ಬಿಸಿಯೂಟ, ಇಂದಿರಾ ಕ್ಯಾಂಟೀನ್​ನಲ್ಲಿ ಸಿರಿಧಾನ್ಯ ಬಳಕೆಗೆ ಮುಂದಾದ ಕುಮಾರಸ್ವಾಮಿ ಸರ್ಕಾರ

ಆರ್ಗಾನಿಕ್​ ಬೆಳೆಯನ್ನು ಉತ್ತೇಜಿಸುವ ಮತ್ತು ಪೌಷ್ಠಿಕತೆ ಹೆಚ್ಚಾಗಿರುವ ಆಹಾರ ಪದಾರ್ಥವನ್ನು ಮಕ್ಕಳು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯವನ್ನು ಬಳಕೆ ಮಾಡಲು ಸೂಚನೆ ನೀಡಲು ಸರ್ಕಾರ ಚಿಂತಿಸಿದೆ.

ಸಿರಿಧಾನ್ಯ

ಸಿರಿಧಾನ್ಯ

  • News18
  • Last Updated :
  • Share this:
ರೇವತಿ ರಾಜೀವನ್​

ಬೆಂಗಳೂರು (ಜ. 8): ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಮತ್ತು ಇಂದಿರಾ ಕ್ಯಾಂಟೀನ್​ ಊಟದಲ್ಲಿ ಸಿರಿಧಾನ್ಯವನ್ನು ಬಳಸಲು ಎಚ್​.ಡಿ. ಕುಮಾರಸ್ವಾಮಿ ಸರ್ಕಾರ ಚಿಂತನೆ ನಡೆಸಿದೆ.

ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸುವ ಮತ್ತು ಸಿರಿಧಾನ್ಯದ ಮೂಲಕ ಆರೋಗ್ಯದ ವರ್ಧನೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಮಾತನಾಡಿ, ಅವರ ಕ್ಯಾಂಟೀನ್​ಗಳಲ್ಲೂ ಸಿರಿಧಾನ್ಯ ಬಳಕೆ ಮಾಡುವಂತೆ ಮನವಿ ಮಾಡಲಿದ್ದೇವೆ ಎಂದು ತೋಟಗಾರಿಕಾ ಸಚಿವ ಶಿವಶಂಕರ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ರೈತರು ಬೆಳೆಯುತ್ತಿದ್ದಾರೆ ಮತ್ತು ಬಳಸುತ್ತಿದ್ದಾರೆ. ಅವುಗಳಲ್ಲಿ ಆರೋಗ್ಯಕ್ಕೆ ಉಪಯುಕ್ತವಾದ ಅನೇಕ ಅಂಶಗಳಿದ್ದು, ನಗರ ಪ್ರದೇಶದ ಜನರಿಗೂ ಸಿರಿಧಾನ್ಯದ ಬಳಕೆಯ ಬಗ್ಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಲು ಚಿಂತಿಸಲಾಗಿದೆ. ನಗರ ಪ್ರದೇಶಗಳಲ್ಲೂ ಸಿರಿಧಾನ್ಯದ ಮಾರಾಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದೇವೆ. ಎಂಎನ್​ಸಿಗಳು ತಮ್ಮ ಕ್ಯಾಂಟೀನ್​ನಲ್ಲಿ ಸಿರಿಧಾನ್ಯದ ಆಹಾರವನ್ನು ಸಿದ್ಧಪಡಿಸಲಾರಂಭಿಸಿದರೆ ಹೆಚ್ಚೆಚ್ಚು ಜನರಿಗೆ ತಲುಪಲು ಸಾಧ್ಯವಿದೆ ಎಂದು ಸಚಿವ ಶಿವಶಂಕರ್​ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ರೇವಣ್ಣ ವರ್ಸಸ್​ ರೇವಣ್ಣ; ನಮ್ಮ ದಾರಿ ನಮಗೆ ಎಂದಿದ್ದ ಸಚಿವರಿಗೆ ತಿರುಗೇಟು ನೀಡಿದ ಕಾಂಗ್ರೆಸ್​ ನಾಯಕ

ಆರ್ಗಾನಿಕ್​ ಬೆಳೆಗಳನ್ನು ಪ್ರಚಾರ ಮಾಡುವ ಮತ್ತು ಪೌಷ್ಠಿಕತೆ ಹೆಚ್ಚಾಗಿರುವ ಸಿರಿಧಾನ್ಯವನ್ನು ಬಿಸಿಯೂಟದಲ್ಲಿ ಬಳಸಿ ಮಕ್ಕಳಿಗೆ ಉಣಬಡಿಸುವ ಬಗ್ಗೆ ಸರ್ಕಾರ ಚರ್ಚೆ ನಡೆಸಿದೆ. ಇಂದಿನ ಆಹಾರ ಪದ್ಧತಿಯಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅದಕ್ಕೆ ಪರಿಹಾರವಾಗಿ ಸಿರಿಧಾನ್ಯವನ್ನು ಬಳಸಲು ನಾವು ಉತ್ತೇಜನ  ನೀಡಬೇಕಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ, ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ

ಪ್ರತಿದಿನದ ಊಟ-ಉಪಾಹಾರದಲ್ಲಿ ಅಲ್ಲದಿದ್ದರೂ ವಾರಕ್ಕೊಮ್ಮೆ ಸಿರಿಧಾನ್ಯವನ್ನು ಬಿಸಿಯೂಟ ಮತ್ತು ಇಂದಿರಾ ಕ್ಯಾಂಟೀನ್​ನಲ್ಲಿ ಬಳಸುವುದರಿಂದ ರೈತರಿಗೂ ಉತ್ತೇಜನ ಸಿಕ್ಕಂತಾಗುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳೂ ದೂರವಾಗುತ್ತವೆ. ನಮಗೆ ಬೇಕಾದಷ್ಟು ಸಿರಿಧಾನ್ಯದ ಪೂರೈಕೆ ಹೆಚ್ಚಾಗುತ್ತಿದ್ದಂತೆ ಪ್ರತಿದಿನದ ಊಟದಲ್ಲಿ ಸಿರಿಧಾನ್ಯವನ್ನು ಬಳಸಲಾಗುವುದು ಎಂದು ಸಚಿವ ಡಾ. ಜಿ. ಪರಮೇಶ್ವರ್​ ತಿಳಿಸಿದ್ದಾರೆ.

ಈಗಾಗಲೇ ಕರ್ನಾಟಕದ ಕೆಲವು ಸರ್ಕಾರಿ ಶಾಲೆಗಳಲ್ಲಿ ಸಿರಿಧಾನ್ಯದಿಂದ ತಯಾರಿಸಲಾದ ಪಾನೀಯವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಹಿಂದೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಇಸ್ಕಾನ್​ನ ಅಕ್ಷಯಪಾತ್ರಾ ಆಹಾರದಲ್ಲಿ ಬೆಳ್ಳುಳ್ಳಿಯ ಬಳಕೆಯನ್ನು ಕಡ್ಡಾಯಗೊಳಿಸಿ ಮೈತ್ರಿ ಸರ್ಕಾರ ವಿವಾದಕ್ಕೆ ಕಾರಣವಾಗಿತ್ತು.

First published: