ಭಿನ್ನಮತದ ನಡುವೆಯೇ 8 ಕಾಂಗ್ರೆಸ್​ ಶಾಸಕರ ಪ್ರಮಾಣ ವಚನ: ಸಂಪುಟಕ್ಕೆ ಕಾಲಿಟ್ಟ ಜಾರಕಿಹೊಳಿ, ಎಂಬಿ ಪಾಟೀಲ್​

ಸಮರ್ಥರು, ಅನುಭವಗಳು, ಮತ್ತು ಸೇವಾ ನಿಷ್ಠರಾಗಿರುವ ಎಲ್ಲಾ ನೂತನ ಸಚಿವರು, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ, ಎಂದು ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಶುಭ ಹಾರೈಸಿದ್ದಾರೆ

G Hareeshkumar | news18
Updated:December 22, 2018, 9:19 PM IST
ಭಿನ್ನಮತದ ನಡುವೆಯೇ 8 ಕಾಂಗ್ರೆಸ್​ ಶಾಸಕರ ಪ್ರಮಾಣ ವಚನ: ಸಂಪುಟಕ್ಕೆ ಕಾಲಿಟ್ಟ ಜಾರಕಿಹೊಳಿ, ಎಂಬಿ ಪಾಟೀಲ್​
ರಾಜಭವನದಲ್ಲಿ ಪ್ರಮಾಣ ವಚ ಸ್ವೀಕರಿಸಿದ ನೂತನ ಸಚಿವರು
G Hareeshkumar | news18
Updated: December 22, 2018, 9:19 PM IST
ಬೆಂಗಳೂರು ( ಡಿ.22) : ಕಾಂಗ್ರೆಸ್​-ಜೆಡಿಎಸ್​  ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್​ ರಚನೆ ಕಡೆಗೂ ಆಗಿದ್ದು ಕಾಂಗ್ರೆಸ್​ನ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಯೋಜಿತ ಸಚಿವರು ರಾಜ್ಯಪಾಲ ವಜುಭಾಯ್​ ವಾಲಾ ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.  ಸಂಪುಟ ದರ್ಜೆ ಸಚಿವರಾಗಿ 7 ಮಂದಿ ಮತ್ತು ತುಕಾರಾಂ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಸಂಪುಟ ದರ್ಜೆ ಸಚಿವರಾಗಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್, ಮುಧೋಳ ಕ್ಷೇತ್ರದ ಶಾಸಕ ಆರ್​.ಬಿ.ತಿಮ್ಮಾಪುರ. ಬುದ್ದ, ಬಸವ, ಅಂಬೇಡ್ಕರ್ ಹೆಸರಲ್ಲಿ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬೀದರ್ ಶಾಸಕ ರಹೀಂ ಖಾನ್, ಅಲ್ಲಾನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ಮಂಜುನಾಥ  ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕುಂದಗೋಳ ಶಾಸಕ ಸಿ.ಎಸ್​​.ಶಿವಳ್ಳಿ ಈಶ್ವರನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಹಾಗೇ ಹೂವಿನಹಡಗಲಿ ಶಾಸಕ ಪಿಟಿ ಪರಮೇಶ್ವರ್​ ನಾಯ್ಕ್​, ತುಳಜಾಭವಾನಿ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಂಡೂರು ಶಾಸಕ ಇ.ತುಕಾರಾಂ ದೇವರ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಆದರೆ ತುಕಾರಾಂ ಒಬ್ಬರು ಮಾತ್ರ ರಾಜ್ಯ ದರ್ಜೆಯ ಸಚಿವರಾದರು.

ಇದನ್ನೂ ಓದಿ : ನೂತನ ಸಚಿವರಾಗಿ ಆಯ್ಕೆಯಾದ ಶಾಸಕರ ಬಗ್ಗೆ ನಿಮಗೆಷ್ಟು ಗೊತ್ತು?

ಸುಮಾರು 25 ನಿಮಿಷಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಿಎಂ ಎಚ್​ಡಿ. ಕುಮಾರಸ್ವಾಮಿ, ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ ಇದ್ದರು.

ಇನ್ನೂ ಸಚಿವ ಸಂಪುಟಕ್ಕೆ ಸೇರಿದ ನೂತನ ಸಚಿವರಿಗೆ ಟ್ವೀಟ್ ಮಾಡುವ ಮೂಲಕ ಅಭಿನಂಧನೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ "ಸಮರ್ಥರು, ಅನುಭವಗಳು, ಮತ್ತು ಸೇವಾ ನಿಷ್ಠರಾಗಿರುವ ಎಲ್ಲಾ ನೂತನ ಸಚಿವರು, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ," ಎಂದು ಟ್ವೀಟ್ ಮಾಡಿದ್ದಾರೆ.

ನೂತನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಸಿ.ಎಸ್.ಶಿವಳ್ಳಿ, ರಹೀಂ ಖಾನ್, ಎಂಟಿಬಿ ನಾಗರಾಜ್, ಪರಮೇಶ್ವರ ನಾಯ್ಕ್, ಇ. ತುಕಾರಾಂ ಮತ್ತು ಆರ್.ಬಿ ತಿಮ್ಮಾಪುರ ಅವರಿಗೆ ಅಭಿನಂದನೆಗಳು.@INCKarnataka #cabinetExpansion

— Siddaramaiah (@siddaramaiah) December 22, 2018

First published:December 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...