HOME » NEWS » State » KSRTC BMTC STRIKE KSRTC EMPLOYEES PROTESTING IN BENGALURU AGAINST KARNATAKA GOVERNMENT TILL APRIL 7 SCT

ಬೆಂಗಳೂರಿನ ಸರ್ಕಲ್​ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಪ್ರತಿಭಟನೆ

ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ತಮ್ಮ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಏ. 7ರಂದು ಎಲ್ಲ ಸಾರಿಗೆ, ಬಸ್​ಗಳು ಸ್ತಬ್ಧವಾಗಲಿದೆ.

news18-kannada
Updated:April 3, 2021, 9:55 AM IST
ಬೆಂಗಳೂರಿನ ಸರ್ಕಲ್​ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಪ್ರತಿಭಟನೆ
ಬಸ್​ ಪ್ರಯಾಣಕ್ಕೆ ಮುಂದಾದ ಜನರು
  • Share this:
ಬೆಂಗಳೂರು (ಏ. 3): ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸಿದ್ದಾರೆ. ಏ. 7ರೊಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಇನ್ನೂ ಈಡೇರಿಸದ ಹಿನ್ನೆಲೆಯಲ್ಲಿ ತಮ್ಮ 9 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಏ. 7ರಂದು ಎಲ್ಲ ಸಾರಿಗೆ, ಬಸ್​ಗಳು ಸ್ತಬ್ಧವಾಗಲಿದೆ. ನಿನ್ನೆ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ನಿಗಮದ ಡಿಪೋಗಳಲ್ಲಿ ನೌಕರರು ತಮ್ಮ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ-ಬೋಂಡಾ ಮಾರಾಟ ಮಾಡುವ ಮೂಲಕ ಮುಷ್ಕರ ನಡೆಸಿದ್ದರು. ಇಂದು ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಭಿತ್ತಿಪತ್ರ ಪ್ರದರ್ಶನ ಮಾಡಲಿದ್ದಾರೆ.

ಏಪ್ರಿಲ್ 4ರಂದು ಸಾರ್ವಜನಿಕರಿಗೆ ಕರಪತ್ರ ಹಂಚಲಿರುವ ಸಾರಿಗೆ ನೌಕರರು ಏಪ್ರಿಲ್ 5ರಂದು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಏಪ್ರಿಲ್ 6ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಏಪ್ರಿಲ್ 7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲಿದ್ದಾರೆ. ಇಂದಿನಿಂದ ಏಪ್ರಿಲ್ 7ರವರೆಗೆ ಸಾರಿಗೆ ನೌಕರರ ಪ್ರತಿಭಟನೆ ನಡೆಯಲಿದೆ.

ಸಾರಿಗೆ ನೌಕರರ  ಬೇಡಿಕೆಗಳೇನು?:

ನಿಗದಿತ ಸಮಯಕ್ಕೆ ಮಾಸಿಕ ವೇತನ ಪಾವತಿಸಬೇಕು ಮತ್ತು ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು. ಷರತ್ತುಗಳಿಲ್ಲದೆ ಕಡ್ಡಾಯವಾಗಿ ವಾರದ ರಜೆ ನೀಡಬೇಕು. ಕಡಿತ ಮಾಡಿದ ರಜೆಗಳನ್ನು ವಾಪಾಸ್ ಕೊಡಬೇಕು. ಪೂರ್ಣ ಪ್ರಮಾಣದಲ್ಲಿ 4 ಪಾಳಿಗಳಲ್ಲಿ ಬಸ್ ಕಾರ್ಯಾಚರಣೆ ಮಾಡಬೇಕು. ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯ ಕೆಲಸಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್​ ಪಡೆಯುವ ಯೋಜನೆಯನ್ನು ಕೈಬಿಡಬೇಕು ಎಂಬಿತ್ಯಾದಿ 9 ಪ್ರಮುಖ ಬೇಡಿಕೆಗಳನ್ನು ಸಾರಿಗೆ ನೌಕರರು ಸರ್ಕಾರದ ಮುಂದಿಟ್ಟಿದ್ದಾರೆ.

ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಭರವಸೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಇಂದು ಸಾರಿಗೆ ನೌಕರರು ಮತ್ತೆ ರಸ್ತೆಗಿಳಿದಿದ್ದಾರೆ. ಹೀಗಾಗಿ, ಸಾರಿಗೆ ನೌಕರರಿಗೂ ಸರ್ಕಾರ ಎಚ್ಚರಿಕೆಯನ್ನು ರವಾನಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ನೌಕರರಿಗೆ ವೇತನ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದೆ.
Youtube Video
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ 3 ತಿಂಗಳಾದರೂ ಆ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ, ಮತ್ತೆ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ಸಾರಿಗೆ ನೌಕರರು ಆಕ್ರೋಶ ಹೊರಹಾಕಿದ್ದಾರೆ.
Published by: Sushma Chakre
First published: April 3, 2021, 9:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories