Viral Video: ಪ್ರಯಾಣಿಕರೊಂದಿಗೆ ಹೀಗಾ ವರ್ತಿಸೋದು! ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಅಮಾನತು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬಲ್ಲಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಸಂಸ್ಥೆಯು ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದು ಶಿಸ್ತಿನ ವಿಚಾರಣೆಯ ಆದೇಶವನ್ನು ಹೊರಡಿಸಿದೆ. ಈ ಘಟನೆಯು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ನಿರ್ವಾಹಕರು ಪ್ರಯಾಣಿಕರಿಗೆ ಕಪಾಳ ಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಎಸ್‌ಆರ್‌ಟಿಸಿ ನಿರ್ವಾಹಕರು (KSRTC Conductor) ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಹಲವಾರು ಪ್ರಕರಣಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವರದಿಯಾಗುತ್ತಲೇ ಇದೆ. ಚಿಲ್ಲರೆಗೆ ನಡೆಯುವ ತರ್ಕಗಳು, ವಾದ ವಿವಾದಗಳು, ನಿಲ್ದಾಣ ಬಂದರೂ ಪ್ರಯಾಣಿಕರಿಗೆ (Passengers) ಸೂಚಿಸದೇ ಇರುವಂತಹದ್ದು ಹೀಗೆ ಸಣ್ಣ ಸಣ್ಣ ತಪ್ಪುಗಳ ಬೇಜಾವಬ್ದಾರಿ ಘಟನೆಗಳು ನಿರ್ವಾಹಕರಿಂದ ನಡೆಯುತ್ತಲೇ ಬಂದಿದೆ. ಒಮ್ಮೊಮ್ಮೆ ಪ್ರಯಾಣಿಕರು ಕೂಡ ನಿರ್ವಾಹಕರೊಂದಿಗೆ ಒರಟಾಗಿ ವರ್ತಿಸುವುದೂ (Behaving rudely) ಇದೆ. ಸುಖಾಸುಮ್ಮನೆ ಕಲಹ ಮಾಡುವುದು, ಪಾನಮತ್ತರಾಗಿ ಬಸ್ಸನ್ನೇರುವುದು ಹೀಗೆ ಈ ಸಂದರ್ಭದಲ್ಲಿ ನಿರ್ವಾಹಕರು ತಾಳ್ಮೆ ಕಳೆದುಕೊಳ್ಳದೇ ಪ್ರಯಾಣಿಕರೊಂದಿಗೆ ಶಿಷ್ಟಾಚಾರದಿಂದ ವರ್ತಿಸಬೇಕು ಎಂದೇ ಸಂಸ್ಥೆ ವಿನಂತಿಸುತ್ತಿದೆ. ಅದಾಗ್ಯೂ ಕೆಲವೊಮ್ಮೆ ನಿರ್ವಾಹಕನನ್ನು ಸೇವೆಯಿಂದ (Service) ಅಮಾನತುಗೊಳಿಸುವಂತಹ ಕಠಿಣ ನಿರ್ಧಾರಗಳನ್ನು ಸಂಸ್ಥೆ ಕೈಗೆತ್ತಿಕೊಳ್ಳುವಂತಹ ಪ್ರಕರಣಗಳು (Case) ನಡೆಯುತ್ತಲೇ ಇದೆ.

ಪ್ರಯಾಣಿಕನೊಂದಿಗೆ ಅನುಚಿತವಾಗಿ ವರ್ತಿಸಿದ ನಿರ್ವಾಹಕ
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬಲ್ಲಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಸಂಸ್ಥೆಯು ನಿರ್ವಾಹಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದು ಶಿಸ್ತಿನ ವಿಚಾರಣೆಯ ಆದೇಶವನ್ನು ಹೊರಡಿಸಿದೆ. ಈ ಘಟನೆಯು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ನಿರ್ವಾಹಕರು ಪ್ರಯಾಣಿಕರಿಗೆ ಕಪಾಳ ಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ನಿರ್ವಾಹಕನು ಪ್ರಯಾಣಿಕನನ್ನು ಬಸ್‌ನಿಂದ ಹೊರದೂಡಲು ಪ್ರಯತ್ನಿಸುತ್ತಿರುವಾಗ, ಪ್ರಯಾಣಿಕನು ಬಸ್‌ನ ರಾಡ್ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

ಇದನ್ನೂ ಓದಿ: Crime News: ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಪ್ರಯಾಣಿಕ ಹಾಗೂ ನಿರ್ವಾಹಕನ ಜಟಾಪಟಿ ವಿಡಿಯೋದಲ್ಲಿ ಕಂಡು ಬಂದಿದೆ. ಆತ ಪಾನಮತ್ತನಾಗಿದ್ದನು ಹಾಗೂ ಪ್ರಯಾಣಿಕ ಬಸ್ ಹತ್ತದಂತೆ ನಿರ್ವಾಹಕನು ಪ್ರಯಾಣಿಕನನ್ನು ತಡೆದಿದ್ದನು ಎನ್ನಲಾಗಿದೆ. ಅದಾಗ್ಯೂ ಬಸ್‌ ಹತ್ತಲು ಯಶಸ್ವಿಯಾದ ಪ್ರಯಾಣಿಕನು ನಿಲ್ದಾಣ ಬಂದಾಗ ಇಳಿಯಲೆಂದು ಬಸ್‌ನ ಬಾಗಿಲ ಬಳಿಗೆ ಬರುತ್ತಿದ್ದಂತೆ ನಿರ್ವಾಹಕನು ಪ್ರಯಾಣಿಕನ ಬೆನ್ನಿಗೆ ಒದ್ದಿದ್ದು ಇದರಿಂದ ಪ್ರಯಾಣಿಕನು ನೆಲದ ಮೇಲೆ ಅಂಗಾತ ಬಿದ್ದಿದ್ದಾರೆ. ಪ್ರಯಾಣಿಕನಿಗೆ ಏನೂ ಏಟಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಿರ್ವಾಹಕನು, ಬಸ್‌ನ ಬಾಗಿಲನ್ನು ಮುಚ್ಚಿದ್ದು ಬಸ್ ಅನ್ನು ಕೊಂಡೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದಾನೆ.

ನೋಟೀಸ್ ಜಾರಿಮಾಡಿದ ಕೆಎಸ್‌ಆರ್‌ಟಿಸಿ
ಪುತ್ತೂರು ವಿಭಾಗದ ಸುಖ್‌ರಾಜ್ ರೈ ಹೆಸರಿನ ನಿರ್ವಾಹಕನು F0002 ಸಂಖ್ಯೆಯ 159/160 ವೇಳಾಪಟ್ಟಿ ಸಂಖ್ಯೆಯ ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಈಶ್ವರಮಂಗಲದ ಬಳಿ ಪಾನಮತ್ತನಾಗಿದ್ದ ಪ್ರಯಾಣಿಕನು ಬಸ್‌ನಿಂದ ಇಳಿಯುತ್ತಿದ್ದ ಸಮಯದಲ್ಲಿ ಒರಟಾಗಿ ವರ್ತಿಸಿರುವುದರ ಜೊತೆಗೆ ಪ್ರಯಾಣಿಕನನ್ನು ಹಿಂದಿನಿಂದ ಒದ್ದಿದ್ದು ಇದರಿಂದ ಪ್ರಯಾಣಿಕ ನೆಲಕ್ಕೆ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ನಿರ್ವಾಹಕನ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸುತ್ತೋಲೆ ಹೊರಡಿಸಿದೆ. ಸೇವೆ ಮಾಡದಂತೆ ನಿರ್ವಾಹಕನನ್ನು ತಡೆಹಿಡಿಯಲಾಗಿದ್ದು, ಅಮಾನತಿನಲ್ಲಿರಿಸಲಾಗಿದೆ. ಎಂತಹುದೇ ಪರಿಸ್ಥಿತಿಯಲ್ಲಿ ಕೂಡ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸಿಬ್ಬಂದಿಗೆ ತರಬೇತಿ ಮತ್ತು ತಿಳುವಳಿಕೆಯನ್ನು ನೀಡಿದರೂ ಈ ಘಟನೆ ಸಂಭವಿಸಿದೆ ಎಂದು ಸಂಸ್ಥೆ ಹೇಳಿಕೆ ನೀಡಿದೆ.



ವೈರಲ್ ಆದ ವಿಡಿಯೋ
ಸಾಮಾಜಿಕ ತಾಣದಲ್ಲಿ ವೈರಲ್ ಆದ ವಿಡಿಯೋ ಗಮನಿಸಿದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಂಡಕ್ಟರ್‌ನ ಅಸಭ್ಯ ವರ್ತನೆ ಕಂಡು ಕಂಡಕ್ಟರ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಸ್ತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸಲು ಹಾಗೂ ಅವರೊಂದಿಗೆ ಕ್ಷಮೆಯಿಂದ ನಡೆದುಕೊಳ್ಳುವ ತರಬೇತಿಯನ್ನು ಸಂಸ್ಥೆಯು ಹುದ್ದೆಗೆ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಚಾಲಕ ನಿರ್ವಾಹಕನಿಗೆ ನೀಡುತ್ತದೆ.

ಈ ತರಹದ ಘಟನೆಗಳಿಗೆ ನಿರ್ವಾಹಕರು ಹಾಗೂ ಚಾಲಕರೇ ಜವಬ್ದಾರರಾಗಿದ್ದು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಎಚ್ಚರಿಸಿದೆ. ಸಂಸ್ಥೆಯು ಪ್ರಯಾಣಿಕನ ಆಸ್ಪತ್ರೆ ಹಾಗೂ ಶುಶ್ರೂಷೆಯ ವೆಚ್ಚವನ್ನು ಭರಿಸಿದ್ದು ಈ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದೆ.
Published by:Ashwini Prabhu
First published: