HOME » NEWS » State » KSRTC HAS FOUND A TECHNICAL SOLUTION TO AVOID COLLISIONS AND ACCIDENTS SKTV AMTV

KSRTC ಬಸ್ಸುಗಳಲ್ಲಿ ಇನ್ಮೇಲೆ ಆಕ್ಸಿಡೆಂಟ್ ಆಗೋದಿಲ್ಲ ? ನಿಗಮದಿಂದ ಹೊಸಾ ಪ್ಲಾನ್ !

KSRTC: ತಪ್ಪು ಯಾರೇ ಮಾಡಿದ್ರು ಕೂಡ ಬಸ್ಸಿನ ಚಾಲಕರ ಮೇಲೆಯೇ ಮೊದಲ ಆರೋಪ ಮಾಡೋದು.ಆದ್ರೆ ಇನ್ಮುಂದೆ ಹಾಗೆ ಆಗೊಲ್ಲ.ಯಾಕಂದ್ರೆ ಕೆಎಸ್ಆರ್ಟಿಸಿ ಆಕ್ಸಿಡೆಂಟ್ ತಪ್ಪಿಸಿ, ಪ್ರಯಾಣಿಕರಿಗೆ ಉತ್ತಮ‌ ಸೇವೆ ನೀಡಲು  ಮಾಸ್ಟರ್ ಪ್ಲಾನ್ ಮಾಡಿದೆ

news18-kannada
Updated:June 17, 2021, 6:54 AM IST
KSRTC ಬಸ್ಸುಗಳಲ್ಲಿ ಇನ್ಮೇಲೆ ಆಕ್ಸಿಡೆಂಟ್ ಆಗೋದಿಲ್ಲ ? ನಿಗಮದಿಂದ ಹೊಸಾ ಪ್ಲಾನ್ !
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ರಸ್ತೆಯಲ್ಲಿ ಓಡಾಡೋವಾಗ  ಅಪಘಾತವಾದ್ರೆ ಮೊದಲು ಬೈಯ್ಯೋದೆ  ದೊಡ್ಡ ವಾಹನಗಳನ್ನ. ಅದರಲ್ಲೂ ಬಸ್ ಹಾಗೂ ಇನ್ನಿತರ ಸಣ್ಣ ವಾಹನಗಳ ಮಧ್ಯೆ ಆಕ್ಸಿಡೆಂಟ್ ಆದ್ರೆ ಮುಗಿತು ಕಥೆ. ತಪ್ಪು ಯಾರೇ ಮಾಡಿದ್ರು ಕೂಡ ಬಸ್ಸಿನ ಚಾಲಕರ ಮೇಲೆಯೇ ಮೊದಲ ಆರೋಪ ಮಾಡೋದು.ಆದ್ರೆ ಇನ್ಮುಂದೆ ಹಾಗೆ ಆಗೊಲ್ಲ.ಯಾಕಂದ್ರೆ ಕೆಎಸ್ಆರ್ಟಿಸಿ ಆಕ್ಸಿಡೆಂಟ್ ತಪ್ಪಿಸಿ, ಪ್ರಯಾಣಿಕರಿಗೆ ಉತ್ತಮ‌ ಸೇವೆ ನೀಡಲು  ಮಾಸ್ಟರ್ ಪ್ಲಾನ್ ಮಾಡಿದೆ. 

CWS & DDS ಎಂಬ ಎರಡು ತಂತ್ರಜ್ಞಾನದ‌ ಬಳಕೆ: ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಾ ರಾಜ್ಯದ ತುಂಬೆಲ್ಲಾ ಓಡಾಡೋ ಕೆಎಸ್ಆರ್ಟಿಸಿ ಜನರ ಪಾಲಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅನ್ನೊ ಹೆಮ್ಮೆ ಇದೆ. ಇಂತಹ ವ್ಯವಸ್ಥೆಯಲ್ಲಿ ಯಾವುದೇ ಅನಾಹುತ, ಆಕ್ಸಿಡೆಂಟ್ ಗಳು ಆಗದೇ ಇರಲಿ ಅಂತಾ ಸಂಸ್ಥೆ ಮಾಸ್ಟರ್ ಪ್ಲಾನ್ ಮಾಡ್ತಾಯಿದ್ದು  ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಬಸ್ಗಳಿಗೆ ಆರ್ಟಿಫೀಶಿಯಲ್ ಇಂಟಲಿಜರನ್ಸ್ ಸೆನ್ಸಾರ್ ಅಳವಡಿಸುತ್ತಿದೆ.‌ ಇದರಲ್ಲಿ ಕೊಲಿಜನ್ ವಾರ್ನಿಂಗ್ ಸಿಸ್ಟಮ್ (CWS) ಹಾಗೂ ಡ್ರೈವರ್ ಡ್ರೋಸಿನೆಸ್ ಸಿಸ್ಟಮ್ (DDS) ಎಂಬ ಎರಡು ತಂತ್ರಜ್ಞಾನವಿರಲಿದೆ.‌ ಬಸ್ ಮುಂಭಾಗ ಹಾಗೂ ಡ್ರೈವರ್ ಬಳಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಒಂದು ಕ್ಯಾಮರಾ ಸುತ್ತಲಿನ 150 ಮೀಟರ್ ಒಳಗೆ ನಿಗದಿತ ದೂರಕ್ಕಿಂತ ಹತ್ತಿರಕ್ಕೆ  ವಾಹನ  ಬಂದ್ರೆ  6 ಸೆಕೆಂಡ್ ಒಳಗಾಗಿ  ಹಾಗೂ ಮತ್ತೊಂದು ಕ್ಯಾಮರಾ ಡ್ರೈವರ್ ನಿದ್ದೆ ಮಂಪರಿನಲ್ಲಿದ್ರೆ ಸೈನ್ಸಸ್ ಮೂಲಕ ಶಬ್ದ ಮಾಡಿ ಎಚ್ಚರಿಕೆ ನೀಡಲಿದೆ. ಜೊತೆಗೆ ಈ ವಾರ್ನಿಂಗ್ ಜೊತೆ ಚಾಲಕರು ರೂಲ್ಸ್ ಫಾಲೋ ಮಾಡ್ತಾ ಇದ್ದಾರಾ  ಎಂಬ ಮಾಹಿತಿಯೂ ಕಂಟ್ರೋಲ್ ರೂಂಗೆ ಹೋಗಲಿದೆ.

ಇದನ್ನೂ ಓದಿ: Coffee: ಬೆಳಗಾಗೆದ್ದು ಕಾಫಿ ಕುಡೀತೀರಾ? ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ಏನಾಗುತ್ತೆ ಗೊತ್ತಾ?

1044 KSRTC ಬಸ್‌ಗಳಿಗೆ ವಿನೂತ‌ನ ಟೆಕ್ನಾಲಜಿ ಅಳವಡಿಕೆಗೆ ನಿರ್ಧಾರ: ಮೊದಲ ಹಂತದಲ್ಲಿ 600 ಹವಾ ನಿಯಂತ್ರಿತ ಬಸ್ ಗಳಿಗೆ, 200 ರಾಜಹಂಸ non/ac ಬಸ್ ಗಳಿಗೆ ಹಾಗೂ 244 ಸಾಮಾನ್ಯ ಬಸ್ ಗಳು ಸೇರಿ ಒಟ್ಟು 1044 ಬಸ್ ಗಳಿಗೆ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.‌ ಒಂದು ತಿಂಗಳಲ್ಲಿ ಟೆಂಡರ್ ಮುಕ್ತಾಯವಾಗಿ ಇನ್ನು 3 ತಿಂಗಳ ಒಳಗಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ಬಸ್ ಗಳು ಸಂಚರಿಸಲಿವೆ.‌ ಕೆಎಸ್ಆರ್ಟಿಸಿ ನಿಗಮದ ಈ ವ್ಯವಸ್ಥೆ ಉತ್ತಮವಾಗಿದೆ ಆದ್ರೆ ಮೊದಲು  50 ಬಸ್ ಗಳನ್ನ ಟ್ರಯಲ್ ಮಾಡಿ ನಂತರ ಪೂರ್ಣ ಪ್ರಮಾಣದಲ್ಲಿ ಅಳವಡಿಸಿ ಮಾಡಲಿ ಅಂತಾರೆ ಟ್ರಾಫಿಕ್ ಎಕ್ಸ್ಫರ್ಟ್‌ಗಳು.
Youtube Video

ಈ ಹಿಂದೆ  ವೊಲ್ವೋ ಬಸ್ಸುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು,  ಮುಂದಿನ ಮೂರು ತಿಂಗಳ‌ ಒಳಗಾಗಿ ಕೆಎಸ್ಆರ್ಟಿಸಿ ಬಸ್ ಗಳಲ್ಲೂ ಸೆನ್ಸಾರ್ ಅಳವಡಿಸಲಾಗುತ್ತಿರುವುದು ಉತ್ತಮ‌ ವ್ಯವಸ್ಥೆಯೇ. ಆದಷ್ಟು ಬೇಗ ಇದು ಜಾರಿಯಾಗಿ   ನೂತನ ತಂತ್ರಜ್ಞಾನದಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾದ್ರೆ ಅಷ್ಟೇ ಸಾಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by: Soumya KN
First published: June 17, 2021, 6:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories