ಚಿಕ್ಕಮಗಳೂರು(ಏ.11): ಯಡಿಯೂರಪ್ಪನವರೇ... ಬಿಜೆಪಿಯನ್ನ ನಂಬಿ ಓಟು ಹಾಕಿದ್ದಕ್ಕೆ ಒಳ್ಳೆ ಬಹುಮಾನ ನೀಡಿದ್ದೀರಾ. ನಾವು ಚಿಕ್ಕಂದಿನಿಂದ ಬಿಜೆಪಿಗೆ ಬೆಲೆ ಕೊಟ್ಟವರು. ಇವತ್ತು ನಮಗೆ ಇಷ್ಟು ನೋವಾಗಿದೆ. ನೀವು ನಮಗೆ ಹೆದರಿ ವರ್ಗಾವಣೆ ಮಾಡಿದ್ದೀರಾ. ನೀವು ಸಂಬಳ ಕೊಟ್ಟಿಲ್ಲ ಅಂತ ನಾವು ಯುಗಾದಿ ಹಬ್ಬ ಮಾಡುವುದು ಬಿಡಲ್ಲ. ಬೀದಿಯಲ್ಲೇ ಒಲೆ ಹಚ್ಚಿ, ಬೀದಿಯಲ್ಲೇ ಹೋಳಿಗೆ-ಪಾಯಸ ಮಾಡಿ ಹಬ್ಬ ಮಾಡೇ ಮಾಡ್ತೀವಿ. ಮಾಡಿ ತೋರಿಸ್ತೀವಿ ಎಂದು ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ನೌಕರರು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಚಿಕ್ಕಮಗಳೂರಿನ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಮಗೆ ಸಂಬಳ ನೀಡಿಲ್ಲ. ನಮಗೆ ಜೀವನ ಮಾಡಲು ಆಗ್ತಿಲ್ಲ. ನಮ್ಮ ನೋವು ನಿಮಗೆ ಅರ್ಥ ಆಗ್ತಿಲ್ವಾ? ನೀವು ಸಂಬಳ ನೀಡಿಲ್ಲ ಅಂತ ನಾವು ಬೀದಿಗೆ ಬಂದಿದ್ದೇವೆ. ಕ್ವಾಟ್ರಸ್ ಖಾಲಿ ಮಾಡಿ ಅಂತ ದೌರ್ಜನ್ಯ ಮಾಡ್ತಿದ್ದೀರಾ. ಹೆಣ್ಣು ಮಕ್ಕಳನ್ನ ವರ್ಗಾವಣೆ ಮಾಡಿರೋದು ಸರ್ಕಾರದ ಇತಿಹಾಸದಲ್ಲೇ ಇರಲಿಲ್ಲ. ಹೆಣ್ಣು ಮಕ್ಕಳನ್ನ ವರ್ಗಾವಣೆ ಮಾಡಿ ಮಾದರಿಯಾಗಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ. ನೀವು ವರ್ಗಾವಣೆ ಮಾಡಿದ್ದೀರಾ ಎಂದು ನಾವು ಹೋಗಲು ರೆಡಿ ಇಲ್ಲ. ನಮಗೆ ದಯಾಮರಣ ಕೊಡಿ. ಸಂಸ್ಥೆಯಲ್ಲಿ 15-20 ವರ್ಷ ದುಡಿದಿದ್ದೇವೆ. ಸಾಕು, ದಯಾಮರಣ ಕೊಡಿ ಎಂದು ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಜನರು ಸಹಕಾರ ನೀಡದಿದ್ದರೆ ಲಾಕ್ಡೌನ್ ಅನಿವಾರ್ಯ; ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್
ಬಸ್ಸನ್ನ ನೀವು ಓಡಿಸಿ, ಇಲ್ಲ ನಮಗೆ ಬಿಡಿ; ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ :
ಒಂದೋ ನೀವೇ ಬಸ್ಸನ್ನ ಓಡಿಸಿಕೊಳ್ಳಿ ಇಲ್ಲ ನಮಗೆ ಬಿಡಿ ಹೀಗೆ ಬಂದಾಗ, ಬೇಕಾದಾಗ ಒಂದೊಂದೇ ಬಸ್ ತಂದು ಬಿಟ್ಟುಕೊಂಡರೇ ನಮಗೆ ನಷ್ಟವಾಗುತ್ತೆ ಎಂದು ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಆಗ್ರಹಿಸಿರುವ ಘಟನೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.
ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರೋ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿರೋ ಸಾರಿಗೆ ನೌಕಕರು ಬಸ್‍ಗಳನ್ನ ತೆಗೆಯದ ಕಾರಣ ಸರ್ಕಾರ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳ ಮೂಲಕ ಸಾರ್ವಜನಿಕ ಸೇವೆಗೆ ಮುಂದಾಗಿತ್ತು. ಆದರೆ, ದಿನಕಳೆದಂತೆ ಒಬ್ಬೊಬ್ಬ ಡ್ರೈವರ್-ಕಂಡಕ್ಟರ್‍ಗಳು ಸೇವೆಗೆ ಬರುತ್ತಿರುವುದರಿಂದ ಒಂದೊಂದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಕೂಡ ರಸ್ತೆಗೆ ಇಳಿಯುತ್ತಿವೆ. ಇದು ಖಾಸಗಿ ಬಸ್ ಮಾಲೀಕರು-ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೋ ನೀವೇ ಬಸ್ ಓಡಿಸಿಕೊಳ್ಳಿ. ಇಲ್ಲ ನಮಗೆ ಬಿಡಿ ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಸಿದ್ದಾರೆ. ನೀವು ಹೀಗೆ ಒಂದೊಂದೆ ಬಸ್ ತಂದು ರಸ್ತೆಗೆ ಇಳಿಸಿದರೆ ನಮಗೆ ನಷ್ಟವಾಗುತ್ತೆ. ನಮಗೆ ಬಿಡಿ ಇಲ್ಲ ನೀವೇ ಓಡಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ನಾವು ಯಾರ ಬಳಿಯೂ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿಲ್ಲ. ಸರ್ಕಾರದ ದರ ನಿಗದಿಯಂತೆ ಸಾರ್ವಜನಿಕರ ಸೇವೆಗೆ ಬಂದಿದ್ದೇವೆ. ಇಡೀ ರಾತ್ರಿ ಸೊಳ್ಳೆಯಿಂದ ಕಚ್ಚಿಸಿಕೊಂಡು ಕ್ಯೂನಲ್ಲಿ ನಿಂತು ಬೆಳಗ್ಗೆ ಬಸ್ ಓಡಿಸೋರು ನಾವು. ನೀವು ಡ್ರೈವರ್-ಕಂಡಕ್ಟರ್ ಬಂದ ಕೂಡಲೇ ಬಸ್ ತಂದರೆ ನಮಗೆ ಕಷ್ಟ ಹಾಗೂ ನಷ್ಟವಾಗುತ್ತೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ