ ನಾಮಫಲಕ ಪ್ರತಿಷ್ಠಾಪಿಸಿ ತಾತ್ಕಾಲಿಕ ಸುಖಾಂತ್ಯ ಕೂಡ ಕಂಡಿದೆ.

ಈ ನಡುವೆ ಕರ್ನಾಟಕ ಕುರುಬ ಸಂಘದ  ಮುಖಂಡರ ನಡೆ ಭಿನ್ನವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದವನ್ನು ಜೀವಂತವಾಗಿರುವಂತೆ ಜಾಣ ನಡೆಗೆ ಮುಂದಾಗಿದೆ. ತುಮಕೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಹಳೆಯದನ್ನೆಲ್ಲ ಮತ್ತೆ ಕೆದಕಿ ಬಿಜೆಪಿ ಪಕ್ಷವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ.

‘ಮಹಾ’ ಸರ್ಕಸ್ ಅಂತ್ಯ; ಉದ್ಧವ್ ಠಾಕ್ರೆ ಮುಂದಿನ ಸಿಎಂ; ಒಂದಾದ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್; ನಾಳೆ ಅಧಿಕೃತ ಘೋಷಣೆ

ಮುಖಂಡರು ರಾಜಕೀಯಕ್ಕೋಸ್ಕರ ಮಾಧುಸ್ವಾಮಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಮಾಧುಸ್ವಾಮಿ ಶ್ರೀಗಳ ಹಾಗೂ ಸಮುದಾಯದ ಕ್ಷಮಾಪಣೆ ಕೇಳಿಲ್ಲ ಶ್ರೀಗಳ ಮುಂದೆ ಹೋಗಿ ಕಣ್ಣೀರು ಸುರಿಸಿ ಸ್ವಾಮಿಜಿಗಳ ಮನಸ್ಸು ಕರಗುವ ಹಾಗೆ ವರ್ತನೆ ಮಾಡಿದ್ದಾರೆ ಅಷ್ಟೇ. ಆ ಮೂಲಕ ವಿವಾದ ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ಮಾಧುಸ್ವಾಮಿ ಭಾವುಕರಾಗಿದ್ದೂ ನಾಟಕ ಅನ್ನುವ ರೀತಿ ಹೇಳಿಕೆ ಕೊಟ್ಟಿರುವ ರಾಮಚಂದ್ರಪ್ಪ, ಕುರುಬ ಸಮಾಜದ ಮೇಲೆಯೇ ದಬ್ಬಾಳಿಕೆ ನಡೆಸುತಿದ್ದಾರೆ. ಕೆಲ ದಿನಗಳ ಹಿಂದೆ ಸೊಗಡು ಶಿವಣ್ಣ ಸಿದ್ದರಾಮಯ್ಯರಿಗೆ ಅವಹೇಳನ ಮಾಡಿದ್ದರು. ಕೆಲ ತಿಂಗಳ ಹಿಂದೆ ಮಾಜಿ ಶಾಸಕ ಸುರೇಶ್ ಗೌಡ ಕುರುಬ ಸಮುದಾಯದ ಪೊಲೀಸ್ ಪೇದೆಗೆ ಅವಮಾನ ಮಾಡಿದ್ದರು. ಈಗ ಸಚಿವ ಮಾಧುಸ್ವಾಮಿ ಸರದಿ ಅಂತಾ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ವಿಶ್ವನಾಥ್​ ಗೆದ್ದರೆ ತಾನೇ ಮಂತ್ರಿಯಾಗೋದು?; ಮಾಜಿ ಸಚಿವ ಹೆಚ್​​​.ಸಿ.ಮಹದೇವಪ್ಪ ಲೇವಡಿಕನಕ ಗುರುಪೀಠವೊಂದಕ್ಕೆ ಬಿಜೆಪಿ ಸರ್ಕಾರ ಅನುದಾನ ಕೊಟ್ಟಿಲ್ಲ. ಎಲ್ಲಾ ಪ್ರಾಧಿಕಾರಕ್ಕೂ ಹಣ ಬಿಡುಗಡೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಒಬ್ಬರೇ ಕನಕ ಪೀಠಕ್ಕೆ ಅನುದಾನ ಕೊಟ್ಟವರಲ್ಲ. ಅವರಿಗಿಂತ ಹಿಂದಿನ ಮತ್ತು ಮುಂದಿನ ಎಲ್ಲಾ ಮುಖ್ಯಮಂತ್ರಿಗಳು ಅನುದಾನ ಕೊಟ್ಟಿದ್ದಾರೆ. ಅದನ್ನು ಸಿಎಂ ಯಡಿಯೂರಪ್ಪ ತಾನು ಕೊಟ್ಟಿದ್ದೇನೆ ಎಂದು ವಿಶೇಷವಾಗಿ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಕನಕ ಜಯಂತಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಆಗಿರುವುದು 1975 ರಲ್ಲಿ. ಅಂದಿನಿಂದ ಸರ್ಕಾರ ಜಯಂತಿ ಆಚರಣೆ ಮಾಡಿಕೊಂಡು ಬಂದಿದೆ. ಜಿಜೆಪಿ ಸರ್ಕಾರ ಜಯಂತಿ ದಿನ ರಜೆ ಘೋಷಣೆ ಮಾಡಿದ್ದು ಅಷ್ಟೆ ಬಿಜೆಪಿ ಸರ್ಕಾರ ಅಂತಾ ಹುರಿಯೋ ಬೆಂಕಿಗೆ ತುಪ್ಪ ಸುರಿದಿದೆ.

(ವರದಿ: ವಿಠಲ್)

First published: November 22, 2019, 8:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading