• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KSRTC Bus Pass: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​; KSRTCಯಿಂದ ಬಸ್​ ಪಾಸ್​ ಅವಧಿ ವಿಸ್ತರಣೆ

KSRTC Bus Pass: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​; KSRTCಯಿಂದ ಬಸ್​ ಪಾಸ್​ ಅವಧಿ ವಿಸ್ತರಣೆ

KSRTC

KSRTC

ವಿದ್ಯಾರ್ಥಿಗಳ ಪರೀಕ್ಷೆಗೆ ಅನುಗುಣವಾಗಿ 1 ಅಥವಾ 2 ತಿಂಗಳಿಗೆ ಮಾತ್ರ ಪಾಸ್ ವಿಸ್ತರಣೆ ಮಾಡಲಾಗುವುದು ಎಂದು KSRTC ಪ್ರಕಟಣೆ ಮೂಲಕ ತಿಳಿಸಿದೆ.

  • Share this:

ಬೆಂಗಳೂರು (ಜೂ 28): ಪದವಿ (Degree), ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ (Master Degree) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ KSRTC ವಿದ್ಯಾರ್ಥಿ ಪಾಸ್​ಗಳ (Student Pass) ಅವಧಿ ವಿಸ್ತರಣೆ ಮಾಡಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2022ರ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ಪರೀಕ್ಷೆಗಳು (Exam) ನಡೆಯಲಿದೆ. ಈ ಹಿನ್ನಲೆ ಪಾಸ್ ಅವಧಿ ವಿಸ್ತರಣೆಗೆ (Extension) ನಿರ್ದೇಶನ ಬಂದಿತ್ತು. ಹೀಗಾಗಿ ಬಸ್​ ಪಾಸ್​ ಅವಧಿ ವಿಸ್ತರಣೆಗೆ KSRTC ನಿರ್ಧರಿಸಿದೆ


1 ಅಥವಾ 2 ತಿಂಗಳಿಗೆ ಮಾತ್ರ ಪಾಸ್ ವಿಸ್ತರಣೆ


ಸದ್ಯಕ್ಕೆ ವಿದ್ಯಾರ್ಥಿ ಪಾಸ್‌ ಮೊತ್ತ ವರ್ಷಕ್ಕೆ 900 ರೂಪಾಯಿ ಇದೆ. ವಿದ್ಯಾರ್ಥಿಗಳ ಪರೀಕ್ಷೆಗೆ ಅನುಗುಣವಾಗಿ 1 ಅಥವಾ 2 ತಿಂಗಳಿಗೆ ಮಾತ್ರ ಪಾಸ್ ವಿಸ್ತರಣೆ ಮಾಡಲಾಗುವುದು ಎಂದು KSRTC ಪ್ರಕಟಣೆ ಮೂಲಕ ತಿಳಿಸಿದೆ.


ನಿಗದಿತ ಪಾಸ್​ ಮೊತ್ತ ಕಟ್ಟಬೇಕು


ಆದ್ರೆ ವಿದ್ಯಾರ್ಥಿಗಳು ಒಂದು ಅಥವಾ ಎರಡು ತಿಂಗಳ ನಿಗದಿತ ಪಾಸ್ ಮೊತ್ತ ಕಟ್ಟಬೇಕು. ಅಂದ್ರೆ 120 ರಿಂದ 130 ರೂಪಾಯಿ ಕಟ್ಟಿ ರಶೀದಿ ಪಡೆಯಬೇಕು. ಬಸ್​ಗಳಲ್ಲಿ ಪ್ರಯಾಣಿಸೋ ವಿದ್ಯಾರ್ಥಿಗಳು ನಿರ್ವಾಹಕರು ಕೇಳಿದ ಸಂದರ್ಭದಲ್ಲಿ ಕಡ್ಡಾಯವಾಗಿ ರಶೀದಿ ಮತ್ತು ಪಾಸ್ ತೋರಿಸಬೇಕು.
ಎಲ್ಲಾ ಚಾಲಕರು, ನಿರ್ವಾಹಕರು ಹಾಗು ತನಿಖಾ ಸಿಬ್ಬಂದಿ ಇದರ ಬಗ್ಗೆ ತಿಳಿದಿರಬೇಕು ಎಂದು KSRTC ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್​ನಿಂದ 14 ಮಕ್ಕಳು ದಿಢೀರ್​ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು


ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​


ಬೆಂಗಳೂರು: ಈಗಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​ಗಳು  ಓಡಾಡುತ್ತಿವೆ. ನೀವೂ ಹಲವು ಬಾರಿ ಎಲೆಕ್ಟ್ರಿಕ್ ಬಸ್​ಗಳಲ್ಲಿ ಪ್ರಯಾಣಿಸಿರಬಹುದು. ಬೆಂಗಳೂರಿನ ಜನರಿಗೆ ಇನ್ನೊಂದು ಖುಷಿ ಸುದ್ದಿ ಹೊರಬಿದ್ದಿದೆ. ನೀವು ಶೀಘ್ರದಲ್ಲೇ ಬೆಂಗಳೂರಿನಿಂದ ಬಿಡದಿ, ಹೊಸಕೋಟೆ ಮತ್ತು ಅತ್ತಿಬೆಲೆಗೆ ಸಹ ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  300 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ 14 ಮಾರ್ಗಗಳನ್ನು ಗುರುತಿಸಿದೆ. ಇವೆಲ್ಲವೂ ಅಕ್ಟೋಬರ್ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಹೀಗಾಗಿ ಬೆಂಗಳೂರಿನ ಜನರು ಎಲೆಕ್ಟ್ರಿಕ್ ಬಸ್​ಗಳ ಸೇವೆಯನ್ನು ಇನ್ನಷ್ಟು ಮಾರ್ಗಗಳಲ್ಲಿ ಬಳಸಬಹುದಾಗಿದೆ.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇನ್ನಷ್ಟು ಎಲೆಕ್ಟ್ರಿಕ್ ಬಸ್​ಗಳನ್ನು ಬಿಡುತ್ತಿರುವ ಮಾರ್ಗಗಳ ಪಟ್ಟಿ ಇಲ್ಲಿದೆ.


226M KR ಮಾರುಕಟ್ಟೆ-ಬಿಡದಿ, 226N ಕೆಂಪೇಗೌಡ ಬಸ್ ನಿಲ್ದಾಣ (KBS)-ಬಿಡದಿ, 276 KBS-ವಿದ್ಯಾರಣ್ಯಪುರ, 290E ಶಿವಾಜಿನಗರ-ಯಲಹಂಕ, 328H ಅತ್ತಿಬೆಲೆ-ಹೊಸಕೋಟೆ, KBS3A KBS-ಅತ್ತಿಬೇಲೆ, KBS3A KBS-ಅತ್ತಿಬೇಲೆ, KBS360K40KE, 402B/402D KBS-ಯಲಹಂಕ ಸ್ಯಾಟಲೈಟ್ ಟೌನ್, 401M ಯಶವಂತಪುರ-ಕೆಂಗೇರಿ, 500D ಹೆಬ್ಬಾಳ-ಸೆಂಟ್ರಲ್ ಸಿಲ್ಕ್ ಬೋರ್ಡ್, 500DH ಅತ್ತಿಬೆಲೆ-ಹೆಬ್ಬಾಳ, 501C ಹೆಬ್ಬಾಳ-ಕೆಂಗೇರಿ, ಮತ್ತು 600F ಬನಶಂಕರಿ- ಅತ್ತಿಬೇಲೆ.

 “ನಾವು ಇಲ್ಲಿಯವರೆಗೆ ಎಲೆಕ್ಟ್ರಿಕ್ ಬಸ್​ಗಳ ತಯಾರಕರಿಂದ 12 ಬಸ್‌ಗಳನ್ನು ಪಡೆದಿದ್ದೇವೆ. ಆಗಸ್ಟ್ ಮೊದಲ ವಾರದ ವೇಳೆಗೆ 100 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಅಕ್ಟೋಬರ್ ವೇಳೆಗೆ ಎಲ್ಲಾ 300 ಬಸ್‌ಗಳು ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಚಾಲಕ ಸೇರಿದಂತೆ 41 ಆಸನಗಳ ಬಸ್‌ಗಳು ಒಮ್ಮೆ ಚಾರ್ಜ್‌ ಮಾಡಿದರೆ 150 ಕಿಮೀ ಸಂಚರಿಸುತ್ತವೆ. ಹೀಗಾಗಿ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್​ಗಳ ಸಂಚಾರ ಹೆಚ್ಚಾಗಲಿವೆ


ಒಟ್ಟು 225 ಕಿಲೋ ಮೀಟರ್ ಸಂಚರಿಸಬಲ್ಲದು ಎಲೆಕ್ಟ್ರಾನಿಕ್ ಬಸ್​


ಹೀಗಾಗಿ ದೂರದ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಓಡಿಸಲು ನಾವು ಯೋಜಿಸುತ್ತಿದ್ದೇವೆ. 45 ನಿಮಿಷ ಚಾರ್ಜ್ ಮಾಡಿದ ನಂತರ ಮತ್ತೊಮ್ಮೆ ಅವಕಾಶ ಸಿಕ್ಕಾಗ ಚಾರ್ಜ್ ಹಾಕಿದರೂ ಮತ್ತೆ 75 ಕಿಮೀ ಬಸ್ ಸಂಚರಿಸಬಹುದು.” ಇದರರ್ಥ ಪ್ರತಿ ಬಸ್ಸು 225 ಕಿಮೀ ಕ್ರಮಿಸಬಲ್ಲದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್​ಗಳು ಸಂಚರಿಸಲಿದ್ದು ಓಡಾಟಕ್ಕೆ ಅನುಕೂಲವಾಗಲಿದೆ.


Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು