Viral News: ಸೀಟ್‌ ಬುಕ್‌ ಮಾಡಿದ್ದ ಮಹಿಳೆ ಬಿಟ್ಟು ಹೋಗಿದ್ದ ಕೆಎಸ್‌ಆರ್‌ಟಿಸಿ ಬಸ್‌: ನಂತರ ಆಗಿದ್ದೇನು ಗೊತ್ತಾ..?

Viral News: ಬಹಳ ಸಮಯವಾದರೂ ಬಸ್ಸು ಬಾರದ ಕಾರಣ ಇನೋಜ್ ಬಸ್ ಕಂಡಕ್ಟರ್‌ಗೆ ಪುನಃ ಕರೆ ಮಾಡಿದ್ದಾರೆ. ಆದರೆ ಕಂಡಕ್ಟರ್ ನೀವು ಇರುವ ಸ್ಥಳದಿಂದ ಈಗಾಗಲೇ ಬಸ್ಸು ಹೊರಟಿದೆ ಎಂದು ಉತ್ತರಿಸಿ ಆಟೋದಲ್ಲಿ ಅವರು ಹೇಳಿದ ಸ್ಥಳಕ್ಕೆ ತಲುಪುವಂತೆ ಹೇಳಿದ್ದಾರೆ. ಅಲ್ಲದೆ ಕಂಡಕ್ಟರ್ ಬಸ್ಸು ಯಾವ ನಿಲ್ದಾಣದಲ್ಲಿ ಇದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಯಾಣಿಕರನ್ನು(Travellers) ಒಂದು ಊರಿನಿಂದ ಇನ್ನೊಂದು ಊರಿಗೆ ತಲುಪಿಸುವಲ್ಲಿ ಸಾರಿಗೆ ವ್ಯವಸ್ಥೆಯ ಪಾತ್ರ ಮಹತ್ತರವಾಗಿದೆ. ಹಿಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ, ಎತ್ತಿನ ಬಂಡಿಯಲ್ಲಿ ದೂರದ ಊರನ್ನು ತಲುಪುತ್ತಿದ್ದರು. ಆದರೆ ಸಾರಿಗೆ ವ್ಯವಸ್ಥೆ ಬಂದ ಮೇಲೆ ಪ್ರಯಾಣದ ಪ್ರಯಾಸ ತಪ್ಪಿದೆ. ಪ್ರಯಾಣಿಕರು ಬಸ್ಸನ್ನು(Bus) ಎಲ್ಲಿ ಹತ್ತುವುದು ಹಾಗೂ ಬಸ್ಸನ್ನು ಎಲ್ಲಿ ಇಳಿಯುವುದು ಎಂಬುದನ್ನು ಬಸ್ ಟಿಕೆಟ್ ಮಾಡುವಾಗ ತಿಳಿಸಿದರೆ ಮುಗಿಯಿತು. ಬಸ್ಸಿನವರು ನಾವಿರುವ ಸ್ಥಳಕ್ಕೆ ಬಂದು ಹತ್ತಿಸಿಕೊಂಡು ಹೋಗುತ್ತಾರೆ. ನಾವು ಬುಕ್ ಮಾಡಿದ ಸ್ಥಳಕ್ಕೆ ತಲುಪಿಸುತ್ತಾರೆ.

ಈ ರೀತಿ ಇರುವಾಗ ಬಸ್ಸೊಂದು ಟಿಕೆಟ್ ಬುಕ್ ಮಾಡಿದವರನ್ನು ಹತ್ತಿಸಿಕೊಳ್ಳದೇ 60 ಕಿ.ಮೀ ಮುಂದೆ ಬಂದಿದೆ. ನಂತರ ಪುನಃ 60 ಕಿ.ಮೀ ಹಿಂದೆ ಹೋಗಿ ಅವರನ್ನು ಹತ್ತಿಸಿಕೊಂಡು ಬಂದಿದೆ. ಇಂತಹ ಘಟನೆ ನಡೆದಿರುವುದು ಕೇರಳದ(Kerala) ಅಲಪ್ಪುಜಾದ ಹರಪಾದ್‍ನಲ್ಲಿ.

ಇನೋಜ್ ಎಂಬ ವ್ಯಕ್ತಿ ತಮ್ಮ ಊರಿಗೆ ತೆರಳಲು ಕೆಎಸ್‍ಆರ್‌ಟಿಸಿ ಡೀಲಕ್ಸ್ ಬಸ್ಸನ್ನು ಕಾಯ್ದಿರಿಸಿದ್ದರು. ಆದರೆ ಬಸ್ಸು ಬಾರದಿರುವುದನ್ನು ಕಂಡು ತಿರುವನಂತಪುರಂನಲ್ಲಿರುವ ಮುಖ್ಯ ಕಚೇರಿಗೆ ವಿಷಯ ತಿಳಿಸಿದ್ದಾರೆ. ಆಗ ಪುನಃ ಹಿಂದೆ ತೆರಳಿ ಅವರನ್ನು ಕರೆದುಕೊಂಡು ಬರುವಂತೆ ಸೂಚಿಸಿದೆ.

ಇದನ್ನೂ ಓದಿ: ಬಹಳ ವರ್ಷಗಳ ನಂತರ Mahesh Babu ಜತೆ ಬಣ್ಣ ಹಚ್ಚಿದ ನಟಿ Namrata Shirodkar

ಏನಿದು ಘಟನೆ?
ಕೋಳಿಕ್ಕೋಡಿನ ಕೆಎಂಸಿಟಿ ಶಾಲೆಯ ಶಿಕ್ಷಕಿ ಇನೋಜಾ ಕಂದನಕಂ ಕೆಎಸ್‌ಆರ್‌ಟಿಸಿ ಕಾರ್ಯಾಗಾರದ ಬಳಿ ಕೆಎಸ್‌ಆರ್‌ಟಿಸಿ ಡೀಲಕ್ಸ್ ಬಸ್‍ಗಾಗಿ ಸುಮಾರು ಎರಡು ಗಂಟೆಗಳಿಂದ ಕಾಯುತ್ತಿದ್ದರು. ಕೆಎಸ್‌ಆರ್‌ಟಿಸಿ ಸೂಪರ್ ಡೀಲಕ್ಸ್ ಬಸ್‍ನಲ್ಲಿ ಶುಕ್ರವಾರ ಮನೆಗೆ ಹೋಗಲು ಆಕೆ ಟಿಕೆಟ್ ಕಾಯ್ದಿರಿಸಿದ್ದರು.

ಇವರು ಬಸ್ ಕಂಡಕ್ಟರ್‌ಗೆ ಕರೆ ಮಾಡಿದಾಗ ರಾತ್ರಿ 8.30ಕ್ಕೆ ಕಂದನಕಂ ಬಸ್ ನಿಲ್ದಾಣಕ್ಕೆ ಬಸ್ಸು ತಲುಪುವುದರ ಬಗ್ಗೆ ಕಂಡಕ್ಟರ್ ಮಾಹಿತಿ ನೀಡಿದ್ದರು. ಆದ ಕಾರಣ ತಮ್ಮಿಂದ ತಡವಾಗುವುದು ಬೇಡ ಎಂಬ ಕಾರಣಕ್ಕೆ ಇನೋಜ್ ರಾತ್ರಿ 7 ಗಂಟೆಗೆ ಕಂದನಕಂ ಬಸ್ ನಿಲ್ದಾಣವನ್ನು ತಲುಪಿದ್ದರು. ಅವರು ಸುಮಾರು ಒಂದೂವರೆ ಗಂಟೆಯಿಂದ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವುದಾಗಿ ಕಂಡಕ್ಟರ್‌ಗೆ ಹೇಳಿದರು. ಆಗ ಕಂಡಕ್ಟರ್ ಬಸ್ ಬೇಗ ತಲುಪುತ್ತದೆ ಎಂದು ಉತ್ತರಿಸಿದರು.

ಬಹಳ ಸಮಯವಾದರೂ ಬಸ್ಸು ಬಾರದ ಕಾರಣ ಇನೋಜ್ ಬಸ್ ಕಂಡಕ್ಟರ್‌ಗೆ ಪುನಃ ಕರೆ ಮಾಡಿದ್ದಾರೆ. ಆದರೆ ಕಂಡಕ್ಟರ್ ನೀವು ಇರುವ ಸ್ಥಳದಿಂದ ಈಗಾಗಲೇ ಬಸ್ಸು ಹೊರಟಿದೆ ಎಂದು ಉತ್ತರಿಸಿ ಆಟೋದಲ್ಲಿ ಅವರು ಹೇಳಿದ ಸ್ಥಳಕ್ಕೆ ತಲುಪುವಂತೆ ಹೇಳಿದ್ದಾರೆ. ಅಲ್ಲದೆ ಕಂಡಕ್ಟರ್ ಬಸ್ಸು ಯಾವ ನಿಲ್ದಾಣದಲ್ಲಿ ಇದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ-ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ

ಈ ವಿಷಯವಾಗಿ ಇನೋಜ್ ಚಂಗರಂಕುಳಂ ಮತ್ತು ಪೊನ್ನಾನಿ ಪೊಲೀಸ್ ಠಾಣೆಗಳಲ್ಲಿ ಮತ್ತು ಕೆಎಸ್‌ಆರ್‌ಟಿಸಿ ಪ್ರಧಾನ ಕಚೇರಿಯಾದ ತಿರುವನಂತಪುರಂನಲ್ಲಿ ದೂರು ನೀಡಿದರು. ಈ ಬಗ್ಗೆ ಮಾಹಿತಿ ತಿಳಿದ ಬಸ್ ಪುನಃ 60 ಕಿ.ಮೀ ದೂರವಿರುವ ಎಡಪ್ಪಲ್‍ಗೆ ರಾತ್ರಿ ಸುಮಾರು 10.30ಕ್ಕೆ ತಲುಪಿ ಇನೋಜಾರನ್ನು ಹತ್ತಿಸಿಕೊಂಡು ಪ್ರಯಾಣವನ್ನು ಪುನಾರಂಭಿಸಿತು.
Published by:Sandhya M
First published: