ಮುಂದುವರೆದ ಸಾರಿಗೆ ನೌಕರರ ಮುಷ್ಕರ; ರಾಜ್ಯಾದ್ಯಂತ ರಸ್ತೆಗಿಳಿಯದ ಬಸ್​​ಗಳು; ಚನ್ನಪಟ್ಟಣದ ಬಳಿ ಬಸ್​​ಗೆ ಕಲ್ಲು ತೂರಾಟ

ಯಶವಂತಪುರ ಡಿಪೋ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಭದ್ರತೆ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಒಂದು ಕೆಎಸ್​ಆರ್​ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಬಸ್​ಗೆ ಕಲ್ಲು ಹೊಡೆದಿರುವ ದೃಶ್ಯ

ಬಸ್​ಗೆ ಕಲ್ಲು ಹೊಡೆದಿರುವ ದೃಶ್ಯ

 • Share this:
  ಬೆಂಗಳೂರು(ಡಿ.11): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಗುರುವಾರದಿಂದ ಪ್ರತಿಭಟನೆ ಶುರುವಾಗಿದೆ. ರಾಜ್ಯದ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ  ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಯಾವುದೇ ಬಸ್​ ರಸ್ತೆಗಿಳಿದಿಲ್ಲ. ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ ಬಂದ್​ ಹಿನ್ನೆಲೆ, ಜನರು ಆಟೋ ಮತ್ತು ಖಾಸಗಿ ಬಸ್​​ಗಳ ಮೊರೆ ಹೋಗಿದ್ದಾರೆ. ಸರ್ಕಾರಿ ಬಸ್​ಗಳು ರಸ್ತೆಗಿಳಿಯದ ಕಾರಣ, ಖಾಸಗಿ ಬಸ್ ಮಾಲೀಕರು ಹೆಚ್ಚೆಚ್ಚು ಬಸ್​ಗಳನ್ನು ರಸ್ತೆಗಿಳಿಸಿದ್ದಾರೆ.

  ಇನ್ನು, ಇದೇ ಸಮಯವನ್ನು ಲಾಭವನ್ನಾಗಿಸಿಕೊಂಡಿರುವ ಆಟೋ ಚಾಲಕರು ಸುಲಿಗೆಗೆ ಇಳಿದಿದ್ದಾರೆ. ಪ್ರಯಾಣಿಕರ ಬಳಿ ದುಪ್ಪಟ್ಟು ಬಾಡಿಗೆ ಕೀಳುತ್ತಿದ್ದಾರೆ. ಜನರು ಬೇರೆ ದಾರಿ ಕಾಣದೆ ಆಟೋ ಹಿಡಿದು ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದಾರೆ.

  ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ, ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಸ್​ಗಳು ಸಾಲಾಗಿ ನಿಂತಿವೆ. ಬಸ್​ಗಳನ್ನು ನಿಲ್ಲಿಸಿ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಬೇಕಿದ್ದ ಕೆಎಸ್ಆರ್​​ಟಿಸಿ ಬಸ್​ಗಳು ಕಾರ್ಯಾಚರಣೆ ನಿಲ್ಲಿಸಿವೆ.

  ಬಸ್ ಪ್ರಯಾಣಿಕರೇ ಗಮನಿಸಿ!; ಇಂದು KSRTC, BMTC ಸೇರಿದಂತೆ 4 ಸಾರಿಗೆ ನೌಕರರ ಮುಷ್ಕರ

  ಇನ್ನು, ಯಶವಂತಪುರ ಡಿಪೋ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಭದ್ರತೆ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಒಂದು ಕೆಎಸ್​ಆರ್​ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

  ರಾಮನಗರದ ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾಮದಲ್ಲಿ ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​​​​ಗೆ ಅಪರಿಚಿತರು ಕಲ್ಲು ಹೊಡೆದು ಪರಾರಿಯಾಗಿದ್ದಾರೆ. ಬಸ್​ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
  Published by:Latha CG
  First published: