ಕುಮಾರಸ್ವಾಮಿ ಇನ್ಮೇಲೆ ತಮ್ಮ ಅಪ್ಪನ ಮನೆಯಲ್ಲೇ ಇರುತ್ತಾರೆ: ಈಶ್ವರಪ್ಪ ವ್ಯಂಗ್ಯ

ನಾನು ಮೊದಲೆ ಹೇಳಿದ್ದೆ, ಈ ಅಧಿವೇಶನ ನಡೆಯಲ್ಲ ಅಂತ. ಆದರೂ ಸಿಎಂ ಕುಮಾರಸ್ವಾಮಿ ಅವರು ಇನ್ನೂ ರಾಜೀನಾಮೆ ಕೊಡದೆ ಮುಂದುವರಿಯುತ್ತಿದ್ದಾರೆ. ಈಗಾಗಲೇ ಅಪಮಾನದ ಮೇಲೆ ಅಪಮಾನಕ್ಕೆ ಒಳಗಾಗಿರುವ ಅವರು ಮತ್ತಷ್ಟು ಅಪಮಾನಕ್ಕೆ ಒಳಗಾಗಿ ನಿರ್ಗಮಿಸುತ್ತಾರೆ ಎಂದು ಈಶ್ವರಪ್ಪ ಎಚ್ಚರಿಸಿದರು.

G Hareeshkumar | news18
Updated:July 10, 2019, 11:03 PM IST
ಕುಮಾರಸ್ವಾಮಿ ಇನ್ಮೇಲೆ ತಮ್ಮ ಅಪ್ಪನ ಮನೆಯಲ್ಲೇ ಇರುತ್ತಾರೆ: ಈಶ್ವರಪ್ಪ ವ್ಯಂಗ್ಯ
ಸಿಎಂ ಕುಮಾರಸ್ವಾಮಿ ಹಾಗೂ ಕೆ ಎಸ್ ಈಶ್ದರಪ್ಪ
  • News18
  • Last Updated: July 10, 2019, 11:03 PM IST
  • Share this:
ಬೆಂಗಳೂರು(ಜುಲೈ 10): ದೇವೇಗೌಡರ ಮನೆಗೆ ಕುಮಾರಸ್ವಾಮಿ ಹೋಗೋದು ವಿಶೇಷ ಏನಲ್ಲ. ಅಪ್ಪನ ಮನೆಗೆ ಮಗ ಹೋಗೋದು ಸಹಜ. ಇನ್ಮೇಲೆ ಅಪ್ಪನ ಮನೆಯಲ್ಲೇ ಕುಮಾರಸ್ವಾಮಿ ಇರ್ತಾರೆ ಎಂದು ಸಿಎಂ ವಿರುದ್ದ ಬಿಜೆಪಿ ಶಾಸಕ ಕೆಎಸ್​ ಈಶ್ವರಪ್ಪ ಲೇವಡಿ ಮಾಡಿದರು. ಇವತ್ತು ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕುಮಾರಸ್ವಾಮಿ ಅವರು ತಮ್ಮ ಗೃಹ ಕಚೇರಿಯಿಂದ ನಿರ್ಗಮಿಸಿ ದೇವೇಗೌಡರ ಮನೆಗೆ ಹೋಗಿದ್ದರು. ಈ ಬಗ್ಗೆ ಈಶ್ವರಪ್ಪ ಅವರು ಕುಮಾರಸ್ವಾಮಿಯ ಕಾಲೆಳೆದರು.

ಇದು ಮುಳುಗುತ್ತಿರುವ ಹಡಗು. ಹೋಗುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ದೋಚಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ದೋಚಿದ್ದನ್ನು ಬಯಲು ಮಾಡ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದರು.

ನಾನು ಮೊದಲೆ ಹೇಳಿದ್ದೆ, ಈ ಅಧಿವೇಶನ ನಡೆಯಲ್ಲ ಅಂತ. ಆದರೂ ಸಿಎಂ ಕುಮಾರಸ್ವಾಮಿ ಅವರು ಇನ್ನೂ ರಾಜೀನಾಮೆ ಕೊಡದೆ ಮುಂದುವರಿಯುತ್ತಿದ್ದಾರೆ. ಈಗಾಗಲೇ ಅಪಮಾನದ ಮೇಲೆ ಅಪಮಾನಕ್ಕೆ ಒಳಗಾಗಿರುವ ಅವರು ಮತ್ತಷ್ಟು ಅಪಮಾನಕ್ಕೆ ಒಳಗಾಗಿ ನಿರ್ಗಮಿಸುತ್ತಾರೆ ಎಂದು ಈಶ್ವರಪ್ಪ ಎಚ್ಚರಿಸಿದರು.

ಇದನ್ನೂ ಓದಿ : ಶಾಸಕ ಸುಧಾಕರ್ ಮೇಲೆ ಕೈ ಮುಖಂಡರಿಂದ ಹಲ್ಲೆಗೆ ಯತ್ನ; ವಿರೋಧ ಪಕ್ಷದ ನಾಯಕ ಬಿಎಸ್​ವೈ ಆಕ್ರೋಶ

ಆರುವ ಮೊದಲು ದೀಪ ಪ್ರಕಾಶಮಾನವಾಗಿ ಉರಿಯುತ್ತದೆ. ಹಾಗೆ ಹೋಗುವ ಮೊದಲು ಕುಮಾರಸ್ವಾಮಿ ವರ್ಗಾವಣೆ ಮತ್ತು ಕಮೀಷನ್ ಲೂಟಿಗೆ ಕೂತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿಕೊಂಡು ಹೋಗುತ್ತಾರೆ. ಇಂದು ಸಿದ್ದರಾಮಯ್ಯ, ಕುಮಾರಸ್ವಾಮಿ‌ ಮತ್ತು ದೇವೇಗೌಡರು ಅನಗತ್ಯವಾಗಿ ಬಿಜೆಪಿ ಮೇಲೆ ಆರೋಪಿಸುತ್ತಿದ್ದಾರೆ. ಶಾಸಕರ ರಾಜೀನಾಮೆಗೆ ಬಿಜೆಪಿ ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಒತ್ತಾಯಿಸಿದರು.

ಸರ್ಕಾರದ ಆಯುಸ್ಸು ಕೇವಲ ಎರಡು ಮೂರು ದಿನ : ಬಿಎಸ್ ವೈ

ಇವತ್ತು ರಾಜ್ಯಪಾಲರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಶಾಸಕರಿಗೆ ರಕ್ಷಣೆ ಕೊಡಿ ಅಂತ ಕೇಳಿದ್ದೇವೆ. ಇದಾದ ಕೆಲವೇ ಗಂಟೆಗಳಲ್ಲಿ ಸುಧಾಕರ್ ಮೇಲೆ ಗೂಂಡಾಗಿರಿ ನಡೆಸಿದ್ರು, ಕಾಂಗ್ರೆಸ್ ಜೆಡಿಎಸ್ ನವರ ಗೂಂಡಾಗಿರಿ‌ ಸಂಸ್ಕೃತಿ ದೇಶಕ್ಕೇ ಗೊತ್ತಾಯಿತು. ಮೈತ್ರಿ ಸರ್ಕಾರ ಕೊನೆಯ ಹಂತಕ್ಕೆ ಬಂದಿರುವುದು ಗೊತ್ತಾಗುತ್ತದೆ. ಕಾದು ನೋಡೋಣ, ಶುಕ್ರವಾರ ಅಧಿವೇಶನ ಶುರುವಾಗುತ್ತೆ. ಈ ಸರ್ಕಾರದ ಆಯಸ್ಸು ಎರಡು ಮೂರು ದಿನ ಅಷ್ಟೇ. ಶುಕ್ರವಾರ ನಮ್ಮ ವರಿಷ್ಠರು ಏನ್ ಮಾಡಬೇಕು ಅಂತ ತೀರ್ಮಾನಿಸುತ್ತಾರೆ. ನಂತರ ನಾನು ದೆಹಲಿಗೆ ಹೋಗಿ ವರಿಷ್ಠರ‌ ಜೊತೆ ಮಾತುಕತೆ ನಡೆಸುತ್ತೇನೆ ಎಂದು  ಯಡಿಯೂರಪ್ಪ ಹೇಳಿದರು.
First published: July 10, 2019, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading