• Home
 • »
 • News
 • »
 • state
 • »
 • KSRTC: ಪ್ರಯಾಣಿಕರಂತೆ ಬಸ್​ ಏರಿ ಕಳ್ಳತನ, ಖದೀಮರ ಆಟಕ್ಕೆ ಬ್ರೇಕ್ ಹಾಕಿದ ಕಂಡಕ್ಟರ್!

KSRTC: ಪ್ರಯಾಣಿಕರಂತೆ ಬಸ್​ ಏರಿ ಕಳ್ಳತನ, ಖದೀಮರ ಆಟಕ್ಕೆ ಬ್ರೇಕ್ ಹಾಕಿದ ಕಂಡಕ್ಟರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ನಾಲ್ಕು ತಿಂಗಳ ಹಿಂದೆ ಬಸ್‌ನಲ್ಲಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಈಗ ಸಿಕ್ಕಿಬಿದ್ದ ಕಳ್ಳರನ್ನು ಬಸ್‌ ಕಂಡಕ್ಟರ್‌ ಸೆರೆ ಹಿಡಿಯುವ ಮೂಲಕ ಬಸ್‌ಗಳಲ್ಲಿ ಕಳ್ಳತನ ಮಾಡುವವರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. 

 • Trending Desk
 • Last Updated :
 • Bangalore [Bangalore], India
 • Share this:

  ಬೆಂಗಳೂರು(ನ.15): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿಬೇಕಾಗಿರುವುದು ಇದೀಗ ಅತ್ಯಗತ್ಯವಾಗಿದೆ. ಅದೇಕೆ ಅಂತ ನೀವು ಪ್ರಶ್ನೆ ಮಾಡಿದ್ರೆ, ಅದಕ್ಕೆ ಉತ್ತರ ಕಳ್ಳತನ (Theft). ಈಗೀಗ ಎಲ್ಲ ಕಡೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಪರಿಪಾಠ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಆಗುತ್ತಿದೆ.  ಕಳೆದ ನಾಲ್ಕು ತಿಂಗಳ ಹಿಂದೆ ಬಸ್‌ನಲ್ಲಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಈಗ ಸಿಕ್ಕಿಬಿದ್ದ ಕಳ್ಳರನ್ನು ಬಸ್‌ ಕಂಡಕ್ಟರ್‌ (Bus Conductor) ಸೆರೆ ಹಿಡಿಯುವ ಮೂಲಕ ಬಸ್‌ಗಳಲ್ಲಿ ಕಳ್ಳತನ ಮಾಡುವವರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. 


  ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸುವ ಕಳ್ಳರು


  ಈಗ, ಕಳ್ಳರು ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕದಿಯಲು ಬಸ್‌ಗಳಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಅಲ್ಲದೇ ಪ್ರೀಮಿಯರ್ ಬಸ್‌ಗಳಲ್ಲಿ ಸಹ ಪ್ರಯಾಣಿಸುತ್ತಾರೆ.


  ಕಂಡಕ್ಟರ್‌ ಕೈಯಲ್ಲಿ ಸಿಕ್ಕಿಬಿದ್ದ ಕಳ್ಳರು


  ಇಂತಹ ಒಂದು ಕಳ್ಳತನದ ಪ್ರಕರಣದಲ್ಲಿ, ಕಾರ್ಪೊರೇಷನ್‌ನ ಅಲರ್ಟ್ ಕಂಡಕ್ಟರ್ ಅಶೋಕ್ ಜಾಧವ್ ಅವರು ಐರಾವತ್ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಟಿಕೆಟ್ ಕಾಯ್ದಿರಿಸಿ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


  ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ನಂತರ ಇತರ ಪ್ರಯಾಣಿಕರ ಚಲನವಲನಗಳನ್ನು ಗಮನಿಸುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಇದೇ ಕಳ್ಳರು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸಿ ಪ್ರಯಾಣಿಕರೊಬ್ಬರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದರು.


  ಕಳ್ಳರ ಮೋಸದಾಟಕ್ಕೆ ಬ್ರೆಕ್‌ ಹಾಕಿದ ಕಂಡಕ್ಟರ್‌


  ಜುಲೈ 7, 2022 ರಂದು, ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಐರಾವತ ಕ್ಲಬ್ ಕ್ಲಾಸ್ ಬಸ್‌ನ ಸೀಟ್ ಸಂಖ್ಯೆ 27 ರಲ್ಲಿ ಆಸೀನರಾದ ವ್ಯಕ್ತಿಯೊಬ್ಬರು ಐದು ನಿಮಿಷಗಳ ನಂತರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಬಸ್ ಸಿಬ್ಬಂದಿಗೆ ವಾಹನವನ್ನು ನಿಲ್ಲಿಸಿ ಎಂದು ಕೇಳಿ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಳಿ ಇಳಿದರು.


  battle over cancellation of a KSRTC bus and women wins 532rs stg asp
  ಸಾಂಕೇತಿಕ ಚಿತ್ರ


  ಅದೇ ಬಸ್‌ನ ಸೀಟ್ ನಂಬರ್ 28 ರಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಕೂಡ ಅದೇ ನೆಪದಲ್ಲಿ ಬಸ್‌ನಿಂದ ಕೆಳಗಿಳಿದಿದ್ದಾನೆ. ಬಸ್ಸಿನ ಸಿಬ್ಬಂದಿಯು 10 ನಿಮಿಷಗಳ ಕಾಲ ಕಾದರೂ ಸಹ ಇಬ್ಬರೂ ವಾಪಸ್‌ ಹಿಂತಿರುಗಲಿಲ್ಲ. ಇದರಿಂದ ಕಂಡಕ್ಟರ್, ಜಾಧವ್, ಅವರ ಮೊಬೈಲ್‌ಗೆ ಕರೆ ಮಾಡುವ ಮೂಲಕ ಅವರು ಎಲ್ಲಿದ್ದಾರೆ ಎಂದು ತಿಳಿಯಲು ಪ್ರಯತ್ನಿಸಿದರು. 15 ನಿಮಿಷ ಕಳೆದರೂ ಅವರು ವಾಪಸ್‌ ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ, ಬಸ್‌ನ ಪ್ರಯಾಣಿಕರು ಹಾಗೂ ಸ್ಥಳೀಯರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಅವರಿಬ್ಬರು ಪತ್ತೆಯಾಗಿರಲಿಲ್ಲ.


  ಇದನ್ನೂ ಓದಿ: KSRTC ಸಿಬ್ಬಂದಿಗೆ ಗುಡ್​ ನ್ಯೂಸ್​; 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಜಾರಿ


  ಈ ಘಟನೆಯ ನಂತರ ಇದರ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಎಲ್ಲಾ ಪ್ರಯಾಣಿಕರಿಗೆ ತಮ್ಮ ಲಗೇಜ್‌ಗಳನ್ನು ಪರಿಶೀಲಿಸುವಂತೆ ಹೇಳಲಾಯಿತು ಮತ್ತು ಆಗ ಪ್ರಯಾಣಿಕರು ತಮ್ಮ ಲಗೇಜ್‌ನಲ್ಲಿ ಯಾವ ವಸ್ತುವು ಕಾಣೆಯಾಗಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ ನಂತರ ಬಸ್ ಆ ಸ್ಥಳದಿಂದ ಹೊರಟಿತು.


  ರೂ. 2.5 ಲಕ್ಷ ಮೌಲ್ಯದ ಚಿನ್ನ ಮತ್ತು ನಗದು ಕಾಣೆ


  ಆದರೆ, ಬೆಳಗ್ಗೆ 10 ಗಂಟೆ ಸುಮಾರಿಗೆ ಆ ಬಸ್‌ನ ಪ್ರಯಾಣಿಕರಲ್ಲಿ ಒಬ್ಬರಾದ ಲಕ್ಷ್ಮಿ ಅವರು ಜಾಧವ್ ಅವರಿಗೆ ಕರೆ ಮಾಡಿ ತಮ್ಮ ಬ್ಯಾಗ್‌ನಿಂದ ರೂ. 2.5 ಲಕ್ಷ ಮೌಲ್ಯದ ಚಿನ್ನ ಮತ್ತು ನಗದು ಕಾಣೆಯಾಗಿದೆ ಎಂದು ತಿಳಿಸಿದರು. ಇದನ್ನು ಕಂಡಕ್ಟರ್ ಜಾಧವ್‌ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.


  ಪೋಲಿಸರಿಗೆ ದೂರು ನೀಡಿದ್ದ ಸಾರಿಗೆ ಸಂಸ್ಥೆ ಅಧಿಕಾರಿಗಳು


  ಉಪ್ಪಿನಂಗಡಿಯಲ್ಲಿ ಬಸ್ ಇಳಿದ ಪ್ರಯಾಣಿಕರಿಗೆ ಮತ್ತೆ ಮತ್ತೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಗ ಅಧಿಕಾರಿಗಳು ಪ್ರಯಾಣಿಕರ ಫೋನ್ ಸಂಖ್ಯೆಯನ್ನು ಪರಿಶೀಲಿಸಿದಾಗ, ಅವರಲ್ಲಿ ಇಬ್ಬರು ನಿಗಮದ ಆನ್‌ಲೈನ್ ಪೋರ್ಟಲ್‌ನಲ್ಲಿ ಟಿಕೆಟ್ ಕಾಯ್ದಿರಿಸಿ ಕ್ಲಬ್ ಕ್ಲಾಸ್ ಬಸ್‌ಗಳಲ್ಲಿ ಆಗಾಗ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ನಂತರ ಈ ಘಟನೆಯ ಬಗ್ಗೆ ಬೆಂಗಳೂರು ಮತ್ತು ಮಂಗಳೂರು ಪೊಲೀಸರಿಗೆ ದೂರು ನೀಡಲಾಗಿತ್ತು.


  ನಾಲ್ಕು ತಿಂಗಳ ನಂತರ, ನವೆಂಬರ್ 12 ರಂದು, ರಾತ್ರಿ 9.45 ರ ಸುಮಾರಿಗೆ, ಅದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾಧವ್ ಅವರು ಟ್ರಿಪ್ ಶೀಟ್ ಅನ್ನು ಪರಿಶೀಲಿಸುತ್ತಿದ್ದಾಗ, ಸೀಟ್‌ ನಂ. 29 ಮತ್ತು 30 ರಲ್ಲಿ ಆಸೀನರಾಗಿದ್ದ ಇಬ್ಬರು ಪ್ರಯಾಣಿಕರು ಉಳಿದ ಪ್ರಯಾಣಿಕರ ಚಲನವಲನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು.


  ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ​!


  ಇದರಿಂದ ಅನುಮಾನಗೊಂಡ ಕಂಡಕ್ಟರ್ ಕೂಡಲೇ ಅವರ ಬಳಿ ಹೋದರು. ಕಳೆದ ನಾಲ್ಕು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಬಸ್ ಇಳಿದು ಹೋದ ಪ್ರಯಾಣಿಕರೇ ಇವರು ಎಂದು ನೆನಪಿಸಿಕೊಂಡಿದ್ದಾರೆ. ಆ ಕೂಡಲೇ ಕಂಡಕ್ಟರ್‌ ಬಸ್ಸಿನಿಂದ ಕೆಳಗಿಳಿದು ತನ್ನ ಉನ್ನತ ಅಧಿಕಾರಿಗಳಿಗೆ ಈ ಘಟನೆ ಕುರಿತು ಎಚ್ಚರಿಕೆ ನೀಡಿದರು. ಅವರು ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ನಂತರ ಈ ಇಬ್ಬರೂ ಕಳ್ಳರನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಯಿತು.


  ಜಾಧವ್‌ ಅವರ ಕಾರ್ಯವನ್ನು ಶ್ಲಾಘಿಸಿದ ಮೇಲಾಧಿಕಾರಿ


  ಜಾಧವ್ ಅವರ ಕಾರ್ಯವನ್ನು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.

  Published by:Precilla Olivia Dias
  First published: