ಕರ್ನಾಟಕದ ಕುಂದಗೋಳ ಸೇರಿ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೇ 19ಕ್ಕೆ ನಿಗದಿ

ಸಚಿವ ಸಿ.ಎಸ್​. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರ, ಪಣಜಿ ವಿಧಾನಸಭಾ ಕ್ಷೇತ್ರ ಸೇರಿ ದೇಶಾದ್ಯಂತ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದೆ.

G Hareeshkumar | news18
Updated:April 9, 2019, 6:17 PM IST
ಕರ್ನಾಟಕದ ಕುಂದಗೋಳ ಸೇರಿ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೇ 19ಕ್ಕೆ ನಿಗದಿ
ಕೇಂದ್ರ ಚುನಾವಣಾ ಆಯೋಗ
G Hareeshkumar | news18
Updated: April 9, 2019, 6:17 PM IST
ನವದೆಹಲಿ (ಏ.09) : ಸಚಿವ ಸಿ.ಎಸ್​. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಇತ್ತೀಚೆಗೆ ನಿಧನ ಹೊಂದಿದ ಗೋವಾ ಸಿಎಂ ಮನೋಹರ್​ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರ ಸೇರಿ ದೇಶಾದ್ಯಂತ ಒಟ್ಟು 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದೆ.

ಈ ಕುರಿತು ಮಂಗಳವಾರ ಅಧಿಸೂಚನೆ ಹೊರಡಿಸಿರುವ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡಿನ ಸೂಲೂರು, ಅರ್ವಾಕುರಿಚ್ಚಿ, ತಿರುಪರಾನ್​ಕುಂದರಂ ಮತ್ತು ಒಟ್ಟಾಪಿದರಂ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದೆ.

ಈ ಐದು ಕ್ಷೇತ್ರಗಳ ಉಪಚುನಾವಣೆಗೆ ಏ. 22ರಂದು ಗೆಜೆಟ್​ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಏ. 29 ಕೊನೇ ದಿನವಾಗಿದೆ. ಏ. 30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 2 ಕೊನೆಯ ದಿನವಾಗಿರುತ್ತದೆ. ಮೇ 19ಕ್ಕೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ :  ತಂದೆಯ ಅಗಲಿಕೆಯ ಕಣ್ಣೀರ ಕೋಡಿಯಲ್ಲೇ ಪರೀಕ್ಷೆ ಬರೆದ ಸಿ.ಎಸ್.ಶಿವಳ್ಳಿ ಪುತ್ರಿ ರೂಪಾ

ಲೋಕಸಭಾ ಚುನಾವಣೆ ಅಬ್ಬರದ ನಡುವೆಯೇ ಇದೀಗ ಕುಂದಗೋಳ ವಿಧಾನಸಭಾ ಉಪಚುನಾವಣೆಯ ಕಾವೂ ಏರಲಿದೆ. ಇನ್ನು ಲೋಕಸಭಾ ಚುನಾವಣೆಯ ಮತ ಎಣಿಕೆ  (ಮೇ 23) ದಿನದಂದೇ ಕುಂದಗೋಳ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯವೂ ನಡೆಯಲಿದೆ.

​ 
First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ