ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳ ಕಾರುಬಾರು; ಕರ್ತವ್ಯಕ್ಕೆ ಹಾಜರಾದ ಕೆಲ ಸಾರಿಗೆ ಸಿಬ್ಬಂದಿ

ನೂರಾರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಮುಂದಾಗಿದ್ದರೂ ಹಲ್ಲೆ ಮಾಡುವರೆಂಬ ಭೀತಿಯಿಂದ ಬಸ್ ಆರಂಭಿಸಲು ಹಿಂದೇಟು ಹಾಕಿದ್ದಾರೆ

ಖಾಸಗಿ ಬಸ್​ಗಳು

ಖಾಸಗಿ ಬಸ್​ಗಳು

  • Share this:
ಹುಬ್ಬಳ್ಳಿ (ಏ.7): ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಮೊದಲ ದಿನ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ  ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರದಲ್ಲಿ ಖಾಸಗಿ ಬಸ್ ಗಳ ಕರುಬಾರು ಜೋರಾಗುತ್ತಿದ್ದಂತೆಯೆ ಕೆಲ ಸಾರಿಗೆ ಬಸ್ ಗಳ ಸಂಚಾರವೂ ಆರಂಭಗೊಂಡಿತು. 6 ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟದಿಂದ ಕರೆ ನೀಡಿರೋ ಮುಷ್ಕರ ವಾಣಿಜ್ಯನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಷ್ಕರ ಕರೆ ಹೊರತಾಗಿಯೂ ಹುಬ್ಬಳ್ಳಿಯಲ್ಲಿ ಕೆಲ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ರಸ್ತೆಗಿಳಿದಿದ್ದವು. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ ಕೆಲ ಸಾರಿಗೆ ಬಸ್ ಗಳು ಸಂಚಾರ ನಡೆಸಿದವು.

ನೂರಾರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಮುಂದಾಗಿದ್ದರೂ ಹಲ್ಲೆ ಮಾಡುವರೆಂಬ ಭೀತಿಯಿಂದ ಬಸ್ ಆರಂಭಿಸಲು ಹಿಂದೇಟು ಹಾಕಿದ್ದಾರೆ. ಕೆಲವೊಬ್ಬರು ಮಾತ್ರ ಕರ್ತವ್ಯ ನಿರ್ವಹಿಸಿದ್ದಾರೆ. ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಗಳ ಸೇವೆ ಮುಂದುವರಿದಿದೆ. ಬೆಳಗಾವಿ, ಗದಗ, ಬಾಗಲಕೋಟೆ, ಕಾರವಾರ ಮತ್ತಿತರ ಕಡೆ ಖಾಸಗಿ ಬಸ್ ಗಳ ಸಂಚಾರ  ನಡೆಯಿತು. ಹುಬ್ಬಳ್ಳಿ - ಧಾರವಾಡ ನಡುವಿನ ನಗರ ಸಾರಿಗೆ ಆಬಾಧಿತವಾಗಿ ಮುಂದುವರಿದಿದೆ. ಹುಬ್ಬಳ್ಳಿಯಲ್ಲಿ ಪ್ರಯಾಣಿಕರಿಗೆ ಅಷ್ಟಾಗಿ ಮುಷ್ಕರದ ಬಿಸಿ ತಟ್ಟಲಿಲ್ಲ.

ವೇತನ ಕಡಿತದ ಎಚ್ಚರಿಕೆ...

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಸಾರಿಗೆ ಬಹುತೇಕ ಬಸ್ ಸೇವೆ ಸ್ಥಗಿತಗೊಂಡಿದೆ. ಸಾರಿಗೆ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಹುಬ್ಬಳ್ಳಿ - ಧಾರವಾಡ ನಗರ ಸಾರಿಗೆಗಾಗಿ 283 ಬಸ್ ಗಳಿವೆ. ಆದರೆ ಒಬ್ಬರೂ ಚಾಲಕ, ನಿರ್ವಾಹಕರು ಬಂದಿಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ತೇವೆ. ಕರ್ತವ್ಯಕ್ಕೆ ಹಾಜರ‍ಗದವರ ವೇತನ ಕಡಿತ ಮಾಡಲಾಗುವುದು. ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸ್ತೇವೆ ಎಂದು ಹುಬ್ಬಳ್ಳಿ - ಧಾರವಾಡ ನಗರ ಸಾರಿಗೆ ಡಿವಿಜನಲ್ ಕಟ್ರೋಲರ್ ವಿವೇಕಾನಂದ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ಹಳೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಎಚ್ಚರಿಕೆ ಕೊಟ್ಟಿದ್ದಾರೆ. ಬಸ್ ಸಂಚಾರ ಸ್ಥಗಿತದಿಂದ ಆಟೋಗಳಿಗೆ ಬೇಡಿಕೆ ಹೆಚ್ಚಿದೆ. ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳೋದಾಗಿ ಪೊಲೀಸ್ ಅಧಿಕಾರಿಗಳು ಆಟೊ ಚಾಲಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಪೊಲೀಸ್ ಕಮೀಷನರ್ ಎಚ್ಚರಿಕೆ...

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣಕ್ಕೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ಲಾಭೂ ರಾಮ್ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚನೆ ನೀಡಿದರು. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಗಳಿಗೆ ಅಗತ್ಯ ಭದ್ರತೆ ಒದಗಿಸ್ತೇವೆ.

ನಗರದ ಜೊತೆ ಇತರೆ ರೂಟ್ ಗಳಲ್ಲಿ ಸಂಚರಿಸೋ ವೇಳೆಯಲ್ಲಿಯೂ ಭದ್ರತೆ ಕಲ್ಪಿಸಲು ಸಿದ್ಧ. ವಿವಿಧ ರೂಟ್ ಗಳಲ್ಲಿ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗುವುದು. ಯಾರೂ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಕಾನೂನು ಕೈಗೆತ್ತಿಕೊಳ್ಳೋರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾುವುದು. ಕರ್ತವ್ಯಕ್ಕೆ ಹಾಜರಾಗೋ ಸಾರಿಗೆ ಸಿಬ್ಬಂದಿಗೆ ಭದ್ರತೆ ಕಲ್ಪಿಸಲಾಗುವುದು ಎಂದು ಲಾಭೂ ರಾಮ್ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:Seema R
First published: