Karnataka Political Crisis; ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡ್ತೀವಿ ಅಂತ ಕುಮಾರಸ್ವಾಮಿಯೇ ಸುದ್ದಿ ಹಬ್ಬಿಸುತ್ತಿದ್ದಾರೆ; ಶ್ರೀರಾಮುಲು ಆರೋಪ

ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸ್ತೀವಿ ಅಂತ ಮಾಧ್ಯಮದವರ ಎದುರು ಆಫ್ ದಿ ರೆಕಾರ್ಡ್ ಆಗಿ ಮಾತಾನಾಡುತ್ತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಕೈಜೋಡಿಸುವುದು ಅಸಾಧ್ಯವಾದ ಮಾತು ಎಂದು ಬಿಜೆಪಿ ಹಿರಿಯ ನಾಯಕ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18
Updated:July 12, 2019, 1:01 PM IST
Karnataka Political Crisis; ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡ್ತೀವಿ ಅಂತ ಕುಮಾರಸ್ವಾಮಿಯೇ ಸುದ್ದಿ ಹಬ್ಬಿಸುತ್ತಿದ್ದಾರೆ; ಶ್ರೀರಾಮುಲು ಆರೋಪ
ಶ್ರೀರಾಮುಲು ಮತ್ತು ಹೆಚ್​.ಡಿ. ಕುಮಾರಸ್ವಾಮಿ.
  • News18
  • Last Updated: July 12, 2019, 1:01 PM IST
  • Share this:
ಬೆಂಗಳೂರು (ಜುಲೈ.12); ಜೆಡಿಎಸ್ ಜೊತೆಗೆ ಮೈತ್ರಿ ಸಾಧಿಸುವ ಯಾವ ಇಂಗಿತವೂ ಬಿಜೆಪಿ ಪಕ್ಷಕ್ಕೆ ಇಲ್ಲ. ಆದರೆ, ಸಿಎಂ ಕುಮಾರಸ್ವಾಮಿಯೆ ಇಂತಹ ಒಂದು ಸುದ್ದಿಯನ್ನು ಎಲ್ಲೆಡೆ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮಾಹಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು, “ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸ್ತೀವಿ ಅಂತ ಮಾಧ್ಯಮದವರ ಎದುರು ಆಫ್ ದಿ ರೆಕಾರ್ಡ್ ಆಗಿ ಮಾತಾನಾಡುತ್ತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಅಲ್ಲದೆ, ನಿನ್ನೆ ಓರ್ವ ಸಚಿವನನ್ನು ನಮ್ಮ ನಾಯಕರು ಮತ್ತು ಈಶ್ವರಪ್ಪನವರನ್ನು ಭೇಟಿ ಮಾಡಿ ಗಾಸಿಪ್ ಸೃಷ್ಟಿ ಮಾಡಿದ್ದರು. ಈ ಮೂಲಕ ಕುಮಾರಸ್ವಾಮಿ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಅವರ ಯಾವ ಕುತಂತ್ರವೂ ಇಲ್ಲಿ ನಡೆಯುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರವನ್ನು ಮುಂದುವರೆಸಿದ ಶ್ರೀರಾಮುಲು, “ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲು ಕುತಂತ್ರ ಮಾಡ್ತಿದ್ದಾರೆ. ಅವರಿಗೆ ಗೊತ್ತಿರೋದು ಗುತ್ತಿಗೆದಾರರ ಬಳಿ ಹಣ ಕೀಳೋದು, ವರ್ಗಾವಣೆ ದಂಧೆ ಮೂಲಕ ಹಣ ಮಾಡುವುದು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಜನ 105 ಸ್ಥಾನ ಕೊಟ್ಟಿದ್ದಾರೆ. ಆದರೂ, ಇವರು ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ್ದರು.

ಇದೀಗ ಇದೇ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬೇಡ ಅಂದಿದ್ದಾರೆ. ಆದರೂ, ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಅಂದ್ರೆ ಅವರಿಗೆ ಅಧಿಕಾರದ ಆಸೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಹೀಗಾಗಿ ಶುಕ್ರವಾರದ ಅಧಿವೇಶನದಲ್ಲಿ ನಾವು ಅವರಿಗೆ ಖುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ; ಬಿಜೆಪಿ-ಜೆಡಿಎಸ್ ಹೊಸ ಮೈತ್ರಿ ಸಾಧ್ಯತೆ?; ಸಿಎಂ ರಣತಂತ್ರಕ್ಕೆ ಬೆಚ್ಚಿ ಬಿದ್ದ ರೆಬೆಲ್ಸ್!

First published:July 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ