ಮೇಕ್‌ ಇನ್ ಇಂಡಿಯಾ ಅಡಿ ಉದ್ಯಮಗಳಿಗೆ ಬೇಕಿದೆ ಕಾಯಕಲ್ಪ; ಪರ್ಯಾಯ ಕೈಗಾರಿಕಾ ಭೂಮಿ ನೀಡಲು ಕೆ.ಎಸ್.ಎಸ್.ಐ.ಡಿ.ಸಿ ಮೀನಾಮೇಷ

ನೆಲಮಂಗಲದ ಉದ್ದೇಶಿತ ಜಾಗವನ್ನು ಬಿಟ್ಟು ಬೆಂಗಳೂರು ಹೊರವಲಯದ ಯಾವುದೇ ಕೈಗಾರಿಕೆ ಎಸ್ಟೇಟ್ ನಲ್ಲಿ ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಅದಕ್ಕೂ ಸ್ಪಂದಿಸುತ್ತಿಲ್ಲ

ನೆಲಮಂಗಲದ ಉದ್ದೇಶಿತ ಜಾಗವನ್ನು ಬಿಟ್ಟು ಬೆಂಗಳೂರು ಹೊರವಲಯದ ಯಾವುದೇ ಕೈಗಾರಿಕೆ ಎಸ್ಟೇಟ್ ನಲ್ಲಿ ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಅದಕ್ಕೂ ಸ್ಪಂದಿಸುತ್ತಿಲ್ಲ

ನೆಲಮಂಗಲದ ಉದ್ದೇಶಿತ ಜಾಗವನ್ನು ಬಿಟ್ಟು ಬೆಂಗಳೂರು ಹೊರವಲಯದ ಯಾವುದೇ ಕೈಗಾರಿಕೆ ಎಸ್ಟೇಟ್ ನಲ್ಲಿ ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಅದಕ್ಕೂ ಸ್ಪಂದಿಸುತ್ತಿಲ್ಲ

  • Share this:
ಬೆಂಗಳೂರು (ನ.9): ಮೇಕ್‌ ಇನ್ ಇಂಡಿಯಾ ಅಡಿ ಆರಂಭವಾಗಿರುವ ರಕ್ಷಣಾ ಇಲಾಖೆ ಸೇರಿದಂತೆ ಪ್ರಮುಖ ಬಿಡಿಭಾಗಗಳನ್ನು ತಯಾರಿಸುವ ಸಂಸ್ಥೆ, ಉದ್ಯಮಗಳಿಗೆ ನಿಗದಿತ ಭೂಮಿಯನ್ನಾಗಲೀ ಅಥವಾ ಪರ್ಯಾಯ ಭೂಮಿಯನ್ನಾಗಲೀ ನೀಡಲು ಕೆಎಸ್ಎಸ್ಐಡಿಸಿ ಮೀನಾಮೇಷ ಎಣಿಸುತ್ತಿದೆ. ರಕ್ಷಣಾ ಕ್ಷೇತ್ರದ ಉತ್ಪನ್ನಗಳನ್ನು ದೇಶೀಯವಾಗಿ ತಯಾರಿಸಿ ಈ ಕ್ಷೇತ್ರವನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಮೂಲದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಎಇಸಿಪಿಎಲ್) ಸಂಸ್ಥೆಯು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಕೈಗಾರಿಕಾ ಭೂಮಿ ಪಡೆಯಲು ಕಳೆದ ಎರಡು ವರ್ಷಗಳಿಂದ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

2018 ರಿಂದ ನೆಲಮಂಗಲದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಮನವಿ ಮಾಡುತ್ತಾ ಬಂದಿದೆ. ಕೆಎಸ್ಎಸ್ಐಡಿಸಿ ಸಂಸ್ಥೆಯು ಮಾತ್ರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಇದೊಂದು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಆರಂಭವಾಗುತ್ತಿರುವ ಉದ್ಯಮವಾಗಿದೆ. ಆದ್ದರಿಂದ ಈ ಸಂಸ್ಥೆಗೆ ನೆಲಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ಭೂಮಿ ನೀಡುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದ್ದರೂ ಕೆಎಸ್ಎಸ್ಐಡಿಸಿ ಇದಕ್ಕೆ ಸೊಪ್ಪು ಹಾಕಿಲ್ಲ. ಈ ಮೂಲಕ ಕರ್ನಾಟಕದ ಮಟ್ಟಿಗೆ ದೇಶದ `ಮೇಕ್ ಇನ್ ಇಂಡಿಯಾ’ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.

ಸಾಮಾನ್ಯವಾಗಿ ನಿಗದಿತ ಭೂಮಿಯನ್ನು ನೀಡಲಾಗದಿದ್ದರೆ ಅದಕ್ಕೆ ಪರ್ಯಾಯವಾಗಿ ಭೂಮಿಯನ್ನು ಮಂಜೂರು ಮಾಡಬೇಕೆಂಬ ನಿಯಮವಿದೆ. ಆದರೆ, ಈ ನಿಯಮವನ್ನು ಕೆಎಸ್ಎಸ್ಐಡಿಸಿ ಅಧಿಕಾರಿಗಳು ಗಾಳಿಗೆ ತೂರಿದ್ದು, ಪರ್ಯಾಯ ಭೂಮಿ ಮಂಜೂರು ಮಾಡುವ ಬಗ್ಗೆಯೂ ಗಮನಹರಿಸಿಲ್ಲ.ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಜರ್ಮನಿಯ ಅಂಗಸಂಸ್ಥೆಯಾಗಿರುವ ಎಇಸಿಪಿಎಲ್ ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಭಾರತದಲ್ಲಿ ಕಂಪನಿಯ ನಿರ್ದೇಶಕರಾಗಿರುವ ಗಿರೀಶ್​ ರಷ್ಯಾದಲ್ಲಿಯೂ ತನ್ನ ವ್ಯವಹಾರವನ್ನು ಹೊಂದಿದ್ದಾರೆ. ಕಂಪನಿಯು ಎಚ್ಎಎಲ್​​ಗೆ ಎಲ್​ಸಿಎ ತೇಜಸ್ ಮತ್ತು ಇಂಜಿನ್ ಯೋಜನೆಗೆ ಅಗತ್ಯವಾದ ಮೆಟಲ್ ಕಟಿಂಗ್ ಟೂಲ್ಸ್ ಅನ್ನು ಪೂರೈಕೆ ಮಾಡುತ್ತಿತ್ತು. ಇದಲ್ಲದೇ, ಕಂಪನಿಯು ಡಿಆರ್​ಡಿಒ, 515 ಆರ್ಮಿ ಬೇಸ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೇಟರೀಸ್ ಮತ್ತು ಏರೋಸ್ಪೇಸ್​ಗೆ ಸಂಬಂಧಿಸಿದ ಇತರೆ ಕಂಪನಿಗಳೊಂದಿಗೆ ನಿಕಟವಾಗಿ ವ್ಯವಹಾರಗಳನ್ನು ನಡೆಸುತ್ತಾ ಬಂದಿದೆ. ಜೆಎಎಸ್​ಡಬ್ಲ್ಯೂ, ಮಿಶ್ರಾ ಧಾತು ನಿಗಮ್ ಲಿಮಿಟೆಡ್, ಬಾಷ್ ಸೇರಿದಂತೆ ಇನ್ನಿತರೆ ದೊಡ್ಡ ಕಂಪನಿಗಳೊಂದಿಗೆ ಸಹಯೋಗವನ್ನು ಹೊಂದಿದೆ ಎನ್ನುತ್ತಾರೆ ಕಂಪನಿಯ ನಿರ್ದೇಶಕ ಗಿರೀಶ್.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ `ಮೇಕ್ ಇನ್ ಇಂಡಿಯಾ’ ಉಪಕ್ರಮದಿಂದ ಪ್ರೇರೇಪಿತವಾಗಿರುವ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿ ಬಳಿಯ ನಾರಾಯಣರಾವ್ ಪಾಳ್ಯದ ಇಂಡಸ್ಟ್ರಿಯಲ್ ಎಸ್ಟೇಟ್​ನಲ್ಲಿ ಪ್ಲಾಟ್ ನಿರ್ಮಾಣಕ್ಕೆ ಭೂಮಿಗಾಗಿ (ಸಂಖ್ಯೆ ಡಿ143) ಅರ್ಜಿ ಸಲ್ಲಿಸಿತ್ತು. 2018 ರಿಂದ ಇಲ್ಲಿವರೆಗೆ ಕೆಎಸ್ಎಸ್ಐಡಿಸಿ ಕಂಪನಿಯ ಅರ್ಜಿಯನ್ನು ಇದುವರೆಗೆ ಈ ಬಗ್ಗೆ ಯಾವುದೇ ನಿರ್ಧಾರವನ್ನು ಹೊರ ಹಾಕಿಲ್ಲ. ಎಡಿಡಿ 28 ಆಗಸ್ಟ್ 2018 ರಲ್ಲಿ ಕಳುಹಿಸಿದ್ದ ಇಮೇಲ್​​ಗೆ ಪ್ರತಿಕ್ರಿಯೆ ನೀಡಿದ್ದ ಅಂದಿನ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, 6 ಸೆಪ್ಟಂಬರ್ 2018 ರಂದು ಕೆಎಸ್ಎಸ್ಐಡಿಸಿಗೆ ಪತ್ರ ಬರೆದು ಕಂಪನಿಗೆ ಆದ್ಯತೆ ಮೇಲೆ ಭೂಮಿಯನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಿದ್ದರು.  ಈ ಕಾರಣದಿಂದ ನೆಲಮಂಗಲದ ಉದ್ದೇಶಿತ ಜಾಗವನ್ನು ಬಿಟ್ಟು ಬೆಂಗಳೂರು ಹೊರವಲಯದ ಯಾವುದೇ ಕೈಗಾರಿಕೆ ಎಸ್ಟೇಟ್ ನಲ್ಲಿ ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರೂ ಕೆಎಸ್ಎಸ್ಐಡಿಸಿ ಅಧಿಕಾರಿಗಳು ಅದಕ್ಕೂ ಸ್ಪಂದಿಸುತ್ತಿಲ್ಲ.

ಇದನ್ನು ಓದಿ: ವಿಜಯಪುರ ಶ್ರೀ ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪ್ಯಾನೆಲ್ ಕೈಹಿಡಿದ ಮತದಾರರು

ಜರ್ಮನ್ ಮತ್ತು ರಷ್ಯಾದ ನುರಿತ ತಂತ್ರಜ್ಞರಾದ ನಾರ್ಬರ್ಡ್ ಕ್ರಲ್ಲರ್,  ಡಾ. ವರ್ನರ್ ಗ್ರೈಕ್ಸ, ಡಾ ಉಡೋ ವೈಗಲ್ ಹಾಗೂ ಅಲೆಗ್ಸಾಂಡರ್ ಲಾಕ್ಟೇವ್  ಸೇರಿ ಎಡಿಡಿ ಸಂಸ್ಥೆ ಸ್ಥಾಪನೆ ಮಾಡಿದ್ದು, ಈ ಸಂಸ್ಥೆ ಜೊತೆ ವಿಮಾನ ತಯಾರಿಕ ಸಂಸ್ಥೆಗಳು ಉತ್ಸುಕತೆ ತೋರಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಸರ್ಕಾರ ಈ ಸಂಸ್ಥೆಗೆ ಜಾಗ ನೀಡಲು ಹಿಂದುಮುಂದು ನೋಡುತ್ತಿವೆ. ಈ ಹಿಂದಿನ ರಕ್ಷಣಾ ಸಚಿವೆ ಸಂಸ್ಥೆಗೆ ಜಾಗ ಕೊಡಲು ಶಿಫಾರಸ್ಸು ಮಾಡಿದ್ದರು. ಆದರೆ ರಾಜ್ಯದ ಕೆ ಎಸ್ ಎಸ್ ಐ ಡಿ ಸಿ ಸ್ಥಳ ನೀಡಲು ಮೀನಾಮೇಷ‌ ಎಣಿಸುತ್ತಿದೆ.

ಕೆ ಐ ಎ ಡಿ ಬಿ ಯಿಂದ ಗ್ರೀನ್‌ ಸಿಗ್ನಲ್ಎರಡು ವರ್ಷಗಳ ನಂತರ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ನ ಕನಸು ಸಾಕಾರವಾಗುವ ಸಮಯ ಹತ್ತಿರ ಬಂದಿದೆ. ತುಮಕೂರಿನಲ್ಲಿರುವ ಮಶಿನ್ ಟೂಲ್ಸ್ ಪಾರ್ಕ್ ನಲ್ಲಿ ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಯದ್ಧ ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಲು ಬಳಸಬಹುದಾದ ಹೈ ಎಂಡ್ ಕಟ್ಟಿಂಗ್ ಟೂಲ್ಸ್ ಸಲೂಶನ್ಸ್ ಘಟಕ ಸ್ಥಾಪನೆ ಮಾಡಲು ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ಘಟಕ ಸ್ಥಾಪನೆಗಾಗಿ ತುಂಡು ಭೂಮಿ ನೀಡುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಭೂಮಿ ಮಂಜೂರು ಮಾಡಿಸಿಕೊಳ್ಳಲು ಸಂಸ್ಥೆಗೆ ಸಾಧ್ಯವಾಗಿರಲಿಲ್ಲ. ಆದರೆ, ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣದಡಿ ಎಡಿಡಿ ದೇಶೀಯವಾಗಿ ಉತ್ಪನ್ನಗಳನ್ನು ತಯಾರು ಮಾಡಲಿದೆ ಎಂಬ ಅಂಶವನ್ನು ಗಮನಿಸಿರುವ ಕರ್ನಾಟಕ ಉದ್ಯೋಗ ಮಿತ್ರ ಮತ್ತು ಕರ್ನಾಟಕ ಕೈಗಾರಿಕೆಗಳ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಇಲಾಖೆಗಳು ಜಂಟಿಯಾಗಿ ಎಡಿಡಿಗೆ ಘಟಕ ಸ್ಥಾಪನೆ ಮಾಡಲು ನೆರವಾಗುತ್ತಿವೆ.
Published by:Seema R
First published: