ಕೋಳಿಗೂ ಅರ್ಧ ​ಟಿಕೆಟ್​ ನೀಡಿದ ಬಸ್ ಕಂಡೆಕ್ಟರ್​; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

Chikkaballapur: ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಪೆರೇಸಂದ್ರದಿಂದ ಸೋಮೇಶ್ವರಕ್ಕೆ ತೆರಳುವ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ವ್ಯಕ್ತಿಯೊಬ್ಬ ಕೋಳಿ ಜೊತೆಗೆ ಬೇರೆಡೆಗೆ ಸಂಚರಿಸುತ್ತಿದ್ದ, ಈ ಸಮಯದಲ್ಲಿ ಕಂಡೆಕ್ಟರ್​ ಟಿಕೆಟ್​ ಕೇಳಲು ಬಂದಿದ್ದಾರೆ. ಈ ವೇಳೆ ವ್ಯಕ್ತಿಗೆ 10 ರೂ. ಟಿಕೆಟ್ ​ ನೀಡಿದ್ದುದಲ್ಲದೆ, ಜೊತೆಗಿದ್ದ ಕೋಳಿಗೂ 5 ರೂ ಟಿಕೆಟ್ ನೀಡಿದ್ದಾರೆ.

ಕೋಳಿ ಮತ್ತು ವ್ಯಕ್ತಿ

ಕೋಳಿ ಮತ್ತು ವ್ಯಕ್ತಿ

 • Share this:
  ಚಿಕ್ಕಬಳ್ಳಾಪುರ : ಸಾಮಾನ್ಯವಾಗಿ ಬಸ್​​ ನಲ್ಲಿ ಸಂಚರಿಸುವಾಗ ಟಿಕೆಟ್​ ತೆಗೆದುಕೊಳ್ಳಬೇಕು. ಅದರೊಂದಿಗೆ ಲಗೇಜ್, ಇನ್ನಿತರ ವಸ್ತು ಇದ್ದರು ಟಿಕೆಟ್​ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಕಂಡೆಕ್ಟರ್​ ಪ್ರಯಾಣಿಕನ ಜೊತೆಗಿದ್ದ ಕೋಳಿಗೂ ಟಿಕೆಟ್ ನೀಡಿದ್ದಾನೆ. ಸದ್ಯ ಈ ವಿಚಾರದ ಜೊತೆಗೆ ಕೋಳಿಗೆ ನೀಡಿದ ಟಿಕೆಟ್​ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಪೆರೇಸಂದ್ರದಿಂದ ಸೋಮೇಶ್ವರಕ್ಕೆ ತೆರಳುವ ಕೆಎಸ್​ಆರ್​ಟಿಸಿ ಬಸ್​​ನಲ್ಲಿ ವ್ಯಕ್ತಿಯೊಬ್ಬ ಕೋಳಿ ಜೊತೆಗೆ ಬೇರೆಡೆಗೆ ಸಂಚರಿಸುತ್ತಿದ್ದ, ಈ ಸಮಯದಲ್ಲಿ ಕಂಡೆಕ್ಟರ್​ ಟಿಕೆಟ್​ ಕೇಳಲು ಬಂದಿದ್ದಾರೆ. ಈ ವೇಳೆ ವ್ಯಕ್ತಿಗೆ 10 ರೂ. ಟಿಕೆಟ್ ​ನೀಡಿದ್ದುದಲ್ಲದೆ, ಜೊತೆಗಿದ್ದ ಕೋಳಿಗೂ 5 ರೂ ಟಿಕೆಟ್ ನೀಡಿದ್ದಾರೆ.

  New BSNL prepaid plan launched: ದಿನಕ್ಕೆ 2GB, ವರ್ಷಕ್ಕೆ 730GB ಡೇಟಾ ಉಚಿತ!

  ಇದರಿಂದ ಅಚ್ಚರಿಗೊಂದ ವ್ಯಕ್ತಿ ಕೋಳಿಗೂ ಟಿಕೆಟ್​ ಇದೆಯಾ ಅಂತ ಕೇಳಿದ್ದಾನೆ. ನಂತರ ಟಿಕೆಟ್​ ಹಣ ಪಾವತಿಸಿದ್ದಾನೆ. ಶ್ರಾವಣಮಾಸ ಮುಗಿದ ಹಿನ್ನಲೆಯಲ್ಲಿ ನಾಟಿ ಕೋಳಿ ಹಿಡಿದು ಮನೆಗೆ ತರುತ್ತಿದ್ದ ಎಂದು ತಿಳಿದುಬಂದಿದೆ.

  ಟಿಕೆಟ್


  ಅಂದಹಾಗೆಯೇ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬೇಕಾದರೆ ಪ್ರಾಣಿಗಳಿಗೂ ಟಿಕೆಟ್​ ಟಿಕೆಟ್​ ನೀಡಬೇಕು ಎಂಬ ನಿಯಮನಿದೆ. ಅದರಂತೆ ಕಂಡೆಕ್ಟರ್​ ತನ್ನ ಕೆಲಸವನ್ನು ಮಾಡಿದ್ದಾನೆ. ಒಟ್ಟಿನಲ್ಲಿ ಕೋಳಿಗೆ ಟಿಕೆಟ್​ ನೀಡಿರುವ ಸುದ್ದು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
  Published by:Harshith AS
  First published: