• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸ್ಟೇರಿಂಗ್ ಹಿಡಿದ ಕೆಲ ಚಾಲಕರು; ತಟ್ಟೆ, ಗ್ಲಾಸ್ ಹಿಡಿದು ಪ್ರತಿಭಟಿಸಿದ ಸಾರಿಗೆ ಸಿಬ್ಬಂದಿ ಕುಟುಂಬದ ಸದಸ್ಯರು

ಸ್ಟೇರಿಂಗ್ ಹಿಡಿದ ಕೆಲ ಚಾಲಕರು; ತಟ್ಟೆ, ಗ್ಲಾಸ್ ಹಿಡಿದು ಪ್ರತಿಭಟಿಸಿದ ಸಾರಿಗೆ ಸಿಬ್ಬಂದಿ ಕುಟುಂಬದ ಸದಸ್ಯರು

ತಟ್ಟೆ, ಗ್ಲಾಸ್ ಹಿಡಿದು ಪ್ರತಿಭಟಿಸಿದ ಸಾರಿಗೆ ಸಿಬ್ಬಂದಿ ಕುಟುಂಬಸ್ಥರು

ತಟ್ಟೆ, ಗ್ಲಾಸ್ ಹಿಡಿದು ಪ್ರತಿಭಟಿಸಿದ ಸಾರಿಗೆ ಸಿಬ್ಬಂದಿ ಕುಟುಂಬಸ್ಥರು

ಕ್ವಾರ್ಟರ್ಸ್ ಬಿಡಿಸಲು ನೋಟೀಸ್ ಜಾರಿ ಮಾಡಲಾಗಿದೆ. ಮನೆಗಳಿಗೆ ನೋಟೀಸ್ ಹಚ್ಚಿ ಹೋಗಲಾಗಿದೆ. ಸಾರಿಗೆ ನೌಕರರನ್ನು ಬೀದಿಪಾಲು ಮಾಡೋ ಹುನ್ನಾರ ನಡೆದಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

  • Share this:

ಹುಬ್ಬಳ್ಳಿ(ಏ.12): ಒಂದು ಕಡೆ ಸಾರಿಗೆ ನೌಕರರ ಮುಷ್ಕರ ಮುಂದುವರಿದಿರುವಂತೆಯೇ ಸರ್ಕಾರದ ಒತ್ತಡಕ್ಕೆ ಮಣಿದು ಕೆಲ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಾರಂಭಿಸಿದ್ದಾರೆ. ಕೆಲ ಚಾಲಕರು ಬಸ್ ಸ್ಟೇರಿಂಗ್ ಹಿಡಿಯುತ್ತಿರೋ ಸಂದರ್ಭದಲ್ಲಿಯೇ ಸಾರಿಗೆ ಸಿಬ್ಬಂದಿಯ ಕುಟುಂಬದ ಸದಸ್ಯರು ತಟ್ಟೆ, ಗ್ಲಾಸ್ ಹಿಡಿದು ಹುಬ್ಬಳ್ಳಿಯಲ್ಲಿ ರಸ್ತೆಗಿಳಿದಿದ್ದಾರೆ.


ಸಾರಿಗೆ ನೌಕರರ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ.  ಇಷ್ಟಾದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ, ತಟ್ಟೆ, ಗ್ಲಾಸ್ ಹಿಡಿದು ರಸ್ತೆಗಿಳಿದ ಸಾರಿಗೆ ಸಿಬ್ಬಂದಿ ಕುಟುಂಬ ಸದಸ್ಯರು ವಿನೂತನವಾಗಿ ಪ್ರತಿಭಟಿಸಿದರು. ಪ್ಲೇಟ್, ಗ್ಲಾಸ್ ಗಳಿಂದ ಬಾರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರೋ ಕೆ.ಎಸ್.ಆರ್.ಟಿ.ಸಿ ಕ್ವಾರ್ಟರ್ಸ್ ಎದುರು ಪ್ರತಿಭಟನೆ ಮಾಡಲಾಯಿತು. ಮಕ್ಕಳೊಂದಿಗೆ ಪ್ರತಿಭಟನೆ ಮಾಡಿದ ಕುಟುಂಬದ ಸದಸ್ಯರು, ಸರ್ಕಾರದ ಧೋರಣೆಯನ್ನು ಖಂಡಿಸಿದರು. ಸಾರಿಗೆ ನೌಕರರು ಅತ್ಯಂತ ಕಡಿಮೆ ವೇತನಕ್ಕೆ ದುಡೀತಿದಾರೆ. ಆದರೂ ವೇತನ ಹೆಚ್ಚಳಕ್ಕೆ ಮುಂದಾಗ್ತಿಲ್ಲ. ನೌಕರರನ್ನು ವಜಾಗೊಳಿಸಿ, ವರ್ಗಾವಣೆ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸಲಾಗ್ತಿದೆ ಎಂದು ಆರೋಪಿಸಿದರು.


ಕ್ವಾರ್ಟರ್ಸ್ ಬಿಡಿಸಲು ನೋಟೀಸ್ ಜಾರಿ ಮಾಡಲಾಗಿದೆ. ಮನೆಗಳಿಗೆ ನೋಟೀಸ್ ಹಚ್ಚಿ ಹೋಗಲಾಗಿದೆ. ಸಾರಿಗೆ ನೌಕರರನ್ನು ಬೀದಿಪಾಲು ಮಾಡೋ ಹುನ್ನಾರ ನಡೆದಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ವೇತನವನ್ನೂ ಬಿಡುಗಡೆ ಮಾಡದೇ ಇರೋದ್ರಿಂದ ಜೀವನ ನಿರ್ವಹಣೆ ಕಷ್ಟವಾಗಲಾರಂಭಿಸಿದೆ. ಹಬ್ಬದ ಸಂದರ್ಭದಲ್ಲಿ ನಾವೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕೂಡಲೇ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸೋದಾಗಿ ಕುಟುಂಬದ ಸದಸ್ಯರು ಎಚ್ಚರಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಕ್ವಾರ್ಟರ್ಸ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ನಿರ್ಮಾಣವಾದ ಪರಿಸರ ಸ್ನೇಹಿ ತರಗತಿ ಕೊಠಡಿ‌


ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ....


ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಸಾರಿಗೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಕ್ಕೆ ಸಂಬಂಧಿಸಿ ಎರಡು ಪ್ರಕರಣ ದಾಖಲಾಗಿವೆ. ಹುಬ್ಬಳ್ಳಿಯ ಗೊಕುಲ ರಸ್ತೆಯಲ್ಲಿ ಸಾರಿಗೆ ಬಸ್ ಅಡ್ಡಗಟ್ಟಿ, ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದವರ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟ ಸಾರಿಗೆ ಚಾಲಕನಿಗೆ ನವಲಗುಂದದಲ್ಲಿ ಬೆದರಿಕೆ ಹಾಕಿ, ಬಸ್ ಕೀ ಕಿತ್ತಿಕೊಳ್ಳಲು ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು, ಶಿವಾನಂದ ಎಂಬಾತನ ವಿರುದ್ಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಕರ್ತವ್ಯಕ್ಕೆ ಗೈರಾದ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ವಿಭಾಗದಿಂದ 17 ಸಿಬ್ಬಂದಿಗೆ ವರ್ಗಾವಣೆಚಿಕ್ಕೋಡಿ ವಿಭಾಗಕ್ಕೆ 6, ಬೆಳಗಾವಿ ಮತ್ತು ಶಿರ್ಸಿ ವಿಭಾಗಕ್ಕೆ ತಲಾ ನಾಲ್ಕು ಹಾಗೂ ಹಾವೇರಿ ವಿಭಾಗಕ್ಕೆ ಮುವ್ವರು ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.


ಇದೇ ವೇಳೆ ಸಾರಿಗೆ ನೌಕರರ ಮುಷ್ಕರಕ್ಕೆ ಬಿ.ಎಸ್.ಪಿ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿರೋ ಬಿ.ಎಸ್.ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಸಾರಿಗೆ ನೌಕರರ ಮುಷ್ಕರದ ವಿಷಯದಲ್ಲಿ ಸರ್ಕಾರ ಮೊಂಡುತನ ಮಾಡಬಾರದು. ಅವರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

top videos
    First published: