• Home
 • »
 • News
 • »
 • state
 • »
 • ದಿಢೀರ್​ ಸಾರಿಗೆ ಮುಷ್ಕರ: ರಾಯಚೂರಿನಲ್ಲಿ ಬಾಣಂತಿ ಪರದಾಟ; ದುಪ್ಪಟ್ಟು ದರ ತೆತ್ತ ಪ್ರಯಾಣಿಕರು

ದಿಢೀರ್​ ಸಾರಿಗೆ ಮುಷ್ಕರ: ರಾಯಚೂರಿನಲ್ಲಿ ಬಾಣಂತಿ ಪರದಾಟ; ದುಪ್ಪಟ್ಟು ದರ ತೆತ್ತ ಪ್ರಯಾಣಿಕರು

ರಾಯಚೂರಿನಿಂದ ಮಾನ್ವಿಗೆ ಬಸ್ ದರ 55 ರೂಪಾಯಿಯಾಗಿದ್ದರೆ ಕ್ರೂಷರ್, ವಾಹನಗಳಲ್ಲಿ 150 ರೂಪಾಯಿ, ಸಿಂಧನೂರಿಗೆ 200 ರೂಪಾಯಿ ದರ ನಿಗಧಿ ಮಾಡಿದ್ದರು,

ರಾಯಚೂರಿನಿಂದ ಮಾನ್ವಿಗೆ ಬಸ್ ದರ 55 ರೂಪಾಯಿಯಾಗಿದ್ದರೆ ಕ್ರೂಷರ್, ವಾಹನಗಳಲ್ಲಿ 150 ರೂಪಾಯಿ, ಸಿಂಧನೂರಿಗೆ 200 ರೂಪಾಯಿ ದರ ನಿಗಧಿ ಮಾಡಿದ್ದರು,

ರಾಯಚೂರಿನಿಂದ ಮಾನ್ವಿಗೆ ಬಸ್ ದರ 55 ರೂಪಾಯಿಯಾಗಿದ್ದರೆ ಕ್ರೂಷರ್, ವಾಹನಗಳಲ್ಲಿ 150 ರೂಪಾಯಿ, ಸಿಂಧನೂರಿಗೆ 200 ರೂಪಾಯಿ ದರ ನಿಗಧಿ ಮಾಡಿದ್ದರು,

 • Share this:

  ರಾಯಚೂರು (ಡಿ. 11): ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿಗಳು ನಡೆಸಿದ ದಿಢೀರ್​ ಮುಷ್ಕರದಿಂದ ಪ್ರಯಾಣಿಕರು ಪರದಾಡುವಂತೆ ಆಯಿತು.  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕರು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹೋರಾಟ ಕೈ ಬಿಡಿ ಸರಕಾರ ನಿಮ್ಮ ಮುಖಂಡರೊಂದಿಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುತ್ತಾರೆ. ದಿಢೀರ್​ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡರೂ ಸಾರಿಗೆ ಸಿಬ್ಬಂದಿ ಮುಷ್ಕರ ಕೈ ಬಿಡಲಿಲ್ಲ, ಇದರಿಂದಾಗಿ ಬಸ್ ಗಾಗಿ ಕಾಯಿಯುತ್ತಿದ್ದ ಜನ ಮುಷ್ಕರ ತೊಂದರೆ ಅನುಭವಿಸುವಂತೆ ಆಯಿತು. ಐದು ದಿನಗಳ ಹಿಂದೆ ಹೆರಿಗೆಯಾದ ಸಿರವಾರ ಮೂಲದ ತಾಯಿ ತನ್ನ ತಾಯಿಯೊಂದಿಗೆ ರಾಯಚೂರಿನಿಂದ‌‌ ಸಿರವಾರಕ್ಕೆ ಹೋಗಲು ಬಂದಿದ್ದರು. ಏಕಾಎಕಿ ಬಸ್ ಸೇವೆ ಬಂದ್ ಆಗಿದ್ದರಿಂದ ಹೇಗೆ ಹೋಗಬೇಕು ಎಂಬ ಚಿಂತೆಗೊಳಗಾಗಿ ಅವರು ಹಲವು ಕಾಲ ಪರಿತಪಿಸಿದರು. 


  ಮುಷ್ಕರದಿಂದಾಗಿ ಹಸಗೂಸು, ಹಸಿ ಬಾಣಂತಿಯನ್ನು ಪ್ರತ್ಯೇಕವಾಗಿ ಖಾಸಗಿ ವಾಹನಕ್ಕೆ ಹೋಗಲು 1000 ದಿಂದ 15000 ರೂಪಾಯಿ ಕೇಳುತ್ತಿದ್ದರು.  ಇದರಿಂದ ಬಾಣಂತಿ ಪರದಾಡುವಂತಾಯಿತು. ನಂತರ ಸಂಬಂಧಿಯೊಬ್ಬರು ವಾಹನದಲ್ಲಿ ಮಗು ಹಾಗೂ ತಾಯಿಯನ್ನು ಕರೆದುಕೊಂಡು ಹೋದರು. , ಬಸ್ ಬಂದ್ ಬಗ್ಗೆ ಮುನ್ಸೂಚನೆ ಇಲ್ಲ, ನಗರ ಪ್ರದೇಶ ದಿಂದ ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗಲು ಬಂದ ಕಚೇರಿಗೆ ಹೋಗಲು ನೌಕರರು ಕೂಡ  ತೊಂದರೆ ಅನುಭವಿಸುವಂತಾಗಿತ್ತು.


  ಇದನ್ನು ಓದಿ: ಈರುಳ್ಳಿ ಸಂಸ್ಕರಣಾ ಘಟಕ ನಿರ್ಮಾಣ ಫಲಾನುಭವಿಗಳ ಪಟ್ಟಿಗೆ ಕೊಕ್ಕೆ: ಕನಕಗಿರಿ ಶಾಸಕರ ಹಸ್ತಕ್ಷೇಪ (ಭಾಗ-01)


  ಜಿಲ್ಲಾ ಕೇಂದ್ರ ತಾಲೂಕಾ ಕೇಂದ್ರಕ್ಕೆ ನಿತ್ಯ ತಿರುಗಾಡುವವರು ಇಂದು ಬಸ್ ಇಲ್ಲದೆ ಸರಿಯಾದ ಸಮಯಕ್ಕೆ ತಮ್ಮ ಕಚೇರಿಗೆ ಮುಟ್ಟಲು ಆಗಲಿಲ್ಲ, ಕೆಲವರು ಇಂದು ರಜೆ ಹಾಕಿಕೊಂಡರು. ಇನ್ನೂ ಬಸ್ ಬಂದ್ ಆಗಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.  ಸರಕಾರ ಕೊವಿಡ್ ಸಂದರ್ಭದಲ್ಲಿ ನಿಮಗೆ ವೇತನ ನೀಡಿದ್ದಾರೆ, ಈಗ ಸರಕಾರ ಸಂಕಷ್ಟ ಸಮಯ ಈ ಸಮಯದಲ್ಲಿ ಪ್ರತಿಭಟನೆ ಕೈಬಿಟ್ಟು ಸರಕಾರಕ್ಕೆ ಗಡವು ನೀಡಿ ಹೋರಾಟ ಮಾಡಬೇಕಿತ್ತು.


  ಸಾರ್ವಜನಿಕರಿಗೆ ತೊಂದರೆ ನೀಡಿರುವುದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಖಾಸಗಿ ವಾಹನಗಳು ಬಸ್ ಬಂದ್ ಆಗಿರುವದನ್ನು ಲಾಭವನ್ನಾಗಿ ಮಾಡಿಕೊಂಡರು, ಬಸ್ ನಿಲ್ದಾಣದ ಹತ್ತಿರವೇ ಮೂರು ಪಟ್ಟು ದರ ನಿಗಿದಿ ಮಾಡಿದ್ದರು, ರಾಯಚೂರಿನಿಂದ ಮಾನ್ವಿಗೆ ಬಸ್ ದರ 55 ರೂಪಾಯಿಯಾಗಿದ್ದರೆ ಕ್ರೂಷರ್, ವಾಹನಗಳಲ್ಲಿ 150 ರೂಪಾಯಿ, ಸಿಂಧನೂರಿಗೆ 200 ರೂಪಾಯಿ ದರ ನಿಗಧಿ ಮಾಡಿದ್ದರು, ಅನಿವಾರ್ಯವಾಗಿ ಬಹುತೇಕ ರು ಖಾಸಗಿ ವಾಹನಗಳ ಮಾಲೀಕರು ಹೇಳಿದ ದರ ನೀಡಿ ಪ್ರಯಾಣಿಸಿದರು.ಮುಷ್ಕರ ಮಧ್ಯಾಹ್ನದ ನಂತರವೂ ನಡೆದಿದ್ದರಿಂದ ದೇವದುರ್ಗಾ ಸೇರಿದಂತೆ ಹಲವು ಕಡೆ ಬಸ್ ನಿಲ್ದಾಣದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು.

  Published by:Seema R
  First published: