KSRTC Cargo- ಕೆಎಸ್ಆರ್​ಟಿಸಿಗೆ ಲಾಭದ ಕುದುರೆಯಾಗಿದೆ ಈ ಹೊಸ ಯೋಜನೆ; ಖಾಸಗಿಯವರನ್ನೂ ಮೀರಿಸುವ ಕಾರ್ಗೊ ಸೇವೆ

Parcel Service- ನಿರಂತರ ಆರ್ಥಿಕ ಸಂಕಷ್ಟದಿಂದ ಜರ್ಝರಿತಗೊಂಡಿರುವ ಸಾರಿಗೆ ಇಲಾಖೆಗೆ ಈಗ ತಾನು ಪ್ರಾರಂಭಿಸಿದ ನಮ್ಮ ಕಾರ್ಗೋ ಎಂಬ ಹೊಸ ಸೇವೆ ಕೈಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಖಾಸಗಿಯವರಿಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತಿರುವ ಪಾರ್ಸಲ್ ಸೇವೆಗೆ ಜನರೂ ಸ್ಪಂದಿಸುತ್ತಿದ್ಧಾರೆ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

  • Share this:
ಬೆಂಗಳೂರು: ಕೊರೊನಾದಿಂದ ಸಾರಿಗೆ ಇಲಾಖೆ (Transportation Department) ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ಸಿಬ್ಬಂದಿಗೆ ತಿಂಗಳ ವೇತನ ನೀಡಲು ಸರ್ಕಾರದ ಮುಂದೆ ಕೈ ಒಡ್ಡಬೇಕಾದ ಸ್ಥಿತಿ ಇದೆ. ಇಂಥ ಹೊತ್ತಿನಲ್ಲಿಯೇ ಶುರುವಾದ ಈ ಯೋಜನೆ ಸಾರಿಗೆ ಇಲಾಖೆ ಕೈ ಹಿಡಿಯುತ್ತಿದೆ. ಮನಸು ಮಾಡಿದರೆ ಈ ಯೋಜನೆಯು ಇಲಾಖೆಯ ಆದಾಯ ಇನ್ನಷ್ಟು ಹೆಚ್ಚಿಸಲಿದೆ. ಅಷ್ಟಕ್ಕೂ ಯಾವುದೀ ಈ ಯೋಜನೆ ಅಂತೀರಾ? ಇಲ್ಲಿದೆ ಮಾಹಿತಿ.

ಕಳೆದೆರಡು ವರುಷದಿಂದ ಸಾರಿಗೆ ಇಲಾಖೆ ನಷ್ಟದಲ್ಲಿಯೇ ಕಾಲ ನೂಕುತ್ತಿದೆ. ರಾಜ್ಯದ ಬಿಎಂಟಿಸಿ (BMTC), ಕೆ ಎಸ್ ಆರ್ ಟಿ ಸಿ (KSRTC) ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎನ್ನುವುದು ನಿಜ. ಸಾರಿಗೆ ಸಿಬ್ಬಂದಿಯ ತಿಂಗಳ ವೇತನಕ್ಕಾಗಿ ಸರಕಾರ ನೀಡುವ ಅನುದಾನಕ್ಕೆ ಕಾಯಬೇಕಾದ ಪರಿಸ್ಥಿತಿ ಇದೆ. ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಇಲಾಖೆಗೆ ಇಂಥ ಹೊತ್ತಿನಲ್ಲಿ “ನಮ್ಮ ಕಾರ್ಗೋ” ಸೇವೆ ಕೈ ಹಿಡಿದಿದೆ. ಈ ಯೋಜನೆಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಕೊರೋನಾ ಸಂಕಷ್ಟದಿಂದ‌ ಕಂಗೆಟ್ಟಿರುವ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನಷ್ಟಕ್ಕೆ ಕಡಿವಾಣ ಹಾಕಲು ನಮ್ಮ ಕಾರ್ಗೋ ಪಾರ್ಸೆಲ್ ಸೇವೆ (Namma Cargo Service) ಆರಂಭಿಸಲಾಗಿದೆ. ದಿನೇ ದಿನೇ‌ ಪಾರ್ಸೆಲ್ ಬುಕ್ಕಿಂಗ್ ಹೆಚ್ಚಾಗುತ್ತಿದೆ. ನಿತ್ಯ ಎರಡುವರೆ ಲಕ್ಷದಷ್ಟು ಸಂಗ್ರಹವಾಗುತ್ತಿದ್ದು, ರಾಜ್ಯದಾದ್ಯಂತ ಸೇರಿದಂತೆ‌ ನೆರೆಯ ರಾಜ್ಯಗಳಿಗೂ ಪಾರ್ಸೆಲ್ ಸೇವೆ ನೀಡಲಾಗುತ್ತಿದೆ.

ಇದನ್ನೂ ಓದಿ: ಭೀಕರ ಅಪಘಾತ: ಎಲೆಕ್ಟ್ರಾನಿಕ್​ ಸಿಟಿ ಫ್ಲೈವರ್​ನಿಂದ ಬಿದ್ದು ಯುವಕ-ಯುವತಿ ಸಾವು

ಇದೇ‌ ವರುಷ ಫೆಬ್ರವರಿ ತಿಂಗಳಿನಲ್ಲಿ ಆರಂಭವಾದ ನಮ್ಮ ಕಾರ್ಗೋ ಸೇವೆಯಲ್ಲಿ ಸಾರಿಗೆ ಬಸ್ ಮೂಲಕ ಪಾರ್ಸೆಲ್, ಕೊರಿಯರ್ ಸೇವೆ ನೀಡಲಾಗುತ್ತಿದೆ. ಖಾಸಗಿಯವರಿಗಿಂತ ಕಡಿಮೆ ದರದಲ್ಲಿ ಹಾಗೂ ವೇಗವಾಗಿ ಪಾರ್ಸೆಲ್ ರವಾನೆ ಮಾಡಲಾಗುತ್ತಿದೆ.

ಇದೇ ಥರದ‌ ಯೋಜನೆಯನ್ನು ನೆರೆಯ ಆಂಧ್ರಪ್ರದೇಶದಲ್ಲಿ 2016ರಲ್ಲಿ ತರಲಾಗಿತ್ತು.‌ ಆದರೆ ಅಲ್ಲಿ ವರುಷಕ್ಕೆ 70 ಕೋಟಿ ಸಂಗ್ರಹವಾಗುತ್ತಿದೆ. ರಾಜ್ಯದಲ್ಲಿ ಮೊದಲ ವರುಷಕ್ಕೆ ಸಾವಿರ ಕೋಟಿಯಷ್ಟು ವ್ಯವಹಾರ ಗುರಿ ಇಲಾಖೆಗೆ ಇದೆ. ರಾಜ್ಯದಲ್ಲಿ ಕಾರ್ಗೋ ಸೇವೆಯಿಂದ ಮಾರ್ಚ್​ನಲ್ಲಿ 38 ಲಕ್ಷ, ಏಪ್ರಿಲ್​ನಲ್ಲಿ 12 ಲಕ್ಷ, ಜೂನ್ ತಿಂಗಳಲ್ಲಿ 3.5 ಲಕ್ಷ, ಜುಲೈ ತಿಂಗಳಲ್ಲಿ 33 ಲಕ್ಷ, ಆಗಸ್ಟ್ ತಿಂಗಳಲ್ಲಿ 45 ಲಕ್ಷ ರೂ ಆದಾಯ ಗಳಿಸಿದೆ. ಮೇ‌ ತಿಂಗಳು ಕೋವಿಡ್ ಕಾರಣ ಯಾವುದೇ ಆದಾಯ ಆಗಿಲ್ಲ.

ಇದನ್ನೂ ಓದಿ: New ITI courses- ಈ ವರ್ಷದಿಂದಲೇ ಆರು ಹೊಸ ಕೋರ್ಸ್​ಗಳ ಪ್ರವೇಶಾತಿಗೆ ಅವಕಾಶ

ನಮ್ಮ ಕಾರ್ಗೋ ಸೇವೆಯಿಂದ ಸಿಗುವ ಲಾಭದಲ್ಲಿ ಶೇ.80ರಷ್ಟು ಲಾಭಾಂಶವು ಸಾರಿಗೆ ಇಲಾಖೆಗೆ ಹಾಗೂ ಉಳಿದ ಶೇ.20ರಷ್ಟು ಕಾರ್ಗೋ ನಡೆಸುವವರಿಗೆ ಸಿಗಲಿದೆ. ಉತ್ತಮ ಆದಾಯ ತರುತ್ತಿರುವ ನಮ್ಮ‌ ಕಾರ್ಗೋ ಪಾರ್ಸೆಲ್, ಕೋರಿಯರ್ ಸೇವೆಗೆ ಸಾರ್ವಜನಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಾರಿಗೆ ಇಲಾಖೆಯ ನಮ್ಮ ಕಾರ್ಗೋ ಖಾಸಗಿಯವರಿಗಿಂತ‌ ಕಡಿಮೆ ದರದಲ್ಲಿ, ವೇಗವಾಗಿ ಪಾರ್ಸೆಲ್ ತಲುಪಿಸಲಾಗುತ್ತಿದೆ. ಕಾರ್ಗೋ ಸರ್ವಿಸ್ ಹೋಂ‌ ಡೆಲಿವರಿ ಅವಶ್ಯಕತೆ ಇದೆ. ಇದಕ್ಕೆ ಸಾರಿಗೆ ಇಲಾಖೆ ಅನುಮತಿ ನೀಡುವ ಸಾಧ್ಯತೆಯೂ ಇದೆ. ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರೆ ಆದಾಯ ಇನ್ನಷ್ಟು ಹೆಚ್ಚಾಗಲಿದೆ. ಒಟ್ಟಿನಲ್ಲಿ ಸಂಕಷ್ಟದಲ್ಲಿರುವ ಸಾರಿಗೆ ಇಲಾಖೆಗೆ ನಮ್ಮ ಕಾರ್ಗೋ ಆದಾಯ ನೀಡುವ ಮೂಲಕ ಆಸರೆಯಾಗಿದೆ.

ವರದಿ: ಶರಣು ಹಂಪಿ

ಇದನ್ನೂ ಓದಿ: Bus Ticket Fare: ಸದ್ಯಕ್ಕೆ‌ ಬಸ್ ಟಿಕೆಟ್ ದರ‌ ಹೆಚ್ಚಳವಿಲ್ಲ, ಮುಷ್ಕರ ಮಾಡಿದ ಸಾರಿಗೆ ಸಿಬ್ಬಂದಿಗೂ ಗುಡ್ ನ್ಯೂಸ್
Published by:Vijayasarthy SN
First published: