ಕುಮಾರಸ್ವಾಮಿಗೆ ಹತ್ತಿರವಾದ ಡಿಕೆಶಿ ಕಾಂಗ್ರೆಸ್ಸಿಗರಿಂದ ದೂರವಾಗುತ್ತಿದ್ದಾರಾ?

news18
Updated:July 27, 2018, 3:15 PM IST
ಕುಮಾರಸ್ವಾಮಿಗೆ ಹತ್ತಿರವಾದ ಡಿಕೆಶಿ ಕಾಂಗ್ರೆಸ್ಸಿಗರಿಂದ ದೂರವಾಗುತ್ತಿದ್ದಾರಾ?
ಡಿಕೆ ಶಿವಕುಮಾರ್
news18
Updated: July 27, 2018, 3:15 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಜು.27): ಮೈತ್ರಿ ಸರ್ಕಾರ ನಿರ್ವಹಿಸುವಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದು ಡಿಕೆ ಶಿವಕುಮಾರ್​. ಕಾಂಗ್ರೆಸ್​ ಪಕ್ಷ ಸಮಸ್ಯೆಯಲ್ಲಿದಾಗಲೆಲ್ಲಾ ನೆನಪಾಡಗುವ ಈ ಟ್ರಬಲ್​ ಶೂಟರ್​ ಈಗ ಕಾಂಗ್ರೆಸ್​ ಪಕ್ಷದಿಂದ ದೂರಾವಾಗುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಡಿಕೆಶಿಯವರನ್ನು ಕಾಂಗ್ರೆಸ್​ ಮುಖಂಡರು ದೂರ ಇರಿಸಿದ್ದಾರೆ ಎನ್ನಲಾಗುತ್ತಿದೆ.

ಬಹುಮತ ಪಡೆಯಲು ಯಾವ ಪಕ್ಷಗಳೂ ಸಫಲರಾಗದಿದ್ದಾಗ, ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಸರ್ಕರ ರಚಿಸುವ ನಿರ್ಧಾರಕ್ಕೆ ಬಂದಿತ್ತು. ಆದರೆ ರಾಜ್ಯಪಾಲರ ವಝೂಭಾಯಿ ವಾಲಾ ಅವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದ್ದರು. ಅದರ ಜತೆಗೆ ಬರೋಬ್ಬರಿ ಎರಡು ವಾರಗಳ ಸಮಯ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಕುದುರೆ ವ್ಯಾಪಾರಕ್ಕೆ ಕೈ ಹಾಕಿತ್ತು. ಇದನ್ನು ಅರಿತ ಕಾಂಗ್ರೆಸ್​, ತಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್​ ಅವರಿಗೆ ನೀಡಿದ್ದರು. ಹೈಕಮಾಂಡ್​ ಇಟ್ಟ ಭರವಸೆಯನ್ನು ಡಿಕೆಶಿ ಉಳಿಸಿಕೊಂಡರು. ಸರ್ಕಾರ ರಚಿಸಲು ಅವರು ಪಟ್ಟ ಕಸರತ್ತು ಸಾರ್ವಜನಿಕವಾಗಿ ಮೆಚ್ಚುಗೆಗೆ ಒಳಗಾಗಿತ್ತು.

ಅಲ್ಲದೇ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಡಿಕೆ ಶಿವಕುಮಾರ್​, ಸರ್ಕಾರ ರಚನೆಯ ನಂತರ ಕುಮಾರಸ್ವಾಮಿಗೆ ಆಪ್ತರಾದರು. ಡಿಕೆ ಶಿವಕುಮಾರ್ ಮತ್ತು​ ದೇವೇಗೌಡರ ಕುಟುಂಬದ ನಡುವೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯವಿದ್ದು, ಹಾವು ಮುಂಗುಸಿಯಂತಿದ್ದರು. ಅಷ್ಟೇ ಅಲ್ಲದೇ ಡಿಕೆ ಶಿವಕುಮಾರ್​ ರಾಜಕೀಯ ಉತ್ತುಂಗಕ್ಕೆ ಏರಲು ಪಣ ತೊಟ್ಟಿದ್ದು ಕೂಡ ದೇವೇಗೌಡರ ಕುಟುಂಬದ ಮೇಲಿನ ಸಿಟ್ಟಿನಿಂದಲೇ ಎಂದೂ ಅನ್ನಲಾಗುತ್ತದೆ.

ಈ ರೀತಿ ಎಣ್ಣೆ, ಸೀಗೆಕಾಯಿ ಸಂಬಂಧ ಹೊಂದಿದ್ದ ಡಿಕೆ ಶಿವಕುಮಾರ್​ ಈಗ ಕುಮಾರಸ್ವಾಮಿ ಆಪ್ತರಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಆಪ್ತರಾಗಿದ್ದ  ಡಿಕೆಶಿ  ಮೈತ್ರಿ ಸರ್ಕಾರದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಲು ಮುಂದಾದಂತಿದೆ.

ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್​, ಚುನಾವಣೆಗೆ ಪಕ್ಷ ನೀಡಿದ್ದ ಫಂಡ್​ ಅನ್ನು ಸರಿಯಾಗಿ ಬಳಕೆ ಮಾಡಿಕೊಂಡಿರಲಿಲ್ಲ ಎಂಬ ಆರೋಪ ಕಾಂಗ್ರೆಸ್​ ಮುಖಂಡರಿಂದ ಕೇಳಿ ಬರುತ್ತಿದೆ.  ಚುನಾವಣೆಯಲ್ಲಿ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಡಿಕೆಶಿ ವಿಫಲರಾಗಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣ, ಮಾಧ್ಯಮ ಸೇರಿದಂತೆ ಇತರೆ ಮಾಧ್ಯಮಗಳನ್ನು ಪ್ರಚಾರಕ್ಕೆ ಬಳಸುವಲ್ಲಿ ಕಾಂಗ್ರೆಸ್​ ವಿಫಲವಾಗಿತ್ತು. ಇದಕ್ಕೆ ಕಾರಣ ಡಿಕೆಶಿ ಎಂಬ ಆರೋಪ ಕೇಳಿಬಂದಿತ್ತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಕಾಂಗ್ರೆಸ್​ ನಾಯಕರು  ನಿಧಾನವಾಗಿ ಡಿಕೆಶಿಯಿಂದ ದೂರಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್  ಸೇರಿದಂತೆ ಪ್ರಮುಖ ನಾಯಕರು ಡಿಕೆಶಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೆಪಿಸಿಸಿ ಮೂಲಗಳಿಂದಲೇ ಕೇಳಿ ಬರುತ್ತಿದೆ.
Loading...

ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...