KSRTC Workers Strike: ಬಸ್ ಮುಷ್ಕರ ಎಫೆಕ್ಟ್: ಶ್ರೀಶೈಲ ಯಾತ್ರಿಗಳ ಜೇಬಿಗೆ ದುಪ್ಪಟ್ಟು ಕತ್ತರಿ...!

ಶ್ರೀಶೈಲಕ್ಕೆ ಹೋದವರ ಆಂಧ್ರ ಪ್ರದೇಶದ ಬಸ್ ಗಳ ಮುಖಾಂತರ ರಾಯಚೂರಿಗೆ ಬಂದಿದ್ದಾರೆ. ಅಲ್ಲಿಂದ ತಮ್ಮ ಗ್ರಾಮಗಳಿಗೆ ತೆರಳಲು ಆಗುತ್ತಿಲ್ಲ. ಇದರಿಂದಾಗಿ ಶ್ರೀಶೈಲ ಯಾತ್ರಿಗಳು ರಾಯಚೂರಿನಲ್ಲಿ ದುಬಾರಿ ಹಣ ಕೊಟ್ಟು ಖಾಸಗಿ ವಾಹನಗಳ ಮುಖಾಂತರ ಪ್ರಯಾಣಿಸಬೇಕಾಗಿದೆ. ಕುಟುಂಬ ಸಮೇತರಾಗಿ ತಮ್ಮ ಗ್ರಾಮಗಳನ್ನು ಸೇರಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಪ್ರಯಾಣಿಕರು

ಪ್ರಯಾಣಿಕರು

  • Share this:
ರಾಯಚೂರು(ಏ.08): ಆರನೆಯ ವೇತನದ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಇಂದು ಸಹ ರಾಯಚೂರು ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು.  ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಅದರಲ್ಲಿ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತರಂತೂ ತೀವ್ರ ಸಂಕಷ್ಟ ಅನುಭವಿಸಿದರು.

ಸಾಮಾನ್ಯವಾಗಿ ಶಿವರಾತ್ರಿಯಿಂದ ಯುಗಾದಿಯವರೆಗೂ ಆಂಧ್ರದ ಕರ್ನೂಲ ಜಿಲ್ಲೆಯ ಶ್ರೀಶೈಲಕ್ಕೆ ಕರ್ನಾಟಕದ ಭಕ್ತರ ದಂಡೆ ಪ್ರಯಾಣ ಬೆಳಸುತ್ತದೆ, ಶಿವರಾತ್ರಿಯ ರಥೋತ್ಸವಕ್ಕೆ ಆಂಧ್ರದಿಂದ ಅಧಿಕ ಸಂಖ್ಯೆ ಭಕ್ತರು ಆಗಮಿಸಿದರೆ, ಯುಗಾದಿಯಂದು ಉತ್ತರ ಕರ್ನಾಟಕದ ಭಕ್ತರು ಆಗಮಿಸುವುದು ಹೆಚ್ಚು. ಶ್ರೀಶೈಲಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಬಹುತೇಕರು ತಮ್ಮ ತಮ್ಮ ಗ್ರಾಮಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುವುದು ವಾಡಿಕೆ, ಆದರೆ ಈಗ ಪಾದಯಾತ್ರೆ ಹೋಗಿ ಬರುವ ಭಕ್ತರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು ತೀವ್ರ ತೊಂದರೆಯಾಗಿದೆ.

ಇನ್ನೊಂದು ಕಡೆ ಆಂಧ್ರದಲ್ಲಿರುವ ಶ್ರೀಶೈಲ ದಿಂದ ಹೇಗೊ ರಾಯಚೂರಿಗೆ ಬರುತ್ತಾರೆ. ಆದರೆ ಇಲ್ಲಿಂದ ತಮ್ಮ ಊರು ಮುಟ್ಟಲು ಪರದಾಡುವಂತಾಗಿದೆ. ಯಾತ್ರಿಗೆ ಹೋದವರು ಇನ್ನೇನು ತಮ್ಮೂರಿಗೆ ಹೋಗುತ್ತೇವೆ ಎಂದು ತಮ್ಮಲ್ಲಿದ್ದ ಹಣ ಖರ್ಚು ಮಾಡಿಕೊಂಡು ನಾರ್ಮಲ್​ ಬಸ್ ಪ್ರಯಾಣಕ್ಕೆ ಬೇಕಾಗುವಷ್ಟು ಹಣವಿಟ್ಟುಕೊಂಡು ಬರುತ್ತಾರೆ. ಆಂಧ್ರದಲ್ಲಿ ಬಸ್ ಮುಷ್ಕರವಿಲ್ಲ ಆದರೆ ಕರ್ನಾಟಕಕ್ಕೆ ಬಂದ ತಕ್ಷಣ ಇಲ್ಲಿ ಬಸ್ ಇಲ್ಲದೆ ಇರುವುದು ಭಕ್ತರಿಗೆ ಮುಂದೇನು ಮಾಡಬೇಕೆನ್ನುವ ಚಿಂತೆ ಕಾಡುವಂತಾಗಿದೆ.

ಚಾಮರಾಜನಗರ: ವಿದ್ಯಾರ್ಥಿಗಳು, ಅರ್ಚಕರು ಸೇರಿ 27 ಮಂದಿಗೆ ಕೊರೋನಾ ಸೋಂಕು

ಖಾಸಗಿ ವಾಹನಗಳು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದರಿಂದ ಭಕ್ತರ ಜೇಬಿಗೆ ಕತ್ತರಿ ಬೀಳುತ್ತಿದೆಕಳೆದ ವರ್ಷ ಇದೇ ಸಮಯಕ್ಕೆ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಶ್ರೀಶೈಲ ಮಠ ಬಾಗಿಲು ಹಾಕಿದ್ದು ಕರ್ನಾಟಕದ ಭಕ್ತರಿಗೆ ದರ್ಶನ ಸಿಕ್ಕಿರಲಿಲ್ಲ, ಈ ವರ್ಷ ಹೇಗೆ ಶ್ರೀಶೈಲ ಮುಟ್ಟಿ ವಾಪಸ್ಸು ಬರಲು ಈಗ ಎರಡು ದಿನಗಳಿಂದ ತೊಂದರೆ ಅನುಭವಿಸುವಂತಾಗಿದೆ.

ಶ್ರೀಶೈಲಕ್ಕೆ ಹೋದವರ ಆಂಧ್ರ ಪ್ರದೇಶದ ಬಸ್ ಗಳ ಮುಖಾಂತರ ರಾಯಚೂರಿಗೆ ಬಂದಿದ್ದಾರೆ. ಅಲ್ಲಿಂದ ತಮ್ಮ ಗ್ರಾಮಗಳಿಗೆ ತೆರಳಲು ಆಗುತ್ತಿಲ್ಲ. ಇದರಿಂದಾಗಿ ಶ್ರೀಶೈಲ ಯಾತ್ರಿಗಳು ರಾಯಚೂರಿನಲ್ಲಿ ದುಬಾರಿ ಹಣ ಕೊಟ್ಟು ಖಾಸಗಿ ವಾಹನಗಳ ಮುಖಾಂತರ ಪ್ರಯಾಣಿಸಬೇಕಾಗಿದೆ. ಕುಟುಂಬ ಸಮೇತರಾಗಿ ತಮ್ಮ ಗ್ರಾಮಗಳನ್ನು ಸೇರಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಈಗ ದೇಶದಲ್ಲಿ ಕೊರೊನಾ ಎರಡನೆಯ ಅಲೆ ಏರುತ್ತಿರುವಾಗ ಕೊರೊನಾ ಭಯದ ಮಧ್ಯೆಯೂ ಕಿಕ್ಕಿರಿದು ಜನ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂತು, ಬೇಗನೆ ಬಸ್ ಮುಷ್ಕರ ಅಂತ್ಯವಾಗಲಿ ಎಂದು ಶ್ರೀಶೈಲ ಭಕ್ತರು ಆಗ್ರಹಿಸಿದ್ದಾರೆ.

ಇನ್ನೊಂದು ಕಡೆ ರಾಯಚೂರು ತೆಲಂಗಾಣ ಹಾಗು ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿದೆ, ಈ ಎರಡು ರಾಜ್ಯಗಳಿಂದ ರಾಯಚೂರು ಮಾರ್ಗವಾಗಿ ಸಂಚರಿಸುವವರು ಬಹಳಷ್ಟು ಜನ, ಅಲ್ಲಿ ಕರ್ನಾಟಕದಲ್ಲಿ ಬಸ್ ಮುಷ್ಕರದ ಮಾಹಿತಿ ಇಲ್ಲದೆ ಬಂದವರಿಗೆ ಇಲ್ಲಿ ಬಸ್ ಇಲ್ಲದೆ ಇರೋದು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ.

ಮಕ್ಕಳು, ವೃದ್ದರೊಂದಿಗೆ ಕುಟುಂಬಗಳು ಇಡೀ ದಿನ ಬಸ್ ನಿಲ್ದಾಣದಲ್ಲಿ ಕಾಯಿಯುವಂತಾಗಿದೆ, ಇಲ್ಲದೆ ಅಧಿಕ ಹಣ ನೀಡಿ ಪ್ರಯಾಣಿಸುವಂತಾಗಿದೆ, ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾಗಲಿ ಎಂದು ಆಗ್ರಹಿಸುತ್ತಿದ್ದಾರೆ
Published by:Latha CG
First published: