ಕೋಲಾರದಲ್ಲಿ ಸಾರಿಗೆ ಬಸ್ ಮೇಲೆ ಕಲ್ಲೆಸೆದ ಕಿಡಿಗೇಡಿಗಳು; ಖಾಸಗಿ ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ

ಮುಖ ಮುಚ್ಚಿಕೊಂಡ ಬಂದ ಕೆಲವರು ಮಾಲೂರಿನಿಂದ ಬರುತ್ತಿದ್ದ ಬಸ್​ ಮೇಲೆ ಕಲ್ಲು ತೂರಿದರು. ಇದರಿಂದ ಬಸ್​ ಮುಂಭಾಗದ ಗಾಜು ಪುಡಿಯಾಗಿ, ಜಖಂ ಗೊಂಡಿತು.

ಬಸ್​ ಕಲ್ಲು ತೂರಾಟ

ಬಸ್​ ಕಲ್ಲು ತೂರಾಟ

  • Share this:
ಕೋಲಾರ (ಏ. 8): ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ ಇಲ್ಲದೇ ಜನರು ತೊಂದರೆ ಅನುಭವಿಸಿದ್ದಾರೆ.  ಕೋಲಾರದ ಹಳೇ ಬಸ್ ನಿಲ್ದಾಣ ಬಳಿ ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರಕ್ಕೆ ತೆರಳಲು ಸಾರ್ವಜನಿಕರು ಗಂಟೆಗಟ್ಟಲೇ ಬಸ್​ಗಾಗಿ ಕಾದು ನಿಂತಿದ್ದರು, ಟಾಟಾ ಏಸ್ ವಾಹನ ಬರುತ್ತಲೇ ಜನರು ಮುಗಿಬಿದ್ದು ಹತ್ತುವ ದೃಶ್ಯಗಳು ಸಾಮಾನ್ಯವಾಗಿತ್ತು, ಇನ್ನು ಸೀಟ್ ಸಿಗದೇ ಟಾಟಾ ಏಸ್ ವಾಹನದ ಹೊರಗೆ ನೇತಾಡಿಕೊಂಡೆ ಪ್ರಯಾಣಿಕರು ತೆರಳಿದ್ದು ಸಂದರ್ಭದ ಅನಿವಾರ್ಯತೆಗೆ ಹಿಡಿದ ಕನ್ನಡಿಯಂತಿತ್ತು. ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ಜನರು ಆಗಮಿಸಲು ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ,  ಜನರು ಟ್ರಾಕ್ಟರ್​ಗಳಲ್ಲಿ ಹೋಗುತ್ತಿದ್ದ ದೃಶ್ಯಗಳು ಕಂಡುಬಂತು. ಕೋಲಾರದ ಕ್ಲಾಕ್ ಟವರ್ ಬಳಿ, ಬೆಂಗಳೂರು ಮಾಲೂರು ಕಡೆಗೆ ತೆರಳಲು ಪ್ರಯಾಣಿಕರು ಗಂಟೆಗಟ್ಟಲೆ ಕಾದರು ಬಸ್ ಇಲ್ಲದೆ, ಖಾಸಗಿ ಬಸ್‍ಗಳು ಬಂದಾಕ್ಷಣ ಹತ್ತಲು ಮುಗಿಬಿದ್ದ ಪ್ರಯಾಣಿಕರು, ಬಸ್ಸಲ್ಲಿ ಸೀಟಿಲ್ಲದೆ ಇದ್ದರು, ನಿಂತೇ ಪ್ರಯಾಣಿಸಿದರು, ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಇದ್ಯಾವುದನ್ನು ಸಾರ್ವಜನಿಕರು ಪರಿಗಣಿಸಲೇ ಇಲ್ಲ.

ಇನ್ನು ಕ್ಲಾಕ್ ಟವರ್ ವೃತ್ತದಲ್ಲಿ ಮಹಿಳೆಯೊಬ್ಬರು ಪುಟ್ಟ ಕಂದಮ್ಮನನ್ನ ಹಿಡಿದು ಬಸ್ಸಿಗಾಗಿ ಕಾಯುತ್ತಿದ್ದರು, ತಮಿಳುನಾಡಿನ ಹೊಸೂರಿಗೆ ತೆರಳಲು ಬಸ್ಸಿಲ್ಲದೆ ಪರದಾಡಿದರು, ಬಸ್ ಮುಷ್ಕರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಆಟೋ ಹಾಗು ಖಾಸಗಿ ಬಸ್‍ಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದರು

ಕಲ್ಲು ತೂರಾಟ

ಮಧ್ಯಾಹ್ನದ ವೇಳೆಗೆ ನಿಧಾನವಾಗಿ ಬಸ್​ ಸಂಚಾರ ಆದಾಗ ಚಲುವನಹಳ್ಳಿ ಗೇಟ್​ ಬಳಿ ಕೆಲ ಕಿಡಿಗೇಡಿಗಳು ಬಸ್​ ಮೇಲೆ ಕಲ್ಲು ತೂರಾಟ ನಡೆಸಿದರು. ಮುಖ ಮುಚ್ಚಿಕೊಂಡ ಬಂದ ಕೆಲವರು ಮಾಲೂರಿನಿಂದ ಬರುತ್ತಿದ್ದ ಬಸ್​ ಮೇಲೆ ಕಲ್ಲು ತೂರಿದರು. ಇದರಿಂದ ಬಸ್​ ಮುಂಭಾಗದ ಗಾಜು ಪುಡಿಯಾಗಿ, ಜಖಂ ಗೊಂಡಿತು.ಕೋಲಾರ ನಗರದಲ್ಲಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್

ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನಲೆ ಆಟೋ ಚಾಲಕರು ಹಾಗು ಖಾಸಗಿ ಬಸ್‍ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿರುವ ಆರೋಪವನ್ನ ಸಾರ್ವಜನಿಕರು ಮಾಡುತ್ತಿದ್ದಾರೆ ಆಟೋ ಚಾಲಕರು 50 ರೂಪಾಯಿ ತೆಗೆದುಕೊಳ್ಳುವ ಕಡೆ 100 ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪವನ್ನ ಪ್ರಯಾಣಿಕರೇ ಮಾಡ್ತಿದ್ದಾರೆ, ಹಾಗಾಗಿ ನಗರದಲ್ಲಿ ಆಟೋ ಚಾಲಕರು ಎಷ್ಟು ಹಣ ಪಡೆದುಕೊಳ್ತಿದ್ದಾರೆ, ಈ ಬಗ್ಗೆ ಕೋಲಾರದಲ್ಲಿ  ರಿಯಾಲಿಟಿ ಚೆಕ್ ಮಾಡಿದಾಗ, ಹೆಚ್ಚುವರಿ ಹಣ ಪಡೆದುಕೊಳ್ಳುವುದು ಬೆಳಕಿಗೆ ಬಂದಿದೆ. ಕೋಲಾರ ನಗರದ ಹೊರವಲಯದ ಟಮಕ ಬಡಾವಣೆಗೆ ಹೋಗಲು ಸಾಮಾನ್ಯವಾಗಿ 60 ರೂಪಾಯಿ ತೆಗೆದುಕೊಳುತ್ತಾರೆ. ಆದರೆ ಈಗ 100 ರಿಂದ 120 ರೂಪಾಯಿ ಹಣವನ್ನ ಆಟೋ ಚಾಲಕರು ಪಡೆದುಕೊಳ್ಳುತ್ತಿದ್ದಾರೆ. ಇನ್ನು  ಖಾಸಗಿ ಬಸ್ ಗಳಲ್ಲು  20 ರಿಂದ 30 ರೂಪಾಯಿ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದ್ದಾರೆಂದು ಶ್ರೀನಿವಾಸಪುರ ಮೂಲಕ ಕಾಲೇಜು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಸಾರಿಗೆ ನೌಕರರ ಮುಷ್ಕರ ಆಟೋ ಚಾಲಕರು ಹಾಗು ಖಾಸಗಿ ಬಸ್ ಗಳಿಗೆ ವರದಾನವಾಗಿ ಪರಿಣಮಿಸಿದ್ದು, ಇತ್ತ ಒಲ್ಲದ ಮನಸ್ಸಿಂದಲೇ ಅನಿವಾರ್ಯವಾಗಿ ಜನರು ಹೆಚ್ಚು ಆರ್ಥಿಕ ಹೊರೆಯಾದರು, ಖಾಸಗಿ ಬಸ್ಸಿನಲ್ಲಿಯೇ ಒಡಾಡುತ್ತಿದ್ದಾರೆ
Published by:Seema R
First published: