HOME » NEWS » State » KSRTC BUS STRIKE GETTING WEAKER BY IN FIGHTING OF ITS LEADERS AMTV SNVS

Bus Strike - ಸಾರಿಗೆ ಮುಖಂಡರ ಒಣ ಪ್ರತಿಷ್ಠೆ, ಕಚ್ಚಾಟಕ್ಕೆ ಬಡವಾಗುತ್ತಿದೆಯಾ ಸಾರಿಗೆ ನೌಕರರ ಮುಷ್ಕರ?

ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹನ್ನೆರಡನೇ ದಿನಕ್ಕೆಕಾಲಿಟ್ಟಿದೆ. ಸಾರಿಗೆ ನೌಕರರು ಪಟ್ಟು ಸಡಿಲಿಸುತ್ತಿಲ್ಲ, ಸರ್ಕಾರ ಸ್ಪಂದಿಸಲು ಸಿದ್ಧವಿಲ್ಲ. ಇದೇ ವೇಳೆ, ಖಾಸಗಿ ಹಾಗೂ ಸರ್ಕಾರಿ ಬಸ್​ಗಳ ಕಿತ್ತಾಟವೂ ಹೆಚ್ಚುತ್ತಿದೆ.

news18-kannada
Updated:April 18, 2021, 8:43 AM IST
Bus Strike - ಸಾರಿಗೆ ಮುಖಂಡರ ಒಣ ಪ್ರತಿಷ್ಠೆ, ಕಚ್ಚಾಟಕ್ಕೆ ಬಡವಾಗುತ್ತಿದೆಯಾ ಸಾರಿಗೆ ನೌಕರರ ಮುಷ್ಕರ?
ಕೋಡಿಹಳ್ಳಿ ಚಂದ್ರಶೇಖರ್
  • Share this:
ಬೆಂಗಳೂರು(ಏ. 18): ಸಾರಿಗೆ ‌ನೌಕರರ ಮುಷ್ಕರ ಸದ್ಯಕ್ಕೆ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.‌ ಬದಲಾಗಿ ಸೋಮವಾರದ ಬಳಿಕ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ.‌ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಡೆಡ್ ಲೈ‌ನ್ ನೀಡಲಾಗಿದ್ದು, ಸೋಮವಾರದವರೆಗೂ ಗಡುವು ನೀಡಲಾಗಿದೆ.‌ ಅಷ್ಟರಲ್ಲಿ ಸರ್ಕಾರ ಸ್ಪಂದಿಸದೇ ಹೋದಲ್ಲಿ ಜೈಲ್ ಭರೋ ಚಳುವಳಿ ನಡೆಸೋದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.‌ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ಸಾರಿಗೆ ನೌಕರರ ಬಗ್ಗೆ ತಿರಸ್ಕಾರ ಭಾವನೆ ತೋರಿಸುತ್ತಿದೆ. ನೌಕರರ ಮನೆ ಮುಂದೆ ಹೋಗಿ ಅವರನ್ನ ಮಾನಸಿಕವಾಗಿ ಘಾಸಿಗೊಳಿಸುತ್ತಿದೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸೋಮವಾರದವರೆಗೂ ಕಾಲಾವಕಾಶ ನೀಡಿ ನಂತರ ಜೈಲ್ ಭರೋ ಚಳುವಳಿ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ಮುಖಂಡರ ಒಣ ಪ್ರತಿಷ್ಠೆ: ಇವೆಲ್ಲದೆ ನಡುವೆ ಸಾರಿಗೆ ನೌಕರರಲ್ಲಿರುವ ಎರಡು ಸಂಘಟನೆಗಳ ಮುಖಂಡರ ನಡುವೆ ಕೆಸರೆರಚಾಟ ನಡೀತಿದೆ. ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಸಿಐಟಿಯು ಮುಖಂಡ ಮುಕ್ಕೇರಿ ನಡುವೆ ಈಗ ಬೆಂಕಿ ಬಿದ್ದಿದೆ. ಇಷ್ಟು ದೀರ್ಘವಾಗಿ ಹೋರಾಟ ನಡೆದರೂ ಸರ್ಕಾರದ ಗಮನಸೆಳೆಯಲು ಸಾಧ್ಯವಾಗದೆ ಹೋರಾಟ ವಿಫಲವಾಗಿದೆ. ಹೀಗಾಗಿ ಸಿಐಟಿಯು ಮುಖಂಡ ಅನಂತಸುಬ್ಬುರಾವ್ ಅವರ ಮೇಲೆ ಹೋರಾಟದ ವೈಫಲ್ಯತೆ ಕಟ್ಟಲು ಚಂದ್ರು ಮುಂದಾಗಿದ್ದಾರೆ ಎಂಬ ಮುಕ್ಕೇರಿ ಆರೋಪಕ್ಕೆ ಕೂಟದ ಅಧ್ಯಕ್ಷ ಚಂದ್ರು ತಿರುಗೇಟು ನೀಡಿದ್ದಾರೆ. ಅನಂತ ಸುಬ್ಬರಾವ್ ಜಾತಿ ಧರ್ಮ ನೆಲೆಗಟ್ಟಿನಲ್ಲಿ ಸಾರಿಗೆ ಒಕ್ಕೂಟ ಕಟ್ಟಿದ್ದಾರೆ. ಅವರ ಒಕ್ಕೂಟದ ಮುಂದೆ ಬೇರೆ ಯಾವ ಒಕ್ಕೂಟವು ಬೆಳೆಯಬಾರದು ಅಂತಾ ನಮ್ಮ‌ ವಿರುದ್ಧ ನಿಂತಿದ್ದಾರೆ. ಅವರಿಗೆ ಸಾರಿಗೆ ನೌಕರರ ಮೇಲೆ ಕಾಳಜಿ ಇದ್ದಿದ್ದರೆ ನಮ್ಮ ಜೊತೆ ಇರುತ್ತಿದ್ದರು. ಆದರೆ ಅವರು ನಮ್ಮ ಹೋರಾಟ ವಿಫಲ ಮಾಡಲು ಮುಂದಾಗಿದ್ದಾರೆ ಅಂತ ಹೇಳಿದರು.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಸಿ - ಎಸ್ಪಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ; ಕೊರೋನಾ ತಡೆಯಲು ಕಟ್ಟುನಿಟ್ಟಿನ ಆದೇಶ 

ಮುಷ್ಕರ ಇವತ್ತು ಹನ್ನೆರಡನೇ ದಿನವೂ ಮುಂದುವರೆಯುತ್ತಿದೆಯಾದರೂ ದಿನದಿಂದ ದಿನಕ್ಕೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್​ಗಳ ಸಂಚಾರ ಹೆಚ್ಚಾಗುತ್ತಿದೆ.‌ ಈ ಹಿನ್ನೆಲೆಯಲ್ಲಿ ಕೆಂಡಾಮಂಡಲರಾಗಿರುವ ಖಾಸಗಿ ಬಸ್ ಮಾಲಿಕರು, ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿದ್ರೆ ನಮ್ಮ‌ ಬಸ್ ಸಂಚಾರ ಮಾಡಲ್ಲ ಅಂತಾ ಕೆಎಸ್ಆರ್ಟಿಸಿ ನಿಲ್ದಾಣದಿಂದ ಬಸ್ ಹೊರ ತೆಗಿದಿದ್ದು ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಇದು ಈಗ ಖಾಸಗಿ ಬಸ್ ಮಾಲೀಕರ ಆಕ್ರೋಶಕ್ಕೂ ಕಾರಣವಾಗ್ತಿದೆ.

ಒಂದು ಕಡೆ ಸರ್ಕಾರ ಹಾಗೂ ಸಾರಿಗೆ ನೌಕರರ ಗುದ್ದಾಟ, ಮತ್ತೊಂದು ಕಡೆ ಖಾಸಗಿ ಹಾಗೂ ಕೆಎಸ್ಆರ್​ಟಿಸಿ ನಡುವೆ ಕಿತ್ತಾಟ ದಿನದಿಂದ ದಿನಕ್ಕೆ ಮುಂದುವರೆದಿದೆ.‌ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಪ್ರಯಾಣಿಕರು ಬಸ್ಸಿಗಾಗಿ ಪರದಾಡುವುದು ಕೂಡ ಮುಂದುವರೆದಿದೆ.‌ ಜೊತೆಗೆ ಬಿಎಂಟಿಸಿ ನಿಲ್ದಾಣದಲ್ಲಿ ಖಾಸಗಿ ದರ್ಬಾರ್ ಜೋರಾಗಿದ್ದು‌ ಮುಂದಿನ ದಿನಗಳಲ್ಲಿ ಮುಷ್ಕರ ಮತ್ತಷ್ಟು ತೀವ್ರವಾಗೊದು ಖಚಿತ ಆಗಿದೆ.

ಇದೇ ವೇಳೆ, ಮುಷ್ಕರ ನಿರತ ನೌಕರರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಸಾರಿಗೆ ನೌಕರರ ಸಂಬಳ ತಡೆಯಿಂದ ಹಿಡಿದು ಅಮಾನತುವರೆಗಿನ ಕ್ರಮಗಳನ್ನ ಸಾರಿಗೆ ನಿಗಮಗಳು ಕೈಗೊಳ್ಳುತ್ತಿವೆ. ನಿನ್ನೆ ಒಂದೇ ದಿನ 2,443 ಮಂದಿ ಸಿಬ್ಬಂದಿಯನ್ನು ಬಿಎಂಟಿಸಿ ಅಮಾನತುಗೊಳಿಸಿದೆ. ಕೆಲಸಕ್ಕೆ ಹಾಜರಾಗದಿರಲು ಕಾರಣ ಏನು ಎಂದು ನೋಟೀಸ್ ಜಾರಿ ಮಾಡಿದೆ. ಸೋಮವಾರದಷ್ಟರಲ್ಲಿ ಸರಿಯಾದ ಕಾರಣ ನೀಡದಿದ್ದರೆ ಸಿಬ್ಬಂದಿ ವಜಾಗೊಳಿಸುವುದು ಖಚಿತ ಎನ್ನಲಾಗಿದೆ.

ವರದಿ: ಆಶಿಕ್ ಮುಲ್ಕಿ
Published by: Vijayasarthy SN
First published: April 18, 2021, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories