KSRTC: ಆರು ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಬಸ್​ ಸೇವೆ ಆರಂಭ; ಸೆ.22ರಿಂದ ಸಂಚಾರ

ಬೆಂಗಳೂರು, ದಾವಣಗೆರೆ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಮಹಾರಾಷ್ಟ್ರಕ್ಕೆ ಕೆಎಸ್​ಆರ್​ಟಿಸಿ ಬಸ್​ ಸೇವೆ ಆರಂಭಿಸಲಾಗುವುದು

ಮಹಾರಾಷ್ಟ್ರಕ್ಕೆ ಬಸ್​ ಸೇವೆ ಆರಂಭಿಸಿ ಪ್ರಕಟಣೆ

ಮಹಾರಾಷ್ಟ್ರಕ್ಕೆ ಬಸ್​ ಸೇವೆ ಆರಂಭಿಸಿ ಪ್ರಕಟಣೆ

  • Share this:
ಬೆಂಗಳೂರು (ಸೆ.18): ಕೊರೋನಾ ಹಿನ್ನಲೆ ಸ್ಥಗಿತಗೊಂಡಿದ್ದ ಅಂತರರಾಜ್ಯಬಸ್​ ಸೇವೆಯನ್ನು ಹಂತಹಂತವಾಗಿ ಆರಂಭಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಇದರ ಅಂಗವಾಗಿ ಸೆ.22ರಿಂದ ರಾಜ್ಯದಿಂದ ನೆರೆಯ ಮಹಾರಾಷ್ಟ್ರಕ್ಕೆ ಬಸ್​ ಸೇವೆ ಆರಂಭವಾಗಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಎಸ್​ಆರ್​ಟಿಸಿ ಬೆಂಗಳೂರು, ದಾವಣಗೆರೆ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಮಹಾರಾಷ್ಟ್ರಕ್ಕೆ ಬಸ್​ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಬಸ್​ ಸಂಖ್ಯೆಯನ್ನು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಿಡಲಾಗುವುದು.ಮಹಾರಾಷ್ಟ್ರಕ್ಕೆ  ಹೊಸಪೇಟೆ ಮತ್ತು ಕೊಲ್ಲಾಪುರ ಮಾರ್ಗವಾಗಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಇನ್ನು ಈಗಾಗಲೇ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ ಸಂಚಾರ ಆರಂಭವಾಗಿದೆ. ವಿಜಯಪುರ, ಬಾಗಲಕೋಟೆಯಿಂದ ಸೊಲ್ಲಾಪುರ, ಕೊಲ್ಲಾಪುರಕ್ಕೆ ಈಗಾಗಲೇ ಬಸ್​ ಸಂಚಾರ ಆರಂಭವಾಗಿದೆ. 

ಕಳೆದ ಆರು ತಿಂಗಳಿಂದ ಬಸ್​ ಸ್ಥಗಿತಗೊಂಡಿದ್ದರಿಂದ ಜನರು ಸಂಚಾರಕ್ಕೆ ತೊಂದರೆಪಡುವಂತೆ ಆಗಿದೆ. ಇದರಿಂದ ಮುಖಂಡ ಟಿಕೆಟ್​ಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಕೆಎಸ್​ಆರ್​ಟಿಸಿ ವೆಬ್​ಸೈಟ್​ನಲ್ಲಿ ಪ್ರಯಾಣಿಕರು ಸೀಟುಗಳನ್ನು ಮುಖಂಡ ಕಾದಿರಿಸಬಹುದಾಗಿದೆ ಎಂದರು.

from September 22 ksrtc start service to Maharashtra
ಮಹಾರಾಷ್ಟ್ರಕ್ಕೆ ಬಸ್​ ಸೇವೆ ಆರಂಭಿಸಿ ಪ್ರಕಟಣೆ
ಸಂಚಾರ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲಾಗುವುದು. ಸ್ಯಾನಿಟೈಸ್, ಪ್ರಯಾಣಿಕರಿಗೆ ಮಾಸ್ಕ್​ ಕಡ್ಡಾಯವಾಗಿರಲಿದೆ.

ತಮಿಳುನಾಡಿಗಿಲ್ಲ ಸಂಚಾರ:

ಸದ್ಯ ಮಹಾರಾಷ್ಟ್ರಕ್ಕೆ ಮಾತ್ರ ಬಸ್​ ಸಂಚಾರ ಆರಂಭಿಸಿದ್ದು, ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ಕೇರಳಕ್ಕೆ ಇನ್ನು ಬಸ್​ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಆದರೆ,  ವಿಜಯವಾಡ, ನೆಲ್ಲೂರು, ಒಂಗೋಲ್, ತಿರುಪತಿ, ಮಂತ್ರಾಲಯ, ಅನಂತಪುರ ಮತ್ತು ಕರ್ನೂಲಿಗೆ  ಬಸ್ ಸೇವೆ ಇದೆ. ಇನ್ನು ಕೇರಳದ ಎರ್ನಾಕುಲಂವರೆಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
Published by:Seema R
First published: