ಸದ್ಯದಲ್ಲೇ ಬಸ್​ ದರ ಏರಿಕೆ; ರಾಜ್ಯ ಸರ್ಕಾರ ಸೆಸ್​ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ; ಡಿಸಿಎಂ ಪರಮೇಶ್ವರ್​

news18
Updated:September 5, 2018, 1:58 PM IST
ಸದ್ಯದಲ್ಲೇ ಬಸ್​ ದರ ಏರಿಕೆ; ರಾಜ್ಯ ಸರ್ಕಾರ ಸೆಸ್​ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ; ಡಿಸಿಎಂ ಪರಮೇಶ್ವರ್​
news18
Updated: September 5, 2018, 1:58 PM IST
ನ್ಯೂಸ್​18 ಕನ್ನಡ

ಬೆಂಗಳೂರು/ ತುಮಕೂರು (ಸೆ. 5): ಡೀಸೆಲ್ ಬೆಲೆ ಏರಿದ್ದರಿಂದ ಸಾರಿಗೆ ಬಸ್ ದರ ಹೆಚ್ಚಳವಾಗಲಿದೆ. ಸಾರಿಗೆ ಸಚಿವರು ಈಗಾಗಲೇ ಟಿಕೆಟ್​ ದರ ಏರಿಕೆ ಮಾಡುವ ಪ್ರಸ್ತಾವನೆ ಇಟ್ಟಿದ್ದಾರೆ.  ರಾಜ್ಯ ಸರ್ಕಾರ ಸೆಸ್​ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್  ಸ್ಪಷ್ಟಪಡಿಸಿದ್ದಾರೆ.

ಇಂದು ತುಮಕೂರಿನಲ್ಲಿ ಮಾತನಾಡಿರುವ ಜಿ. ಪರಮೇಶ್ವರ್​, ತೈಲ ಉತ್ಪನ್ನ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ತೀರಾ ಕಡಿಮೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಪೆಟ್ರೋಲ್ ದರ ಇಳಿಸುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಬಸ್​ ಪ್ರಯಾಣ ದರವೂ ಹೆಚ್ಚಳವಾಗುವ ಕುರಿತು ನಿನ್ನೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪ್ರಸ್ತಾಪಿಸಿದ್ದರು. ಅದಕ್ಕೆ ಪೂರಕವೆಂಬಂತೆ ಇಂದು ಉಪಮುಖ್ಯಮಂತ್ರಿ ಪರಮೇಶ್ವರ್​ ಕೂಡ ಟಿಕೆಟ್​ ದರ ಏರಿಕೆ ಬಗ್ಗೆ ಮಾತನಾಡಿರುವುದು ಗಮನಿಸಿದರೆ ಸದ್ಯದಲ್ಲೇ ಪ್ರಯಾಣಿಕರಿಗೆ ಬಸ್​ ಟಿಕೆಟ್​ ಹೆಚ್ಚಳದ ಬಿಸಿ ತಟ್ಟುವುದು ಖಚಿತ.

ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ನಿಗಮಗಳು ಶೇ. 18ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ 3 ತಿಂಗಳ ಹಿಂದೆಯೇ ಬೇಡಿಕೆಯಿಟ್ಟಿದ್ದವು. ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಇಷ್ಟು ದಿನ ಆ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿತ್ತು. ಪ್ರತಿ ದಿನ ಇಂಧನದ ಬೆಲೆ ಹೆಚ್ಚುತ್ತಲೇ ಇದೆ. ಇದರಿಂದಾಗಿ 3 ತಿಂಗಳಲ್ಲಿ ನಿಗಮಗಳು 186 ಕೋಟಿ ನಷ್ಟ ಅನುಭವಿಸಿವೆ. ಹೀಗಾಗಿ, ದರ ಏರಿಕೆ ಅನಿವಾರ್ಯ ಎಂದು ನಿನ್ನೆ ಸಚಿವ ತಮ್ಮಣ್ಣ ಹೇಳಿದ್ದರು.

ಸಾರಿಗೆ ಇಲಾಖೆಯೂ ನಷ್ಟದಲ್ಲಿದೆ. ಖಾಸಗಿ ಬಸ್ ಗಳು ದರ ಏರಿಸುತ್ತಲೇ ಇವೆ. ಕೆಎಸ್​ಆರ್​ಟಿಸಿ ರಾಜ್ಯದ ಎಲ್ಲೆಡೆ ಸರ್ಕಾರಿ ಬಸ್ ಸೇವೆ ಒದಗಿಸುವ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುವುದು ಎಂದರು.
Loading...

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 21 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ನಾವು ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು. ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಬೆಲೆ 82 ರೂ., ಒಂದು ಲೀಟರ್ ಡೀಸೆಲ್ ಬೆಲೆ 75 ರೂ. ಇದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...