17 ಕೆರೆಗಳನ್ನು ನಿರ್ಮಿಸಿದ ಆಧುನಿಕ ಭಗೀರಥ ಕಾಮೇಗೌಡರಿಗೆ ಉಚಿತ ಬಸ್‌ ಪಾಸ್‌ ನೀಡಿದ ಕೆಎಸ್‌ಆರ್‌ಟಿಸಿ

ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ರೈತ ಕಾಮೇಗೌಡರ ಕುರಿತಾಗಿ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ. ‘ದಿ ಗುಡ್ ಶೆಪರ್ಡ್’ ಟೈಟಲ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಕ್ಷರಸ್ಥರಾಗಿರುವ ಕಾಮೇಗೌಡರು 17 ಕೆರೆಗಳನ್ನು ಹೇಗೆ ನಿರ್ಮಿಸಿದರು ಅದರ ಹಿಂದಿನ ಶ್ರಮವನ್ನು ಸಾಕ್ಷ್ಯಚಿತ್ರದ ಮೂಲಕ ತೋರಿಸಲು ದಯಾಳ್ ಪದ್ಮನಾಭನ್ ಮುಂದಾಗಿದ್ದಾರೆ.

ಆಧುನಿಕ ಭಗೀರಥ ಕಾಮೇಗೌಡರು.

ಆಧುನಿಕ ಭಗೀರಥ ಕಾಮೇಗೌಡರು.

  • Share this:
ಬೆಂಗಳೂರು (ಜುಲೈ 02); ಸ್ವಂತ ಹಣದಿಂದ ಸುಮಾರು 17 ಕೆರೆಗಳನ್ನು ನಿರ್ಮಿಸಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಮಂಡ್ಯದ ಕಾಮೇಗೌಡರ ಹೆಸರು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹೀಗಾಗಿ ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗೌರವಿಸುವ ವಿಧದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ರಾಜಹಂಸ, ವೇಗದೂತ, ವೋಲ್ವೋ ಸೇರಿದಂತೆ ಎಲ್ಲಾ ಬಗೆಯ ಬಸ್ ಪ್ರಯಾಣಕ್ಕಾಗಿ ಉಚಿತ ಪಾಸ್ ನೀಡುವ ಮೂಲಕ ಕಾಮೇಗೌಡರ ಸೇವೆಯನ್ನು ಸ್ಮರಿಸಿದೆ.

ಕಾಮೇಗೌಡರು ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ನಿವಾಸಿ. ಊರಿನಲ್ಲಿ ಇವರನ್ನು ಕಲ್ಮನೆ ಕಾಮೇಗೌಡ ಎಂದೇ ಕರೆಯುತ್ತಾರೆ. ಏಕೆಂದರೆ ಅನೇಕರಿಗೆ ಕೇವಲ ಕಲ್ಪನೆಗಳಲ್ಲಿ ಮಾತ್ರ ಸಾಧ್ಯವಾಗುವ ಕೆಲಸವನ್ನು ಇವರು ನಿಜದಲ್ಲೇ ಮಾಡಿ ತೋರಿಸಿದ್ದರು.

ಅನಕ್ಷರಸ್ಥರಾಗಿದ್ದರೂ ಇವರು ಮಾಡಿರುವ ಕೆಲಸಕ್ಕೆ ಇಂದು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು 17 ಕೆರೆಗಳನ್ನು ಜೀವನದಲ್ಲಿ ದುಡಿದ ಸ್ವಂತ ಹಣದಲ್ಲಿ ನಿರ್ಮಿಸಿರುವುದು ಇವರ ಅಸಾಮಾನ್ಯ ಸಾಧನೆಯೇ ಸರಿ.

kamegowda ksrtc buspass
ಕಾಮೇಗೌಡರಿಗೆ ಉಚಿತ ಬಸ್‌ ಪಾಸ್‌ ನೀಡಿರುವ ಕೆಎಸ್‌ಆರ್‌ಟಿಸಿ.


ಇವರು ಕೇವಲ ಕೆರೆ ಮಾತ್ರವಲ್ಲದೆ ಬೆಟ್ಟದ ತಪ್ಪಲಿನಲ್ಲಿ ಇದುವರೆಗೂ ಸಾವಿರಾರು ಮರಗಿಡಗಳನ್ನು ನೆಟ್ಟು ತಮ್ಮ ಪರಿಸರದ ಕುರಿತ ಕಾಳಜಿಯನ್ನೂ ಮೆರೆದಿದ್ದಾರೆ. ತಪ್ಪಲಿನ ಬಂಡೆಗಳ ಮೇಲೆ ತಮ್ಮ ಜೀವನದ ಅನುಭವದ ಮಾತುಗಳನ್ನು ಬರೆಸಿದ್ದಾರೆ.

ಇವರ ಈ ಕಾರ್ಯದಿಂದ ಇಂದಿಗೂ ಬೆಟ್ಟದ ತಪ್ಪಲು ಹಚ್ಚ ಹಸಿರಾಗಿದೆ. ಕೆರೆಗಳ ನಿರ್ಮಾಣದಿಂದ ಈ ಭಾಗದಲ್ಲಿನ ಅಂತರ್ಜಲ ವೃದ್ದಿಸಿದೆ. ಇವರ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.

ಅಲ್ಲದೆ, ಇತ್ತೀಚೆಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಂಡ್ಯದ ರೈತ ಕಾಮೇಗೌಡರ ಬಗ್ಗೆ ಮಾತನಾಡಿದ್ದರು. ಈ ಮೂಲಕ 17 ಕೆರೆಗಳನ್ನು ನಿರ್ಮಿಸಿರುವ ಕುರಿಗಾಯಿ ಕಾಮೇಗೌಡರ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಚಿರಪಡಿಚಿತವಾಗುವಂತೆ ಮಾಡಿದ್ದರು. ಇದೀಗ ಈ ರೈತನ ಕುರಿತು ಅವರ ಸಾಧನೆಯ ಕುರಿತು ಸಾಕ್ಷ್ಯಚಿತ್ರವೊಂದು ನಿರ್ಮಾಣವಾಗುತ್ತಿದೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ರೈತ ಕಾಮೇಗೌಡರ ಕುರಿತಾಗಿ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ. ‘ದಿ ಗುಡ್ ಶೆಪರ್ಡ್’ ಟೈಟಲ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಕ್ಷರಸ್ಥರಾಗಿರುವ ಕಾಮೇಗೌಡರು 17 ಕೆರೆಗಳನ್ನು ಹೇಗೆ ನಿರ್ಮಿಸಿದರು ಅದರ ಹಿಂದಿನ ಶ್ರಮವನ್ನು ಸಾಕ್ಷ್ಯಚಿತ್ರದ ಮೂಲಕ ತೋರಿಸಲು ದಯಾಳ್ ಪದ್ಮನಾಭನ್ ಮುಂದಾಗಿದ್ದಾರೆ.

ಇದನ್ನೂ ಓದಿ : ಮಂಡ್ಯದಲ್ಲಿ 17 ಕೆರೆ ಕಟ್ಟಿಸಿರುವ ಕಲ್ಮನೆ ಕಾಮೇಗೌಡರ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

‘ದಿ ಗುಡ್ ಶೆಪರ್ಡ್’ ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರ ಮೂಡಿ ಬರಲಿದ್ದು, ಸುಮಾರು 20 ನಿಮಿಷಗಳ ಅವಧಿಯಲ್ಲಿ ಕಾಮೇಗೌಡರ ಇಡೀ ಜೀವನ ಸಾಧನೆಯನ್ನು ತೋರಿಸಲು ದಯಾಳ್ ಮತ್ತು ಟೀಮ್ ಸಿದ್ದಗೊಂಡಿದೆ. ಈ ಸಾಕ್ಷ್ಯಚಿತ್ರದ ಚಿತ್ರೀಕರಣ ಜುಲೈ ಮೊದಲ ವಾರದಿಂದ ಆರಂಭವಾಗಲಿದ್ದು, ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ.
First published: