ನಾಳೆಯಿಂದ ಖಾಸಗಿ ಬಸ್​ ಸಂಚಾರ: ರಾತ್ರಿ 12ಗಂಟೆವರೆಗೂ ಕಾಯುತ್ತೇನೆ, ಬನ್ನಿ ಮಾತಾಡೋಣ; ಸಾರಿಗೆ ಸಚಿವರು

ನೀವೆಲ್ಲಾ ನಮ್ಮ ಕುಟುಂಬ ಸದಸ್ಯರು ಇದ್ದಂತೆ. ನಾನು ಎಲ್ಲೂ ಹೋಗಿರಲಿಲ್ಲ ಇಲ್ಲೇ ಇದ್ದೇನೆ. ಜಯಮಹಲ್ ಪ್ಯಾಲೇಸ್​​​​ನ ಸರ್ಕಾರಿ ಮನೆಗೆ ಬನ್ನಿ. ನಾನು ರಾತ್ರಿ 12 ಗಂಟೆಯವರೆಗೆ ಇಲ್ಲಿ ಕಾಯುತ್ತೇನೆ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 12): ಸಾರಿಗೆ ನೌಕರರ ದಿಢೀರ್​ ಪ್ರತಿಭಟನೆ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಮಾತುಕತೆಗೆ ಆಹ್ವಾನಿಸಿದರೂ ಚರ್ಚೆ ಮಾಡಲು ನೌಕರರು ಸಿದ್ಧರಿಲ್ಲ. ಈ ಹಿನ್ನಲೆ ನಾಳೆಯಿಂದ ಸರ್ಕಾರಿ ದರದಲ್ಲಿಯೇ ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಜೊತೆ ಕೂಡ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ಖಾಸಗಿ ವಾಹನ ಓಡಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಿಸುವಂತೆ ಆಗ್ರಹಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ ಬಗೆಹರಿಯದ ಹಿನ್ನಲೆ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು. 

ಸಾರಿಗೆ ನೌಕರರ ಧಿಡೀರ್ ಪ್ರತಿಭಟನೆಯಿಂದ ಜನರಿಗೆ ತೊಂದರೆಯಾಗುತ್ತದೆ. ನಾವೆಲ್ಲರೂ ಒಂದೇ ಕುಟುಂಬದವರು. ನೀವು ಮಾತುಕತೆಗೆ ಬನ್ನಿ ಚರ್ಚೆ ಮಾಡೋಣ.  ಕುಳಿತು ಈ ಸಮಸ್ಯೆ ಬಗೆಹರಿಸಿಕೊಳ್ಳೋಣ. ನೀವೆಲ್ಲಾ ನಮ್ಮ ಕುಟುಂಬ ಸದಸ್ಯರು ಇದ್ದಂತೆ. ನಾನು ಎಲ್ಲೂ ಹೋಗಿರಲಿಲ್ಲ ಇಲ್ಲೇ ಇದ್ದೇನೆ. ಜಯಮಹಲ್ ಪ್ಯಾಲೇಸ್​​​​ನ ಸರ್ಕಾರಿ ಮನೆಗೆ ಬನ್ನಿ. ನಾನು ರಾತ್ರಿ 12 ಗಂಟೆಯವರೆಗೆ ಇಲ್ಲಿ ಕಾಯುತ್ತೇನೆ ಎಂದರು.

ಏಕಾಏಕಿ ಪ್ರತಿಭಟನೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಅವರು ನೋಟಿಸ್ ಕೊಟ್ಟು ಪ್ರತಿಭಟನೆ ಮಾಡುತ್ತಿಲ್ಲ. ನೋಟಿಸ್ ಕೊಟ್ಟಿದ್ರೆ ಬದಲಿ ವ್ಯವಸ್ಥೆ ಮಾಡುತ್ತಿದ್ದೇವು  ಎಂದರು.

ಇದನ್ನು ಓದಿ: ಸಾರಿಗೆ ನೌಕರರ ಮುಷ್ಕರ; ದುಪ್ಪಟ್ಟ ಹಣ ವಸೂಲಿಗಿಳಿದ ಖಾಸಗಿ ವಾಹನಗಳು; ಪ್ರಯಾಣಿಕರ ಗೋಳು ಕೇಳುವವರಿಲ್ಲ

ಸಮಸ್ಯೆ ಬಗೆಹರಿಸಲು ಇಂದು ಅಧಿಕಾರಿಗಳ ಜತೆ ಎರಡಯ ಸಭೆ ಮಾಡಿದ್ದೇನೆ. ನಾಳೆ ಕೂಡ ಮತ್ತೊಮ್ಮೆ ಸಭೆ ಮಾಡುತ್ತೇನೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡೋಣ. ನಿಮ್ಮಲ್ಲಿ ಮತ್ತೊಮ್ಮೆ‌ ಮನವಿ ಮಾಡುತ್ತೇನೆ. ಬೆಳಿಗ್ಗೆಯಿಂದ ಅಧಿಕಾರಿಗಳ ಮೂಲಕ ಪ್ರತಿಭಟನಕಾರರ ಜತೆ ಚರ್ಚೆಗೆ ಪ್ರಯತ್ನ ಮಾಡುತ್ತಾ ಇದ್ದೇನೆ. ನಿಮ್ಮ ಬೇಡಿಕೆಯನ್ನು ಸಹಾನುಭೂತಿ ಯಿಂದ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಖಾಸಗಿ ವಾಹನಗಳ ಓಡಾಟಕ್ಕೆ ಸಿದ್ದತೆಗೆ ಮುಂದಾದ ಇಲಾಖೆ

ಮುಷ್ಕರ ಕೈ ಬಿಡದಿದ್ದರೆ, ನಾಳೆಯಿಂದ ಖಾಸಗಿ ವಾಹನಗಳನ್ನು ಓಡಿಸಲು ಸರ್ಕಾರ ಚಿಂತನೆ ನಡೆಸಿರುವ ಹಿನ್ನಲೆ,  ಖಾಸಗಿ ವಾಹನಗಳ ಓಡಾಟಕ್ಕೆ ಸಿದ್ದತೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಈ ಕುರಿತು ಸಾರಿಗೆ ಸಚಿವರ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಬಿಎಂಟಿಸಿ ಎಂಡಿ ಶಿಖಾ ಹಾಗೂ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ್ ಜೊತೆ ಸಚಿವರ ಚರ್ಚೆ ನಡೆಸಿದರು. ಈ ವೇಳೆ ಬಸ್ಸುಗಳ ಓಡಾಟಕ್ಕೆ ಮಾಡಬೇಕಾದ ಸಿದ್ದತೆ, ಎಷ್ಟು ಖಾಸಗಿ ಬಸ್ಸುಗಳು ಓಡಿಸಬೇಕು.  ಖಾಸಗಿ ವಾಹನ ಗಳು ಎಷ್ಟು ಇವೆ. ಕೆಎಸ್ಆರ್​ಟಿಸಿ ಬಸ್ಸುಗಳನ್ನು ಖಾಸಗಿ ವಾಹನ ಚಾಲಕರ ಬಳಕೆ ಮಾಡುವ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
Published by:Seema R
First published: