ತಿಂಗಳಿಗೆ 18,000 ರೂನಂತೆ ಖಾಸಗಿ ಚಾಲಕರ ನೇಮಕಕ್ಕೆ ಸರ್ಕಾರ ಚಿಂತನೆ; ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಎಂದ ಸವದಿ

ಸಾರ್ವಜನಿಕರಿಗೆ ಏನೂ ಸಮಸ್ಯೆ ಆಗದಂತೆ ನಿರ್ಧಾರ ಮಾಡಲಾಗಿದ್ದು, ಈ ಬಗ್ಗೆ ಖಾಸಗಿ ಬಸ್​​​ಗಳ ಜೊತೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಂಗಳೂರು (ಡಿ. 12): ಸಾರಿಗೆ ನೌಕರರ ದಿಢೀರ್​ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಸರ್ಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯೊಳಗೆ ಬಂದು ಮಾತನಾಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈಗಾಗಲೇ ನೌಕರರಿಗೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಮುಷ್ಕರ ಹಿಂಪಡೆಯದಿದ್ದರೆ, ನಾಳೆಯಿಂದ ಸರ್ಕಾರಿ ಬಸ್​ ದರದಲ್ಲಿ ಖಾಸಗಿ ವಾಹನ ಓಡಿಸಲು ತೀರ್ಮಾನ ನಡೆಸಿದ್ದು, ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಕೂಡ ತಿಳಿಸಿದ್ದಾರೆ. ಈ ಮೂಲಕವಾದರೂ ಸಾರಿಗೆ ನೌಕರರು ಚರ್ಚೆಗೆ ಬಂದ್​ ಸಮಸ್ಯೆ ಬಗೆಹರಿಯಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 

ಮುಷ್ಕರದ ಹಿನ್ನಲೆ ಪರಿಸ್ಥಿತಿ ಪರಿಶೀಲನೆಗೆ ಇಂದು ಮಧ್ಯಾಹ್ನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ಶಿಖಾ ಅಲ್ಲಿನ ವರದಿಯನ್ನು ಸಚಿವರಿಗೆ ನೀಡಿದ್ದಾರೆ. ಈ ವೇಳೆ ನೌಕರರು ಪ್ರತಿಭಟನೆ ಹಿಂಪಡೆಯದಿದ್ದರೆ, ಅನಿರ್ವಾಯವಾಗಿ ಖಾಸಗಿ ವಾಹನಗಳ ಓಡಾಟಕ್ಕೆ ಸಿದ್ದತೆಗೆ ನಡೆಸುವುದರ ಕುರಿತು ಕೂಡ ಚರ್ಚಿಸಿದ್ದಾರೆ.   ಸಾರಿಗೆ ಸಚಿವರ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಬಿಎಂಟಿಸಿ ಎಂಡಿ ಶಿಖಾ ಹಾಗೂ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ್, ಖಾಸಗಿ ಬಸ್ಸುಗಳ ಓಡಾಟಕ್ಕೆ ಮಾಡಬೇಕಾದ ಸಿದ್ದತೆ, ಎಷ್ಟು ಖಾಸಗಿ ಬಸ್ಸುಗಳು ಓಡಿಸಬೇಕು.  ಖಾಸಗಿ ವಾಹನ ಗಳು ಎಷ್ಟು ಇವೆ. ಕೆಎಸ್ಆರ್​ಟಿಸಿ ಬಸ್ಸುಗಳನ್ನು ಖಾಸಗಿ ವಾಹನ ಚಾಲಕರ ಬಳಕೆ ಮಾಡುವ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.

ಇದೇ ವೇಳೆ ಖಾಸಗಿ ಚಾಲಕರಿಗೆ ಯಾವ ರೀತಿ ಆಫರ್​ ನೀಡಿ ಕೆಲಸಕ್ಕೆ ಕರೆದುಕೊಳ್ಳುವುದು ಎಂಬ ಬಗ್ಗೆ ಚರ್ಚಿಸಲಾಗಿದೆ. ತಿಂಗಳಿಗೆ 18,000 ದಂತೆ 3 ತಿಂಗಳಿಗೆ ಸಂಬಳ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಒಟ್ಟು 3 ತಿಂಗಳವರೆಗೆ 54 ಸಾವಿರ ವೇತನಕ್ಕೆ ತೀರ್ಮಾನ ಮಾಡಲಾಗಿದೆ. 10 ದಿನದಲ್ಲಿ ಸಾರಿಗೆ ನೌಕರರ ಮುಷ್ಕರ ನಿಲ್ಲಬೇಕು. ಇಲ್ಲದಿದ್ದರೆ ಭರವಸೆ ಕೊಟ್ಟಂತೆ 3 ತಿಂಗಳ ವೇತನ ನೀಡಿ ಖಾಸಗಿ ಚಾಲಕರಿಂದಲೇ ಬಸ್​ ಸೇವೆ ಆರಂಭಿಸುವುದು. ಒಂದು ವೇಳೆ ನೌಕರರು 3 ಬಳಿಕವೂ ಹೋರಾಟ ಮಾಡಿದರೆ ಕೆಲಸದಿಂದ ವಜಾ ಮಾಡಿ, ಖಾಸಗಿ ಚಾಲಕರನ್ನೇ ನೇಮಿಸಲು ಸರ್ಕಾರ ಚಿಂತನೆ ನಡೆಸಲಾಗಿದೆ. ಇಂದು ಮಧ್ಯರಾತ್ರಿಯೊಳಗೆ ನೌಕರರ ಮಾತುಕತೆಗೆ ಬಂದು ಸಮಸ್ಯೆ ಬಗೆಹರಿಯದಿದ್ದರೆ, ನಾಳೆ ರಾತ್ರಿಯೊಳಗೆ ಅಂತಿಮ ರೂಪುರೇಷಕ್ಕೆ  ಸಿದ್ಧತೆ ನಡೆಸಲಾಗಿದೆ. 

ಸಮಸ್ಯೆಯಾಗದಂತೆ ಕ್ರಮ; ಸವದಿ

ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸಚಿವರು, ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನೌಕರರು ನಾಳೆ ಬಂದು ಚರ್ಚಿಸಬಹುದೆಂಬ ವಿಶ್ವಾಸವಿದೆ. ಒಂದು ವೇಳೆ ಬರದಿದ್ದರೆ ಖಾಸಗಿ ವಾಹನ ಬಳಕೆ ಮಾಡಲಾಗುವುದು. ಎಲ್ಲಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಖಾಸಗಿ ಬಸ್​​ ಬಳಕೆ ಬಗ್ಗೆ ಪಟ್ಟಿ ಮಾಡಿ ನಿರ್ಧಾರ  ಮಾಡುತ್ತೇವೆ. ನಾಳೆ ಅಧಿಕಾರಿ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಏನೂ ಸಮಸ್ಯೆ ಆಗದಂತೆ ನಿರ್ಧಾರ ಮಾಡಲಾಗಿದ್ದು, ಈ ಬಗ್ಗೆ ಖಾಸಗಿ ಬಸ್​​​ಗಳ ಜೊತೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published by:Seema R
First published: