ಕುಂದಗೋಳ, ಚಿಂಚೋಳಿಯಲ್ಲಿ ಒಟ್ಟು 25 ಅಭ್ಯರ್ಥಿಗಳ ಭವಿಷ್ಯ ಭಾನುವಾರ ನಿರ್ಧಾರ; ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಹಿ ಗುರುತು

ಕುಂದಗೋಳದಲ್ಲಿ 8 ಹಾಗೂ ಚಿಂಚೋಳಿಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 3.83 ಲಕ್ಷ ಜನರು ಮತ ಚಲಾಯಿಸುವ ಅವಕಾಶ ಹೊಂದಿದ್ದಾರೆ.

news18
Updated:May 17, 2019, 10:28 PM IST
ಕುಂದಗೋಳ, ಚಿಂಚೋಳಿಯಲ್ಲಿ ಒಟ್ಟು 25 ಅಭ್ಯರ್ಥಿಗಳ ಭವಿಷ್ಯ ಭಾನುವಾರ ನಿರ್ಧಾರ; ಮತದಾರರ ಎಡಗೈ ಮಧ್ಯದ ಬೆರಳಿಗೆ ಶಾಹಿ ಗುರುತು
ಸಾಂದರ್ಭಿಕ ಚಿತ್ರ
news18
Updated: May 17, 2019, 10:28 PM IST
ಬೆಂಗಳೂರು: ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಗಳಿಗೆ ಕ್ಷಣಗಣನೆ ಶುರುವಾಗಿದೆ. ಇವತ್ತು ಶುಕ್ರವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದೆ. ಇವತ್ತು ಬೆಳಗ್ಗೆಯಿಂದಲೇ ಧ್ವನಿ ವರ್ಧಕ ನಿಷೇಧ ಇರಲಿದೆ. ಮೇ 19, ಭಾನುವಾರ ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಇದೆ. ಲೋಕಸಭೆ ಚುನಾವಣೆಯ ವೇಳೆ ಮತದಾನ ಮಾಡುವ ವ್ಯಕ್ತಿಗಳ ಎಡಗೈ ತೋರು ಬೆರಳಿಗೆ ಶಾಹಿ ಹಾಕಲಾಗಿತ್ತು. ಈಗ ವಿಧಾನಸಭೆ ಉಪಚುನಾವಣೆಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಸಾಧ್ಯವಾದ ಶಾಹಿಯನ್ನು ಹಾಕಲು ನಿರ್ಧರಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಎರಡೂ ಕ್ಷೇತ್ರಗಳ ಮತದಾರರು, ಅಭ್ಯರ್ಥಿಗಳು, ವಶಪಡಿಸಿಕೊಂಡ ನಗದು ಇತ್ಯಾದಿ ವಿವರ ನೀಡಿದ್ಧಾರೆ.

ಇದನ್ನೂ ಓದಿ: ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರದಿಂದ ಬೆಲೆ ಏರಿಕೆ ಅಸ್ತ್ರ; ಮತ್ತಷ್ಟು ಹೊರೆಯಾಗಲಿದೆ ವಿದ್ಯುತ್​, ನೀರಿನ ವೆಚ್ಚ..!

ಕುಂದಗೋಳ ಕ್ಷೇತ್ರದ ವಿವರ:
ಕಣದಲ್ಲಿರುವ ಅಭ್ಯರ್ಥಿಗಳು: 8
ಒಟ್ಟು ಮತದಾರರು: 1,89,437ಪುರುಷ ಮತದಾರರು: 97,526
ಮಹಿಳಾ ಮತದಾರರು: 91,907
ಹೊಸ ಮತದಾರರು: 4,705
ಮತಕೇಂದ್ರಗಳು: 214
ಸೂಕ್ಷ್ಮ ಮತಗಟ್ಟೆಗಳು: 25

ಚಿಂಚೋಳಿ ಕ್ಷೇತ್ರದ ವಿವರ:
ಕಣದಲ್ಲಿರುವ ಅಭ್ಯರ್ಥಿಗಳು: 17
ಒಟ್ಟು ಮತದಾರರು: 1,93,871
ಪುರುಷ ಮತದಾರರು: 99,047
ಮಹಿಳಾ ಮತದಾರರು: 94,808
ಹೊಸ ಮತದಾರರು: 3,203
ಮತಕೇಂದ್ರಗಳು: 241
ಸೂಕ್ಷ್ಮ ಮತಗಟ್ಟೆಗಳು: 60

ಇದನ್ನೂ ಓದಿ: ಮಾಜಿ-ಹಾಲಿ ಸಿಎಂ ಟ್ವೀಟ್​ ವಾರ್; ಹೇಳಿಕೆ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಲ್ಪಿಸಿದ ಕುಮಾರಸ್ವಾಮಿ..!

ಈ ಎರಡೂ ಕ್ಷೇತ್ರಗಳಲ್ಲಿ ಒಟ್ಟಾರೆ 1,016 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹಾಗೆಯೇ ಒಟ್ಟು 4,340 ದಿವ್ಯಾಂಗ ಮತದಾರರಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಎರಡು ಕ್ಷೇತ್ರಗಳಲ್ಲಿ ಒಟ್ಟು 48.82 ಲಕ್ಷ ನಗದು ಹಣ, 82,715 ರೂ ಮೊತ್ತದ ಮದ್ಯ, 30 ಲಕ್ಷ ಮೌಲ್ಯದ 1.11 ಕಿಲೋ ಅಮೂಲ್ಯ ಲೋಹಗಳು ಸೇರಿ ಒಟ್ಟಾರೆ 79.64 ಲಕ್ಷ ಮೊತ್ತದ ನಗದು, ಚಿನ್ನಾಭರಣ ಇತ್ಯಾದಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳು ನೀಡಿದ್ದಾರೆ.

ಕುಂದಗೋಳದಲ್ಲಿ 2 ಪಕ್ಷಗಳ ಅಭ್ಯರ್ಥಿಗಳಿದ್ದರೆ, ಚಿಂಚೋಳಿಯಲ್ಲಿ ಬಿಜೆಪಿ, ಕಾಂಗ್ರೆಸ್, ಬಿಎಸ್​ಪಿ ಸೇರಿ 6 ಪಕ್ಷಗಳು ಅಭ್ಯರ್ಥಿಗಳನ್ನ ಹಾಕಿವೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇದೆ. ಕುಂದಗೋಳದಲ್ಲಿ ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ವಿರುದ್ಧ ಬಿಜೆಪಿಯ ಚಿಕ್ಕನಗೌಡ್ರ ಅವರು ತೀವ್ರ ಸ್ಪರ್ಧೆ ನೀಡಿದ್ದಾರೆ. ಚಿಂಚೋಳಿಯಲ್ಲಿ ಉಮೇಶ್ ಜಾಧವ್ ತಮ್ಮ ಪುತ್ರ ಅವಿನಾಶ್ ಜಾಧವ್ ಅವರಿಗೆ ಬಿಜೆಪಿಯ ಟಿಕೆಟ್ ಕೊಡಿಸಿ ನಿಲ್ಲಿಸಿದ್ದಾರೆ. ಅವರಿಗೆ ಎದುರಾಗಿ ಕಾಂಗ್ರೆಸ್​ನ ಸುಭಾಶ್ ರಾಠೋಡ ಕಣದಲ್ಲಿದ್ದಾರೆ.

ಇದನ್ನೂ ಓದಿ: ಸಿಎಂ ಖುರ್ಚಿ ಯಾವುದೇ ಅಂಗಡಿಯಲ್ಲಿ ಖರೀದಿಗೆ ಸಿಗಲ್ಲ: ಸಿಎಂ ಬದಲಾವಣೆ ಸುದ್ದಿ ತಳ್ಳಿಹಾಕಿದ ಡಿಕೆ ಶಿವಕುಮಾರ್

ಕುಂದಗೋಳದಲ್ಲಿ ಕಣದಲ್ಲಿರುವ 8 ಅಭ್ಯರ್ಥಿಗಳು:
1) ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್
2) ಎಸ್.ಐ. ಚಿಕ್ಕನಗೌಡ್ರ, ಬಿಜೆಪಿ
3) ಭಂಡೀವಾಡ ಶೆಟ್ಟೆಪ್ಪ, ಪಕ್ಷೇತರ
4) ತುಳಸಪ್ಪ ದಾಸರ, ಪಕ್ಷೇತರ
5) ರಾಜು ನಾಯಕವಾದಿ, ಪಕ್ಷೇತರ
6) ಶ್ರೀಮತಿ ಗೋನಿ ಶೈಲಾ ಸುರೇಶ್, ಪಕ್ಷೇತರ
7) ಸಿದ್ದಪ್ಪ ಸತ್ಯಪ್ಪ ಗೋಡಿ, ಪಕ್ಷೇತರ
8) ಸೋಮಣ್ಣ ಮೇಟಿ, ಪಕ್ಷೇತರ

ಇದನ್ನೂ ಓದಿ: ಖರ್ಗೆ ಅವಕಾಶ ವಂಚಿತರಾಗಿದ್ದು ನಿಜ; ಆದರೆ ಈಗ ದಲಿತ ಸಿಎಂ ವಿಚಾರ ಅಪ್ರಸ್ತುತ; ಮುನಿಯಪ್ಪ

ಚಿಂಚೋಳಿಯಲ್ಲಿ ಕಣದಲ್ಲಿರುವ 17 ಅಭ್ಯರ್ಥಿಗಳು:
1) ಡಾ| ಅವಿನಾಶ ಜಾಧವ, ಬಿಜೆಪಿ
2) ಗೌತಮ ಬೊಮ್ಮಳ್ಳಿ, ಬಿಎಸ್​ಪಿ
3) ಸುಭಾಷ್ ವಿ. ರಾಠೋಡ, ಕಾಂಗ್ರೆಸ್
4) ವೆಂಕಟೇಶ್ವರ ಮಹಾ ಸ್ವಾಮೀಜಿ, ಹಿಂದೂಸ್ಥಾನ್ ಜನತಾ ಪಾರ್ಟಿ
5) ಮಾರುತಿ ಗಂಜಗಿರಿ, ಬಹುಜನ ಮುಕ್ತಿ ಪಾರ್ಟಿ
6) ವಿಜಯ ಜಾಧವ, ಸರ್ವ ಜನತಾ ಪಾರ್ಟಿ
7) ದೀಪಾ ಮಾಳಗಿ, ಪಕ್ಷೇತರ
8) ದೊಡ್ಡಮನಿ ನಾಗೇಂದ್ರಪ್ಪ, ಪಕ್ಷೇತರ
9) ಪ್ರವೀಣಕುಮಾರ್ ಬೆಳ್ಳುಂಡಗಿ, ಪಕ್ಷೇತರ
10) ಭಾಗ್ಯ ಸಂತೋಷ ತಳವಾರ, ಪಕ್ಷೇತರ
11) ಡಾ|| ಮಲ್ಲಿಕಾರ್ಜುನ ಎನ್. ಗಾಜರೆ, ಪಕ್ಷೇತರ
12) ರಮೇಶ್ ಚವ್ಹಾಣ, ಪಕ್ಷೇತರ
13) ಭೋವಿ ವಿಶ್ವೇಶ್ವರಯ್ಯ, ಪಕ್ಷೇತರ
14) ಶಾಮರಾವ್ ಗಂಗಾರಾಮ್, ಪಕ್ಷೇತರ
15) ಶಾಮುರಾವ್ ಚಂದ್ರಪ್ಪ ದೇಗಲಮಡಿ, ಪಕ್ಷೇತರ
16) ಶಾಮರಾವ ಮಲ್ಲೇಶಪ್ಪ ಹೇರೂರ, ಪಕ್ಷೇತರ
17) ಹನುಮಂತ ರಾಮಾನಾಯ್ಕ, ಪಕ್ಷೇತರ

(ವರದಿ: ಶ್ಯಾಮ್ ಎಸ್.)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಟ್​ನಲ್ಲೂ ಹಿಂಬಾಲಿಸಿ
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ