• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಬೆಂಗಳೂರು ಅಂಗಳ ತಲುಪಿದ ಕುಂದಗೋಳ ಕಾಂಗ್ರೆಸ್ ಭಿನ್ನಮತ; ಕುಸುಮಾ ಶಿವಳ್ಳಿಗೆ ತಪ್ಪುತ್ತಾ ಟಿಕೆಟ್?

Karnataka Politics: ಬೆಂಗಳೂರು ಅಂಗಳ ತಲುಪಿದ ಕುಂದಗೋಳ ಕಾಂಗ್ರೆಸ್ ಭಿನ್ನಮತ; ಕುಸುಮಾ ಶಿವಳ್ಳಿಗೆ ತಪ್ಪುತ್ತಾ ಟಿಕೆಟ್?

ಕುಸುಮಾ ಶಿವಳ್ಳಿ, ಕಾಂಗ್ರೆಸ್ ಶಾಸಕಿ

ಕುಸುಮಾ ಶಿವಳ್ಳಿ, ಕಾಂಗ್ರೆಸ್ ಶಾಸಕಿ

ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಅಂಥದ್ದೇನೂ ಇಲ್ಲ ಅಂತಾರೆ ಶಾಸಕಿ ಕುಸುಮಾವತಿ ಶಿವಳ್ಳಿ.

  • Share this:

ಧಾರವಾಡ: ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ (Kundgol Constituency) ಕಾಂಗ್ರೆಸ್​​ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಾಲಿ ಶಾಸಕರಿಗೆ ರೆಬಲ್ ಟೀಂ ಸೆಡ್ಡು ಹೊಡೆದಿದೆ‌. ಯಾವುದೇ ಕಾರಣಕ್ಕೂ ಶಾಸಕಿ ಕುಸುಮಾ ಶಿವಳ್ಳಿಗೆ (MLA Kusuma Shivalli) ಟಿಕೆಟ್​ ಕೊಡುವಂತಿಲ್ಲ. ನಮ್ಮಲ್ಲಿಯೇ ಒಬ್ಬರಿಗೆ ಟಿಕೆಟ್​ ಕೊಟ್ಟರೆ ಗೆಲ್ಲಿಸಿ ತೋರಿಸ್ತೇವೆ ಅಂತ ಬಂಡಾಯ ನಾಯಕರು ಒಕ್ಕಟ್ಟಿನ ಮಂತ್ರ ಜಪಿಸಿದ್ದಾರೆ. ಕುಂದಗೋಳ ಕೈ ಭಿನ್ನಮತ ಬೆಂಗಳೂರಿಗೆ ಶಿಫ್ಟ್ ಆಗಿದೆ. 11 ಜನರ ರೆಬಲ್ ಗ್ಯಾಂಗ್ ರಾಜಧಾನಿಯಲ್ಲಿ ಬೀಡುಬಿಟ್ಟಿದೆ. ಮೊನ್ನೆ ಮಾಜಿ ಸಚಿವ ಬಸವರಾಜ್ ರಾಯರಡ್ಡಿ (Former Minister Basavaraj Rayareddy) ನೇತೃತ್ವದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತ್ತು. ಆದರೂ ಕುಂದಗೋಳ ಕ್ಷೇತ್ರದ ಭಿನ್ನಮತ ಶಮನವಾಗಿಲ್ಲ. ಇದೀಗ ಭಿನ್ನಮತ ಬೆಂಗಳೂರು ಅಂಗಳ ತಲುಪಿದೆ.


ಬೆಂಗಳೂರಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಶತಾಯಗತಾಯ ಹಾಲಿ ಶಾಸಕಿಗೆ ಟಿಕೆಟ್ ತಪ್ಪಿಸಲು ತೀವ್ರ ಕಸರತ್ತು ನಡೆದಿದೆ. ಶಾಸಕಿ ಕುಸುಮಾವತಿ ಶಿವಳ್ಳಿಗೆ (ಕುಸುಮಾ ಶಿವಳ್ಳಿ) ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು. ಈ ಸಲ ಹೊಸಬರಿಗೆ ಟಿಕೆಟ್ ಕೊಡಬೇಕೆಂದು ಬೇಡಿಕೆ ಇಡಲಾಗಿದೆ. ಜೊತೆಗೆ ಶಿವಳ್ಳಿ ಕುಟುಂಬಕ್ಕೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿದ್ದಾರೆ.


ಟಿಕೆಟ್ ಬಯಸಿ 16 ಜನರಿಂದ ಅರ್ಜಿ


ಈ ಬಾರಿ ಟಿಕೆಟ್ ಬಯಸಿ 16 ಜನರಿಂದ ಅರ್ಜಿ ಹಾಕಿದ್ದು, ಈ ಪೈಕಿ 11 ಜನ ಟಿಕೆಟ್ ಆಕಾಂಕ್ಷಿಗಳಿಂದ ಸಿಂಡಿಕೇಟ್‌ ರಚನೆ ಮಾಡಿಕೊಂಡಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋ ಭರವಸೆ ನೀಡಲಾಗಿದೆ. ಹೀಗಾಗಿ ಕುಂದಗೋಳ ಕಾಂಗ್ರೆಸ್ ಕಚ್ಚಾಟ ತಾರಕಕ್ಕೇರಿದೆ. ತೇಪೆ ಹಾಕಲು ಯತ್ನಿಸಿದರೂ ಫಲ ಸಿಕ್ಕಿಲ್ಲ.
ಟಿಕೆಟ್ ಸಿಗುತ್ತೆ ಅಂತಾರೆ ಕುಸುಮಾ ಶಿವಳ್ಳಿ


ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಅಂಥದ್ದೇನೂ ಇಲ್ಲ ಅಂತಾರೆ ಶಾಸಕಿ ಕುಸುಮಾವತಿ ಶಿವಳ್ಳಿ. ನನ್ನ ಜೊತೆ ಇತರರೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಒಂದಷ್ಟು ಗೊಂದಲವಾಗಿದೆ. ಅದೆಲ್ಲವೂ ಸರಿಹೋಗುತ್ತೆ. ಮುಂದಿನ ಚುನಾವಣೆಯಲ್ಲಿಯೂ ನನಗೆ ಟಿಕೆಟ್ ಸಿಗುತ್ತೆ ಎಂದು ಕುಸುಮಾ ಶಿವಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಕುಸುಮಾ ಶಿವಳ್ಳಿ, ಕಾಂಗ್ರೆಸ್ ಶಾಸಕಿ


ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರೋದ್ರಿಂದ ಒಂದಷ್ಟು ಭಿನ್ನಾಭಿಪ್ರಾಯ ಇರೋದು ಸಹಜ. ಅದೆಲ್ಲವನ್ನೂ‌ ಸರಿಪಡಿಸುತ್ತೇವೆ. ಟಿಕೆಟ್ ಯಾರಿಗೆ ಕೊಡ್ತಾರೆ ಅನ್ನೋದನ್ನ ಪಕ್ಷದ ನಾಯಕರು ತೀರ್ಮಾನಿಸ್ತಾರೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.


ಅಶ್ವತ್ಥ್  ನಾರಾಯಣ್ ವಿರುದ್ಧ ರಾಯರೆಡ್ಡಿ ಕಿಡಿ


ಉನ್ನತ ಶಿಕ್ಷಣ ಸಚಿವ ಅಶ್ವತ್ದ್ ನಾರಾಯಣ ಅವರನ್ನ ಕೂಡಲೇ ಮಂತ್ರಿಸ್ಥಾನದಿಂದ ವಜಾ ಮಾಡುವಂತೆ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಒಳ್ಳೆಯ ಸಂಸ್ಕೃತಿ ಗೊತ್ತಿಲ್ಲ ಅವರು ವಾಮವಾರ್ಗದ ರಾಜಕೀಯ ಮಾಡುವರು. ಇತ್ತೀಚಿಗೆ ಅವರು ಬಹಳಷ್ಟು ಕೆಟ್ಟ ಭಾಷೆ ಬಳಸುತ್ತಿದ್ದಾರೆ ಇದು ಅತ್ಯಂತ ಗುಂಡಾ ಮತ್ತು ಅಸಭ್ಯ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: Good News: ಹುಬ್ಬಳ್ಳಿ-ಧಾರವಾಡ ನಾಗರಿಕರಿಗೆ ಒಂದೊಳ್ಳೆ ಸುದ್ದಿ, ಈ ಸಮಸ್ಯೆಗೆ ಫುಲ್​ ಸ್ಟಾಪ್!


ಮುಗಿಸೋದು ಅಂದ್ರೆ ಜೀವದಿಂದ ತೆಗಿರಿ ಎನ್ನುವ ಅರ್ಥ ಈ ರೀತಿಯ ಪ್ರಚೋದನೆ ನೀಡುವುದು. ಇದು ಐಪಿಸಿ 302 ಆಗುತ್ತದೆ ಇದು ಕ್ರಿಮಿನಲ್ ಮೈಂಡ್. ಅಶ್ವಥ್ ನಾರಾಯಣ್ ಮಂತ್ರಿಯಾಗುವಾಗ ರಾಗ ದ್ವೇಷ ಮಾಡಲ್ಲ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಈಗ ಅದನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಇದನ್ನೂ ಓದಿ:  Karnataka Budget 2023 Live Updates: ಚುನಾವಣೆಗೆ ದಿನಗಣನೆ, ಜನಸ್ನೇಹಿ ಬಜೆಟ್ ಘೋಷಣೆಯ ನಿರೀಕ್ಷೆ


ಯಾವ ನೈತಿಕತೆ ಇದೆ?


ಇದು ಯಾವ ನೈತಿಕತೆ? ಪ್ರಮಾಣದ ವಚನ ಮರೆತವರು ಅವರ ಸ್ಥಾನಕ್ಕೆ ವಜಾ ಆಗಲು ಅರ್ಹರು ಇದನ್ನು ರಾಜ್ಯಪಾಲರು ಗಮನಿಸಿ ಅವರನ್ನು ವಜಾ ಮಾಡಬೇಕು. ಸಿಎಂ ಬೊಮ್ಮಾಯಿಯವರು ಇದನ್ನು ಹೇಗೆ ನೋಡುತ್ತಿದ್ದಾರೆ ಎಂದು ರಾಯರೆಡ್ಡಿ ಪ್ರಶ್ನಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು