ಹುಬ್ಬಳ್ಳಿ: ಚುನಾವಣೆ (Karnataka Assembly Election 2023) ರಣಕಹಳೆ ಮೊಳಗಿಸಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Praja Dhwani Yatra) ನಡೆಸುತ್ತಿದೆ. ಪ್ರಜಾಧ್ವನಿ ಯಾತ್ರೆಗೂ ಮುನ್ನವೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಹೈಕಮಾಂಡ್ (Congress High Command) ಮೇಲೆ ಒತ್ತಡ ಹಾಕಿದ್ದರು. ಆದರೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿಲ್ಲ. ಅಂತಿಮವಾಗಿ ಬೆಳಗಾವಿ (Belagavi) ಮೂಲಕ ಕಾಂಗ್ರೆಸ್ ತನ್ನ ಯಾತ್ರೆಯನ್ನು ಮುಂದುವರಿಸಿದೆ. ಉತ್ತರದಲ್ಲಿ ಸಿದ್ದರಾಮಯ್ಯ ಮತ್ತು ದಕ್ಷಿಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಇದೀಗ ಇದೇ ಮೊದಲ ಬಾರಿಗೆ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ನಿಗಧಿಯಾಗಿದ್ದ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆಯಾಗಿದೆ. ಕಾರಣ ಕುಂದಗೋಳ (Kundagol Constituency) ವಿಧಾನಸಭಾ ಕ್ಷೇತ್ರದಲ್ಲಿನ ಭಿನ್ನಮತ.
ಕುಸುಮಾವತಿ ಶಿವಳ್ಳಿ (ಕುಸುಮಾ ಶಿವಳ್ಳಿ – Kusuma Shivalli) ಕುಂದಗೋಳ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕಿಯಾಗಿದ್ದಾರೆ. ಆದರೆ ಈ ಬಾರಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡಬಾರದು ಎಂಬ ಮಾತುಗಳು ಕೈ ಅಂಗಳದಲ್ಲಿಯೇ ಕೇಳಿ ಬರುತ್ತಿವೆ. ಇದರ ಜೊತೆಗೆ ಕುಂದಗೋಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗಿದೆ.
ಭಿನ್ನಮತ ಶಮನಕ್ಕೆ ರಾಯರೆಡ್ಡಿ ಎಂಟ್ರಿ
ಕುಂದಗೋಳ ಕಾಂಗ್ರೆಸ್ನಲ್ಲಿ ಉಂಟಾಗಿದ್ದ ಭಿನ್ನಮತ ಶಮನಕ್ಕೆ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಎಂಟ್ರಿ ಕೊಟ್ಟಿದ್ದರು. ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕುಸುಮಾವತಿ ಶಿವಳ್ಳಿ ಅವರ ಜೊತೆಯಲ್ಲಿ ಭಾನುವಾರ ಸಂಜೆ ಬಸವರಾಜ್ ರಾಯರೆಡ್ಡಿ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದರು.
ಕುಸುಮಾ ಶಿವಳ್ಳಿ ಟಿಕೆಟ್ ನೀಡಿದಂತೆ ಒತ್ತಾಯ
ಕುಂದಗೋಳ ಕಾಂಗ್ರೆಸ್ ಕಾರ್ಯಕರ್ತರ ಒಂದು ಬಣ ಸಭೆಯದುದ್ದಕ್ಕೂ ಕುಸುಮಾವತಿ ಶಿವಳ್ಳಿ ಹಾಗೂ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿ ಬಂದಿತ್ತು. ಇದೇ ಪ್ರಜಾಧ್ವನಿ ಯಾತ್ರೆಯನ್ನು ಕುಸುಮಾವತಿ ಶಿವಳ್ಳಿ ನೇತೃತ್ವದಲ್ಲಿ ತೆಗೆದುಕೊಂಡು ಹೋಗಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದರು ಎನ್ನಲಾಗಿದೆ.
ಶಮನವಾಗದ ಭಿನ್ನಮತ, ಯಾತ್ರೆ ಮುಂದೂಡಿಕೆ
ಶಿವಳ್ಳಿ ಕುಟುಂಬದ ಹೊರತಾಗಿ ಬೇರೆ ಯಾರಿಗಾದರೂ ಟಿಕೆಟ್ ನೀಡಿ. ಅದಕ್ಕೆ ನಮ್ಮ ವಿರೋಧವಿಲ್ಲ. ಅವರ ಪರವಾಗಿ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ಬಸವರಾಜ್ ರಾಯರೆಡ್ಡಿ ಬಳಿ ಸ್ಥಳೀಯ ಕಾರ್ಯಕರ್ತರು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಭೆಯಲ್ಲಿ ಭಿನ್ನಮತ ಶಮನವಾಗದ ಹಿನ್ನೆಲೆ ಫೆಬ್ರವರಿ 16ರಂದು ಕುಂದಗೋಳದಲ್ಲಿ ನಿಗಧಿಯಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ತಾತ್ಕಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.
ರಾಮುಲು ವಿರುದ್ಧ ರೆಡ್ಡಿ ಬೇಸರ
ಶ್ರೀರಾಮುಲುವನ್ನು ಮಗುವಿನಂತೆ ನೋಡಿಕೊಂಡಿದ್ದೆ. ಆದರೆ ಈಗ.. ಎನ್ನುವ ಮೂಲಕ ಜನಾರ್ದ ರೆಡ್ಡಿಯವರು ರಾಮುಲು ವಿರುದ್ಧ ಮೊದಲ ಬಾರಿಗೆ ಮಾತಾಡಿದ್ದಾರೆ.
1999ರಲ್ಲಿ ಶ್ರೀರಾಮುಲುರನ್ನ ಗೆಲ್ಲಿಸಿದ್ದೆ. ಆದರೆ, ಈಗ ನಮ್ಮವರೇ ನನ್ನನ್ನು ಬಳ್ಳಾರಿಯಲ್ಲಿ ಇರದಂತೆ ಮಾಡಿದ್ರು. ನಾನು ಬಳ್ಳಾರಿಯಲ್ಲಿ ರಾಜಕೀಯವಾಗಿ ಬೆಳೆಯುತ್ತೇನೆ ಕಾರಣಕ್ಕೆ ನಮ್ಮವರು, ದೊಡ್ಡವರು ಸೇರಿ ಬಳ್ಳಾರಿಯಿಂದ ಹೊರ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Namma Metro: ಮೆಟ್ರೋ ಟ್ರ್ಯಾಕ್ ಮೇಲೆ ಇಳಿದ ಇಬ್ಬರು; ಸಂಚಾರದಲ್ಲಿ ವ್ಯತ್ಯಯ
ಕಾಂಗ್ರೆಸ್ಗೆ ಸೇರಿದರೆ ಜೈಲಿಗೆ ಕಳುಹಿಸುವುದಿಲ್ಲ ಎಂದಿದ್ದರು. ಆದರೆ ನಾನು ಬಿಜೆಪಿ ಬಿಡಲಿಲ್ಲ. ರಾಜ್ಯದಲ್ಲಿ ನಾನೇ ಸಿಎಂ ಆಗುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ, ಸಿಎಂ ಆಗುವವರನ್ನು ಮಾಡುತ್ತೇನೆ. 2024ರಲ್ಲಿ ಬಳ್ಳಾರಿಯಲ್ಲಿ ನಿತ್ಯ 10 ವಿಮಾನಗಳು ಬರುವಂತೆ ಮಾಡುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ