ಅಧಿಕಾರಕ್ಕಾಗಿ ಅಲ್ಲ, ದೇಶದ ಅಭಿವೃದ್ಧಿಗೆ ನಮ್ಮ ಮೈತ್ರಿ; ಎಚ್.ಡಿ ಕುಮಾರಸ್ವಾಮಿ


Updated:May 16, 2018, 1:53 PM IST
ಅಧಿಕಾರಕ್ಕಾಗಿ ಅಲ್ಲ, ದೇಶದ ಅಭಿವೃದ್ಧಿಗೆ ನಮ್ಮ ಮೈತ್ರಿ; ಎಚ್.ಡಿ ಕುಮಾರಸ್ವಾಮಿ

Updated: May 16, 2018, 1:53 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಮೇ.16): ಕಾಂಗ್ರೆಸ್​ ಜೊತೆ ನಾವು ಮೈತ್ರಿ ಮಾಡಿಕೊಳ್ಳಲು ಸಿದ್ದವಿದ್ದು, ತಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾದರೆ ಅದು ಅವರಿಗೆ ತಿರುಗು ಬಾಣವಾಗಲಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಪಕ್ಷಗಳನ್ನು ಹೆದರಿಸಿ ಹದ್ದುಬಸ್ತಿಗೆ ತರಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಜೆಡಿಎಸ್​ ಪಕ್ಷಕ್ಕೆ ಕೇಂದ್ರ ಸಚಿವ ಸ್ಥಾನದ ಆಮಿಷ ನೀಡುತ್ತಿದೆ. ಆದರೆ ಈ ಹಿಂದೆ ಆದ ತಪ್ಪನ್ನು ಮರುಕಳಿಸಲು ನಾನು ಬಿಡುವುದಿಲ್ಲ ಎಂದಿದ್ದಾರೆ.

2004ರಲ್ಲಿ ಬಿಜೆಪಿ ಜೊತೆ ತಂದೆ ಮಾತು ಮೀರಿ ಬಿಜೆಪಿ ಜೊತೆ ಕೈ ಜೋಡಿಸಿದ್ದೆ.  ನನ್ನಿಂದಾಗಿ ತಂದೆಯ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಬಂದಿತ್ತು.  ಅದನ್ನು ತೊಡೆದು ಹಾಕಲು ಈಗ ಅವಕಾಶ ಬಂದಿದೆ. ದೇಶದಲ್ಲಿ ಕಾಣುತ್ತಿರುವ ಬಿರುಕು ಸರಿಪಡಿಸುವ ಯತ್ನ ನಡೆಯುತ್ತಿದ್ದು ಅದನ್ನು ತೊಡೆದು ಹಾಕಲು ಈಗ ಅವಕಾಶ ಬಂದಿದೆ.

ಪ್ರಸ್ತುತ ರಾಜಕೀಯ ಗಮನಿಸಿದರೆ  2008ರ ಕಮಲ ಆಪರೇಷನ್​ ನೆನಪಿಗೆ ಬರುತ್ತದೆ. ನನ್ನ ಪಕ್ಷದ ಶಾಸಕರಿಗೆ ಬಿಜೆಪಿಯಿಂದ 100ಕೋಟಿ ಹಣದ ಆಮಿಷ ಒಡ್ಡಲಾಗಿದ್ದು. ಇಷ್ಟು ಪ್ರಮಾಣದ ಹಣ ಬಿಜೆಪಿಗೆ ಹೇಗೆ ಬರುತ್ತದೆ. ಹಾಗಾದರೆ ಇದು ವೈಟ್​ ಹಣವೋ, ಬ್ಲ್ಯಾಕ್​ ಹಣವೋ ಎಂದು ತಿಳಿಸಬೇಕು.

ಇಷ್ಟೆಲ್ಲಾ ಚಟುವಟಿಕೆ ಆದರೂ ಆದಾಯ ತೆರಿಗೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.  ಇದೇ ಪ್ರಶ್ನೆಯನ್ನು ನಾನು ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಕೇಳಿತ್ತೇನೆ. ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುತ್ತೀರಾ ಅಥವಾ ಸಂವಿಧಾನ ಉಳಿಸುವಿರಾ ಎಂದರು.

ಅಧಿಕಾರ ಹುಡುಕಿಕೊಂಡು ಹೋಗುವವರು ನಾವಲ್ಲ. ದೇಶ ರಾಜ್ಯದ ಉಳಿವಿಗಾಗಿ ನಾವು ಕಾರ್ಯ ನಿರ್ವಹಿಸುತ್ತೀವಿ. ದೇವೇಗೌಡರು ಪ್ರಧಾನಿ ಹುದ್ದೆ ಬಿಡುವಾಗಲೂ ಬಿಜೆಪಿ ಬೆಂಬಲ ಕೊಡಲು ಮುಂದಾಗಿತ್ತು. ಆಗ ದೇವೇಗೌಡರು ತಿರಸ್ಕರಿಸಿದ್ದರು ಎಂದು ಹಳೆ ಘಟನೆ ನೆನೆದರು.
Loading...

ಮೋದಿ ವರ್ಚಸ್ಸಿನಿಂದ ಬಿಜೆಪಿಗೆ 104 ಸ್ಥಾನ ಸಿಕ್ಕಿದ್ದಲ್ಲ.   ಇದು ಬಿಜೆಪಿ ದುಡಿಮೆ ಅಲ್ಲ,  ಕೆಲವರು ಜೆಡಿಎಸ್ ಪಕ್ಷ ಮುಗಿಸಲು ಹೋಗಿ ಬಿಜೆಪಿ ಗೆ 104 ಸ್ಥಾನ ಬಂದಿದೆ. ಇಲ್ಲದಿದ್ದರೆ ಬಿಜೆಪಿ 80 ಸ್ಥಾನ ದಾಟುತ್ತಿರಲಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಬೇರೆ ಪಕ್ಷಕ್ಕೆ ಅವಕಾಶ ಕೊಡಲ್ಲ ಎನ್ನುವ ಮೋದಿ ಹೇಳಿಕೆ ಅಧಿಕಾರ ದುರ್ಬಳಕೆ ಅಲ್ಲದೇ ಮತ್ತೆನಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೇಘಾಲಯ, ಗೋವಾ, ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡಪಕ್ಷವಾಗಿದ್ರೂ ಅಲ್ಲಿನ ರಾಜ್ಯಪಾಲರು ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿದ್ಸಾರೆ. ಇದೇ ಬಿಜೆಪಿ ಪಕ್ಷ ಯಾವ ರೀತಿ ನಡೆದುಕೊಂಡಿದ್ದಾರೆ ಅಲ್ಲಿ. ಈಗ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ದುರುಪಯೋಗಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇವರು ರಕ್ಷಣೆ ಮಾಡುತ್ತಾರಾ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು

ಈ ಚುನಾವಣಾ ಫಲಿತಾಂಶ ನನಗೆ ಆನಂದ ಉಂಟುಮಾಡಿಲ್ಲ. ಆದರೆ ನಾಡಿನ ಜನತೆಯ ನಿರ್ಧಾರವನ್ನು ಸ್ವೀಕಾರ ಮಾಡುತ್ತೇನೆ. ನಾಡಿನ ಅಭಿವೃದ್ಧಿ ಬಗ್ಗೆ ಜನರು ಉತ್ತಮ ನಿರ್ಧಾರ ಮಾಡಿಲ್ಲ ಅಂತ ಕೊರಗಿದೆ.

ರಾಮನಗರ ಚನ್ನಪಟ್ಟಣದಲ್ಲಿ ನನ್ನನ್ನು ಗೆಲ್ಲಿಸಿದ ಜನರಿಗೆ ನನ್ನ ಉಸಿರು ಇರುವವರೆಗೂ ಋಣಿಯಾಗಿರುತ್ತೇನೆ ಎಂದರು
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ