ಯಾವೊಬ್ಬ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ; ಇವತ್ತು ಲಕ್ಷ್ಮಣ ಸವದಿನೂ ಮೂಲೆ ಗುಂಪೇ; ಸಾರಿಗೆ ಸಿಬ್ಬಂದಿ ಆಕ್ರೋಶ

ಪಿ.ಜಿ.ಆರ್.ಸಿಂಧ್ಯಾ ಮೂಲೆಗುಂಪು, ಸಗೀರ್ ಅಹಮದ್ ಹೇಳ ಹೆಸರಿಲ್ಲದಂತಾಗಿದ್ದಾರೆ. ಫ್ರಂಟ್ ಲೈನ್ ನಲ್ಲಿದ್ದ ಅಶೋಕ್ ಈಗ ಮೂಲೆಗುಂಪು. ಲಕ್ಷ್ಮಣ ಸವದಿಯದ್ದು ಅದೇ ಕಥೆ ಎಂದು ಸಾರಿಗೆ ಸಿಬ್ಬಂದಿಗಳು ಕಿಡಿಕಾರಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

  • Share this:
ಚಿಕ್ಕಮಗಳೂರು(ಡಿ.12): ಯಾವೊಬ್ಬ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ. ಈಗಿರುವ ಸಚಿವರದ್ದು ಅದೇ ಕಥೆ, ನಾವು ಇಂಥವರನ್ನ ಬಹಳ ಜನ ನೋಡಿದ್ದೇವೆ ಎಂದು ಸಾರಿಗೆ ಸಿಬ್ಬಂದಿಗಳು ಸರ್ಕಾರ ಹಾಗೂ ಮಾಜಿ-ಹಾಲಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದಲ್ಲಿ ಅಡುಗೆ ಮಾಡಿ ಊಟ ಮಾಡಲು ಪೊಲೀಸರು ಅನುಮತಿ ನೀಡಲಿಲ್ಲ. ಹೊರಗಡೆಯಿಂದ ತಂದು ತಿನ್ನಿ, ಇಲ್ಲಿ ಅಡುಗೆ ಮಾಡೋದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಅಡುಗೆ ಮಾಡಲು  ಅನುಮತಿ ನೀಡದ ಕಾರಣ ಸಾರಿಗೆ ಸಿಬ್ಬಂದಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವೊಬ್ಬ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ. ನಾವು ಬಹಳ ಜನರನ್ನ ನೋಡಿದ್ದೇವೆ. ಪಿ.ಜಿ.ಆರ್.ಸಿಂಧ್ಯಾ ಮೂಲೆಗುಂಪು, ಸಗೀರ್ ಅಹಮದ್ ಹೇಳ ಹೆಸರಿಲ್ಲದಂತಾಗಿದ್ದಾರೆ. ಫ್ರಂಟ್ ಲೈನ್ ನಲ್ಲಿದ್ದ ಅಶೋಕ್ ಈಗ ಮೂಲೆಗುಂಪು. ಲಕ್ಷ್ಮಣ ಸವದಿಯದ್ದು ಅದೇ ಕಥೆ ಎಂದು ಸಾರಿಗೆ ಸಿಬ್ಬಂದಿಗಳು ಕಿಡಿಕಾರಿದರು.

ಇಂದು ಪ್ರತಿಯೊಬ್ಬ ಸಾರಿಗೆ ಸಚಿವನೂ ಮೂಲೆಗುಂಪಾಗಿದ್ದಾನೆ. ಎಷ್ಟೋ ಜನ ಕಾರ್ಮಿಕ ಸಚಿವರು ವಾಶ್ ಔಟ್ ಆಗಿದ್ದಾರೆ. ವರ್ಷ ಪೂರ್ತಿ ದುಡಿಯುತ್ತೇವೆ. ನಮ್ಮ ಜಾಗದಲ್ಲಿ ನಮಗೆ ಅಡುಗೆ ಮಾಡಲು ಬಿಡ್ತಿಲ್ಲ ಎಂದು ಸರ್ಕಾರದ ವಿರುದ್ಧ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ಕೆಂಡಾಮಂಡಲರಾಗಿದ್ದರು.

ಮುಷ್ಕರ ನಿಲ್ಲಿಸುವಂತೆ ಬಿಎಂಟಿಸಿ ಎಂಡಿ ಶಿಖಾ ಮನವಿ; ಸಾರಿಗೆ ನೌಕರರ ಜೊತೆ ಮಾತುಕತೆಗೆ ಸವದಿಗೆ ಸಿಎಂ ಸೂಚನೆ

ಸಾರಿಗೆ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ :

ಬಸ್ ನಿಲ್ದಾಣದಲ್ಲೇ ಅಡುಗೆ ಮಾಡುವ ವಿಚಾರಕ್ಕೆ ಸಂಬಂಧಿಸಿದ ಪೊಲೀಸರು ಹಾಗೂ ಸಾರಿಗೆ ನೌಕರರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿರೋ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಗಳ ಸಂಚಾರವನ್ನ ಸಂಪೂರ್ಣ ಸ್ಥಗಿತಗೊಳಿಸಿರೋ ಸಾರಿಗೆ ಸಿಬ್ಬಂದಿಗಳು ಸರ್ಕಾರಿ ಬಸ್ ನಿಲ್ದಾಣದಲ್ಲೇ ಅಡುಗೆ ಮಾಡಿ ಊಟ ಮಾಡಲು ಮುಂದಾಗಿದ್ದರು.

ನೌಕರರ ಈ ನಡೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸಾರಿಗೆ ನೌಕರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇಲ್ಲೇ ಅಡುಗೆ ಮಾಡುವುದು ಬೇಡ. ಹೊರಗಿನಿಂದ ತಂದು ತಿನ್ನಿ ಎಂದಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published by:Latha CG
First published: