ದೇವೇಗೌಡ್ರು, ಕುಮಾರಸ್ವಾಮಿ ಹಾಸನಕ್ಕೆ ಮೋಸ ಮಾಡಿಲ್ಲ : ಮಾಜಿ ಸಚಿವ ಹೆಚ್ ಡಿ ರೇವಣ್ಣ

ಹೊಳೇನರಸೀಪುರದಲ್ಲಿ ರಸ್ತೆ ಕಾಮಗಾರಿಗೆ ಬಿಡುಗಡೆಯಾದ 9.50 ಕೋಟಿ ಹಣ ಬೇರೆಡೆಗೆ ವರ್ಗಾಯಿಸಲಾಗುತ್ತಿದೆ. ಮತ ಹಾಕಲಿಲ್ಲಾ ಎಂಬ ಕಾರಣಕ್ಕೆ ವಿವಿಧ ಕಾಮಗಾರಿಯ ಹಣವನ್ನ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ ಮಾಡಿದರು

news18-kannada
Updated:December 27, 2019, 5:06 PM IST
ದೇವೇಗೌಡ್ರು, ಕುಮಾರಸ್ವಾಮಿ ಹಾಸನಕ್ಕೆ ಮೋಸ ಮಾಡಿಲ್ಲ : ಮಾಜಿ ಸಚಿವ ಹೆಚ್ ಡಿ ರೇವಣ್ಣ
ಎಚ್​.ಡಿ. ರೇವಣ್ಣ
  • Share this:
ಹಾಸನ(ಡಿ.27): ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಮೊಸ ಮಾಡಿಲ್ಲ, ಕೆಲವರು ಹಾಸನ ಬಜೆಟ್, ಮಂಡ್ಯ ಬಜೆಟ್ ಅಂತಾ ಹೇಳುತ್ತಾರೆ. ಕಳೆದ 60 ವರ್ಷ ದೇವೇಗೌಡರಿಗೆ ಹಾಸನ ಜಿಲ್ಲೆಯ ಜನರು ರಾಜಕೀಯ ಶಕ್ತಿ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಹಿಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಹಾಸನ ಜಿಲ್ಲೆಗೆ ಬಂಪರ್ ಕೊಡುಗೆ ಕೊಟ್ಟಿದ್ದರು. 438 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಯನ್ನು ಮಂಜೂರು ಮಾಡಲಾಗಿತ್ತು. ಮೈತ್ರಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ದಾಖಲೆಯನ್ನು ಮಾಜಿ ಸಚಿವ  ಹೆಚ್.ಡಿ.ರೇವಣ್ಣ ಬಿಡುಗಡೆ ಮಾಡಿದರು.

ಕೆಲವರು ಕುಮಾರಸ್ವಾಮಿ ಸಿಎಂ ಆಗಿದ್ದರು ಹಾಸನಕ್ಕೆ ಏನು ಮಾಡಿದ್ದಾರೆ ಅಂತಾ ಹೇಳುತ್ತಾರೆ. ಅಭಿವೃದ್ದಿ ಕಾರ್ಯದ ದಾಖಲೆ ಸಮೇತ ಬಿಡುಗಡೆ ಮಾಡಿದ್ದೇನೆ. ಆರೋಪ ಮಾಡುವವರು ಈಗ ಏನು ಹೇಳುತ್ತಾರೆ ಎಂದು ಹೆಚ್.ಡಿ.ರೇವಣ್ಣ ಸವಾಲ್ ಹಾಕಿದರು.

ಹೊಳೇನರಸೀಪುರದಲ್ಲಿ ರಸ್ತೆ ಕಾಮಗಾರಿಗೆ ಬಿಡುಗಡೆಯಾದ 9.50 ಕೋಟಿ ಹಣ ಬೇರೆಡೆಗೆ ವರ್ಗಾಯಿಸಲಾಗುತ್ತಿದೆ. ಮತ ಹಾಕಲಿಲ್ಲಾ ಎಂಬ ಕಾರಣಕ್ಕೆ ವಿವಿಧ ಕಾಮಗಾರಿಯ ಹಣವನ್ನ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ ಮಾಡಿದರು.

ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲ್ಲಾ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಹಿಂತೆಗೆದುಕೊಳ್ಳುವ ಸರ್ಕಾರವಾಗಿದೆ.  ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಅಂತಾರೆ, ತುರ್ತುಪರಿಸ್ಥಿತಿ ಬರುವ ಲಕ್ಷಣ ಕಾಣುತ್ತಿದ್ದು ಕಾರಣ ಹೀಗೆ ಸಿಎಂ ಹೇಳುತ್ತಿದ್ದಾರೆ. ಹಾಸನ ಜಿಲ್ಲೆಯಿಂದ ಹಣ ಸಂಗ್ರಹಿಸಿ ಪರಿಹಾರ ಕೊಡುತ್ತೇವೆ. ಬಿಜೆಪಿಯವರು ಇಷ್ಟು ದಿನ ಗಲಭೆ ಮಾಡಿರುವವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸಿಎಂ ಅವರನ್ನು ರೇವಣ್ಣ ಒತ್ತಾಯ ಮಾಡಿದರು.

ಅವರ ಕುಟುಂಬದವರು ಏನು ಮಾಡಿದರು. ಮೃತಪಟ್ಟವರ ಮೇಲೆ ಕೇಸ್ ಇರಲಿ ಆದರೆ, ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರ ಜೊತೆ ಸೇರಿಕೊಂಡು ಪೂಜೆ ಮಾಡಿಸಿ ಸಿಎಂ ಈ ರೀತಿ ಪರಿಹಾರ ಕೊಡಲ್ಲ ಅಂತಾರೆ, ಆಂಧ್ರದಿಂದ ಅರ್ಚಕರನ್ನ ಕರೆಸಿ ಪೂಜೆ ಮಾಡಿಸಿದ್ದಾರೆ. ನಾವು ಶೃಂಗೇರಿ ಗುರುಗಳಿಂದ ಮಾತ್ರ ಪೂಜೆ ಮಾಡಿಸೋದು ಎಂದರು.

ಇದನ್ನೂ ಓದಿ : ಜ‌.30ರೊಳಗೆ ಕಾಚೇನಹಳ್ಳಿ ಏತ ನೀರಾವರಿ ಭೂಪ್ರದೇಶದ ರೈತರಿಗೆ ಭೂ ಪರಿಹಾರ; ಮಾಜಿ ಸಚಿವ ಎ. ಮಂಜುಹೊಳೆನರಸೀಪುರದಲ್ಲಿ ವಿವಿಧ ಕಾಮಗಾರಿಗಳ ಹಣ ಬೇರೆಡೆಗೆ ವರ್ಗಾವಣೆ ವಿಚಾರ ಪುರಸಭಾ ಸದಸ್ಯರೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್.ಡಿ.ರೇವಣ್ಣ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ  ಎಲ್ಲ ವಿಚಾರಕ್ಕೆ ಯಾಕೆ ಪ್ರತಿಭಟನೆ ಮಾಡುತ್ತೀರಿ ಎಂದು ಪುರಸಭಾ ಸದಸ್ಯರನ್ನ ಜಿಲ್ಲಾಧಿಕಾರಿ ತರಾಟೆ ತೆಗೆದುಕೊಂಡರು. ಬಳಿಕ ಪುರಸಭಾ ಸದಸ್ಯರು ಮತ್ತು ಡಿಸಿಯವರನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಮಾಧಾನಪಡಿಸಿದರು.

ಇಂತಹ ಸಣ್ಣ ವಿಚಾರಕ್ಕೆ ಯಾಕೆ ಕೋಪ ಮಾಡಿಕೊಳ್ತೀರಿ ಎಂದು ಜಿಲ್ಲಾಧಿಕಾರಿಗೆ ಹೆಚ್.ಡಿ.ರೇವಣ್ಣ ಹೇಳಿದರು. ರೇವಣ್ಣ ಅವರಿಗೆ ಮನವಿಗೆ ಸ್ಫಂದಿಸಿದ ಡಿಸಿ ಗಿರೀಶ್ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು
First published:December 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ