ಬೆಂಗಳೂರು: ರಾಜ್ಯದಲ್ಲಿ ಕೆಎಸ್ಆರ್ಟಿಸಿ (KSRTC) ಮೊದಲ ಇ-ಬಸ್ ಪ್ರಾಯೋಗಿಕ ಸಂಚಾರ ಇಂದಿನಿಂದ ಆರಂಭವಾಗಿದ್ದು, ಬೆಂಗಳೂರಿನಿಂದ ರಾಮನಗರಕ್ಕೆ (Bengaluru To Mysuru) ಪ್ರಾಯೋಗಿಕವಾಗಿ ಚಾಲನೆ ಶುರುವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ) ಎಂಡಿ ಅನ್ಬು ಕುಮಾರ್, ಕೆಎಸ್ಆರ್ಟಿಸಿಗಾಗಿ ಒಟ್ಟು 350 ಎಲೆಕ್ಟ್ರಿಕ್ ಬಸ್(ಇ-ಬಸ್) (EV Power Plus) ಖರೀದಿಗೆ ಸರ್ಕಾರ (Transport Department) ಒಪ್ಪಂದ ಮಾಡಿಕೊಂಡಿದೆ. ಇಂದಿನಿಂದ ಮೊದಲ ಇಲೆಕ್ಟ್ರಿಕ್ ಬಸ್ ಪ್ರಯೋಗಿಕ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ ಬಳಿ ಕೆಎಸ್ಆರ್ಟಿಸಿ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದ್ದು, ಇಂದು ಬೆಳಗ್ಗೆ 11.30 ಗಂಟೆಗೆ ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಿಂದ ಹೊರಡಲಿರುವ EV ಪವರ್ ಪ್ಲಸ್ ಬಸ್, ಬೆಂಗಳೂರಿನಿಂದ ರಾಮನಗರಕ್ಕೆ ಸಂಚಾರ ಮಾಡಲಿದೆ.
ಇದನ್ನೂ ಓದಿ: Bengaluru News: ಕೆಎಸ್ಆರ್ಟಿಸಿ ಭರ್ಜರಿ ಆಫರ್! ಸೋಮನಾಥಪುರ, ತಲಕಾಡು, ಗಗನಚುಕ್ಕಿ ಭರಚುಕ್ಕಿ ಜಲಪಾತಗಳಿಗೆ ಹೋಗಿಬನ್ನಿ
MEIL ಹಾಗೂ KSRTC ಜಂಟಿಯಾಗಿ ರಸ್ತೆಗಿಳಿಸುತ್ತಿರುವ ಪರಿಸರ ಸ್ನೇಹಿ ಬಸ್ ಇದಾಗಿದ್ದು, ಡಿಸೆಂಬರ್ 31ರಂದು ಸಾರಿಗೆ ಸಚಿವ ಶ್ರೀರಾಮುಲು ಅವರು ಲೋಕಾರ್ಪಣೆ ಮಾಡಿದ್ದರು. ಹೊಸ ಬಸ್ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದೆ.
ಇನ್ನು, ಪ್ರಯೋಗಿಕ ಸಂಚಾರ ಕುರಿತಂತೆ ಮಾಹಿತಿ ನೀಡಿದ ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಅವರು, ಇಂದಿನಿಂದ ಪ್ರಯೋಗಿಕ ಸಂಚಾರ ಶುರುವಾಗಿದೆ. ಮೊದಲ ಬಸ್ ಇಂದಿನಿಂದ ಟ್ರಾಯಲ್ ರನ್ ಆರಂಭಿಸಲಾಗಿದೆ. ಸೋಮವಾರದಿಂದ ಕೆಎಸ್ಆರ್ಟಿಸಿ ವಾಣಿಜ್ಯ ಸಂಚಾರ ಬೆಂಗಳೂರಿನಿಂದ ಮೈಸೂರಿಗೆ ಶುರುವಾಗುತ್ತೆ. ಈ ತಿಂಗಳ ಕೊನೆಯಲ್ಲಿ ಇನ್ನಷ್ಟು ಕಡೆ ಬಸ್ ಬಿಡಲಾಗುತ್ತೆ.
ಒಂದು ಭಾರೀ ಚಾರ್ಜ್ ಮಾಡಿದ್ದರೆ 320 ಕಿ.ಮೀ ದೂರ ಸಂಚಾರ ಮಾಡಲಿದೆ. ಮೈಸೂರು ಬೆಂಗಳೂರಿಗೆ 300 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಾಗಿದ್ದು, ರಾಜ್ಯದ 6 ಕಡೆ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತೆ. ಮುಂದಿನ ಮೂರು ತಿಂಗಳ ಒಳಗೆ 50 ಎಲೆಕ್ಟ್ರಿಕ್ ಬಸ್ ಖರೀದಿ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru To Tirupati: ಬೆಂಗಳೂರಿನಿಂದ ತಿರುಪತಿಗೆ ಕೆಎಸ್ಆರ್ಟಿಸಿ ಭರ್ಜರಿ ಆಫರ್!
ಕೆಎಸ್ಆರ್ಟಿಸಿ ಪ್ರೋಟೋ ಬಸ್ನೊಂದಿಗೆ ಒಲೆಕ್ಟ್ರಾ ಎಸ್ಟಿಯುಗಳ ಮೂಲಕ ಸಾರ್ವಜನಿಕ ಸಾರಿಗೆಗಾಗಿ ಇ-ಬಸ್ಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ. 2021ರಲ್ಲಿ Olectra ಸಂಸ್ಥೆ ಭಾರತದಲ್ಲಿ 2021ರಲ್ಲಿ ಇಂಟರ್ ಸಿಟಿ ಎಲೆಕ್ಟ್ರಿಕ್ ಐಷಾರಾಮಿ ಬಸ್ಗಳನ್ನು ಪರಿಚಯಿಸಿತ್ತು. ಒಲೆಕ್ಟ್ರಾ ಸಂಸ್ಥೆ ಇದುವರೆಗೂ ದೇಶದಲ್ಲಿ 1,000 ಬಸ್ಗಳನ್ನು ವಿವಿಧ ರಾಜ್ಯಗಳಿಗೆ ನೀಡಿದೆ.
ಕೆ.ಎಸ್.ಆರ್.ಟಿ.ಸಿ ಯಿಂದ ನೂತನ ಎಲೆಕ್ಟ್ರಿಕ್ ಬಸ್ ಪ್ರಾರಂಭ. pic.twitter.com/JGnQKOLiWn
— KSRTC (@KSRTC_Journeys) December 31, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ