• Home
  • »
  • News
  • »
  • state
  • »
  • Unlock 4.0: ಲಾಕ್​​ಡೌನ್ ತೆರವು ಬಳಿಕ ಕುಕ್ಕೆಯಲ್ಲಿ ಮೊದಲ ಬಾರಿಗೆ ದೇವರ ಸೇವೆ ಪ್ರಾರಂಭ

Unlock 4.0: ಲಾಕ್​​ಡೌನ್ ತೆರವು ಬಳಿಕ ಕುಕ್ಕೆಯಲ್ಲಿ ಮೊದಲ ಬಾರಿಗೆ ದೇವರ ಸೇವೆ ಪ್ರಾರಂಭ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ರಾಜ್ಯದ ಅತ್ಯಂತ ಶ್ರೀಮಂತ ದೇಗುಲ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ವ ಸಂಸ್ಕಾರ ಸೇವೆ ನೆರವೇರಿಸಲೆಂದೇ ದೇಶ- ವಿದೇಶಗಳಲ್ಲಿರುವ ಭಕ್ತಾಧಿಗಳು ಬರುತ್ತಾರೆ. ಲಾಕ್ ಡೌನ್ ಬಳಿಕ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಸೇವೆಗಳು ನಿಂತು ಹೋದ ಪರಿಣಾಮ ಕ್ಷೇತ್ರದ ಆದಾಯಕ್ಕೂ ಭಾರೀ ಹೊಡೆತವೂ ಬಿದ್ದಿದೆ.

ಮುಂದೆ ಓದಿ ...
  • Share this:

ದಕ್ಷಿಣ ಕನ್ನಡ(ಸೆ.14): ದೇಶದಲ್ಲಿ ಕೊರೋನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಪುಣ್ಯ ಕ್ಷೇತ್ರಗಳಲ್ಲಿ ನಿಂತು ಹೋಗಿದ್ದ ಭಕ್ತಾಧಿಗಳ ಸೇವೆಗಳು ಇಂದಿನಿಂದ ಮತ್ತೆ ಆರಂಭಗೊಂಡಿದೆ. ರಾಜ್ಯದ ಅತ್ಯಂತ ಶ್ರೀಮಂತ ದೇಗುಲವಾದ, ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೂಡಾ ಇಂದಿನಿಂದ ದೇವರ ಸೇವೆಗಳು ಆರಂಭಗೊಂಡಿದೆ. ಸರ್ಪ ಸಂಸ್ಕಾರ ಸೇವೆಗೆ ಅತ್ಯಂತ ಪ್ರಸಿದ್ಧಿಯಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ದಿನಕ್ಕೆ ಕೇವಲ 30 ಸೇವೆಗಳನ್ನು ಮಾಡಲು ಭಕ್ತಾಧಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಅವಕಾಶ ಈ ಹಿಂದೆ ಸೇವೆಯನ್ನು ಕಾಯ್ದಿರಿಸಿದ ಭಕ್ತಾಧಿಗಳಿಗೆ ಮಾತ್ರ ನೀಡಲಾಗಿದ್ದು, ಹೊಸದಾಗಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸುವ ಅವಕಾಶವನ್ನು ನಿರಾಕರಿಸಲಾಗಿದೆ. ಸರ್ಪ ಸಂಸ್ಕಾರ ಸೇವೆ ನೆರವೇರಿಸುವ ಭಕ್ತಾಧಿಗಳು 2 ದಿನಗಳವರೆಗೆ ಕ್ಷೇತ್ರದಲ್ಲಿ ತಂಗಲು ಅವಕಾಶವನ್ನೂ ನೀಡಲಾಗಿದೆ. ಅಲ್ಲದೆ ಇತರ ಸೇವೆಯನ್ನು ನೆರವೇರಿಸುವ ಭಕ್ತಾಧಿಗಳಿಗೆ ಕ್ಷೇತ್ರದಲ್ಲಿ ‍‍ಒಂದು ದಿನ ತಂಗಲು ಅವಕಾಶವಿದೆ.
ಅದೇ ಪ್ರಕಾರ ಕ್ಷೇತ್ರದಲ್ಲಿ ನಡೆಯುವ ಇನ್ನೊಂದು ಮಹತ್ವದ ಸೇವೆಯಾದ ಆಶ್ಲೇಷ ಬಲಿ ಪೂಜೆಗೂ ಅವಕಾಶ ನೀಡಲಾಗಿದ್ದು, ದಿನಕ್ಕೆ ಎರಡು ಪಾಳಿಯಲ್ಲಿ 60 ಪೂಜೆಗಳನ್ನು ನೆರವೇರಿಸಲು ಮಾತ್ರ ಅವಕಾಶವಿದೆ. ಲಾಕ್ ಡೌನ್ ಹೇರಿಕೆಯಾದ ಬಳಿಕ ಸ್ಥಗಿತಗೊಂಡಿದ್ದ ಸೇವೆಯನ್ನು ಕುಕ್ಕೆಯಲ್ಲಿ ಮತ್ತೆ ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಇಂದು ಕೇವಲ 4 ಸರ್ವ ಸಂಸ್ಕಾರ ಪೂಜೆ ಮಾತ್ರ ನೆರವೇರಿದೆ. ಅದೇ ಪ್ರಕಾರ 60 ಆಶ್ಲೇಷ ಪೂಜೆಗಳು ನೆರವೇರಿದೆ.


Drug Mafia: ಕಲಬುರ್ಗಿ ಪೊಲೀಸರ ಕಾರ್ಯಾಚರಣೆ; 10.50 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ


ರಾಜ್ಯದ ಅತ್ಯಂತ ಶ್ರೀಮಂತ ದೇಗುಲ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರ್ವ ಸಂಸ್ಕಾರ ಸೇವೆ ನೆರವೇರಿಸಲೆಂದೇ ದೇಶ- ವಿದೇಶಗಳಲ್ಲಿರುವ ಭಕ್ತಾಧಿಗಳು ಬರುತ್ತಾರೆ. ಲಾಕ್ ಡೌನ್ ಬಳಿಕ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಸೇವೆಗಳು ನಿಂತು ಹೋದ ಪರಿಣಾಮ ಕ್ಷೇತ್ರದ ಆದಾಯಕ್ಕೂ ಭಾರೀ ಹೊಡೆತವೂ ಬಿದ್ದಿದೆ.
ಕೊರೋನಾ ಆತಂಕದಿಂದ ಮಾರ್ಚ್​​​ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಹಲವು ದೇಗುಲಗಳನ್ನು ಮುಚ್ಚಲಾಗಿತ್ತು. ಈಗ ದೇಶದಲ್ಲಿ ಅನ್​ಲಾಕ್​ ಜಾರಿಯಾಗುತ್ತಿದ್ದಂತೆ ದೇವಾಲಯಗಳನ್ನು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮಂಗಳೂರಿನಿಂದ ಸುಮಾರು 100 ಕಿ.ಮೀ.ದೂರದಲ್ಲಿದೆ. ಪ್ರತೀ ವರ್ಷ ಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭಕ್ತರು ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.


ಸದ್ಯ ದೇವಾಲಯದಲ್ಲಿ ಭಕ್ತರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

Published by:Latha CG
First published: