• Home
  • »
  • News
  • »
  • state
  • »
  • Bus Strike: ಸಾರ್ವಜನಿಕರೇ ಗಮನಿಸಿ, ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ಸಿಬ್ಬಂದಿ

Bus Strike: ಸಾರ್ವಜನಿಕರೇ ಗಮನಿಸಿ, ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ಸಿಬ್ಬಂದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಟ್ಟು ಎಂಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸರ್ಕಾರ ಸಾರಿಗೆ ನೌಕರರ ಮುಷ್ಕರವನ್ನು ಆರಂಭದಲ್ಲಿಯೇ ತಡೆಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

  • Share this:

ಕರ್ನಾಟಕ ಸಾರಿಗೆ ನೌಕರರು (KSRTC And BMTC Employees Strike) ಮತ್ತೆ ಪ್ರತಿಭಟನೆ (Protest) ನಡೆಸಲು ತೀರ್ಮಾನಿಸಿದ್ದಾರೆ. ಚಳಿಗಾಲದ ಅಧಿವೇಶನ (Winter Session) ಸಂದರ್ಭದಲ್ಲಿ ಬೇಡಿಕೆ ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಸಿಬ್ಬಂದಿ ಪ್ರತಿಭಟನೆ ನಡೆಸುವ ಕುರಿತು ಚಿಂತನೆ ನಡೆಸಿದ್ದಾರೆ. ಪ್ರತಿಭಟನೆ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾದ್ರೆ ಸಾರ್ವಜನಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬಹುದು. ಆದ್ರೆ ಕಳೆದ ಬಾರಿಯಂತೆ ವಾರಗಟ್ಟಲೇ ಬಸ್ ಸಂಚಾರ (Bus Bandh) ಸ್ಥಗಿತಗೊಂಡದ್ರೆ ಕೆಳ ಹಾಗೂ ಮಧ್ಯಮ ವರ್ಗ ಜನತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೊನೆ ಬಾರಿ ಪ್ರತಿಭಟನೆ ನಡೆಸಿದಾಗ ಸರ್ಕಾರ (Karnataka Government) ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು. ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ರಸ್ತೆಗೆ ಇಳಿಯಲು ಮುಂದಾಗಿದ್ದಾರೆ.


ವಿವಿಧ ಬೇಡಿಕೆಗಳೊಂದಿಗೆ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿ ಮುಂದಾಗಿದ್ದು, ಈ ಸಂಬಂಧ ರೂಪುರೇಷ ಸಿದ್ಧಪಡಿಸಲಾಗುತ್ತಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಆದ್ರೆ ಮುಷ್ಕರ ನಡೆಸುವ ದಿನಾಂಕ ಇನ್ನು ಅಂತಿಮಗೊಂಡಿಲ್ಲ.


ಈಡೇರದ ನೌಕರರ ಬೇಡಿಕೆಗಳೇನು?


1.ಆರನೇ ವೇತನ ಆಯೋಗದ ಮಾದರಿಯಲ್ಲಿ ಶಿಫಾರಸು ಮಾಡಿ ಜಾರಿಗೊಳಿಸದೇ ಇರುವುದು


2.ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದು


3.ವಜಾಗೊಂಡ ನೌಕರರ ಮರು ನೇಮಕ ಮಾಡಿಲ್ಲ


4.ನಿವೃತ್ತಿ ಆಗಿ 30 (ಎರೂಡವರೆ ವರ್ಷ) ತಿಂಗಳು ಕಳೆದರೂ ಗ್ರಾಚ್ಯೂಟಿ ಹಣ ನೀಡಿಲ್ಲ


5.ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡದೆೇ ಇರುವುದು


6.ಖಾಲಿ ಹುದ್ದೆಗಳ ನೇಮಕಾತಿ ಭರ್ತಿ ಮಾಡಿಲ್ಲ


7.ಕೆಎಸ್ಆರ್​ಟಿಸಿ ಖಾಸಗೀಕರಣಕ್ಕೆ ಮುಂದಾಗಿರೋದನ್ನು ಖಂಡಿಸಿ


8.ಸಾರಿಗೆ ನೌಕರರ ಹಾಗು ಕುಟುಂಬ ಸದಸ್ಯರ ಮೇಲೆ ಹಾಕಿರೋ ಪೊಲೀಸ್ ಕೇಸ್ ಹಿಂಪಡೆಯದೇ ಇರೋದು.


ಒಟ್ಟು ಎಂಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸರ್ಕಾರ ಸಾರಿಗೆ ನೌಕರರ ಮುಷ್ಕರವನ್ನು ಆರಂಭದಲ್ಲಿಯೇ ತಡೆಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.


ಕಳೆದ ಬಾರಿ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ಸರ್ಕಾರ ಖಾಸಗಿ ಬಸ್​ಗಳನ್ನು ಓಡಿಸಿತ್ತು. ಹೀಗೆ ಈ ಪ್ರತಿಭಟನೆ 15 ದಿನಗಳವರೆಗೂ ನಡೆದಿತ್ತು.


ಇದನ್ನೂಓದಿ:  Hotel Food Price Hike: ಹೋಟೆಲ್ ಫುಡ್ ದರ ಏರಿಕೆ; ನಿಮ್ಮಿಷ್ಟದ ತಿಂಡಿ ಬೆಲೆ ಎಷ್ಟು ಹೆಚ್ಚಾಗಿದೆ?


ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ


ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿದ್ದರು. ವಿನೋದ್ ಕುಮಾರ್ (42) ನೇಣಿಗೆ ಶರಣಾಗಿರುವ ವ್ಯಕ್ತಿ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ವೀರಾಪೂರ ಗ್ರಾಮದ ಮನೆಯಲ್ಲಿ ವಿನೋದ್ ಕುಮಾರ್ ನೇಣಿಗೆ ಶರಣಾಗಿದ್ದರು. ಕೆಲಸದಿಂದ ವಜಾಗೊಂಡಿದ್ದ ವಿನೋದ ಕುಮಾರ್ ಮಾನಸಿಕವಾಗಿ ಕುಗ್ಗಿದ್ದು, ಖಿನ್ನತೆಗೆ ಒಳಗಾಗಿದ್ದರು.


ಹೃದಯಾಘಾತದಿಂದ ರಾಜ್ಯಪಾಲ ಗೆಹ್ಲೋಟ್ ಕಾರು ಚಾಲಕ ಸಾವು


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅವರ ಕಾರು ಚಾಲಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣದಲ್ಲಿ ಡಿಸೆಂಬರ್  10 ತಡರಾತ್ರಿ ನಡೆದಿದೆ.


ರವಿಕುಮಾರ್ ಎಸ್. ಕಾಳೆ ಮೃತ ದುರ್ದೈವಿಯಾಗಿದ್ದಾರೆ. ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರನ್ನು ಕರೆದೊಯ್ಯಲು ಚಾಲಕ ರವಿಕುಮಾರ್ (Ravikumar) ಬಂದಿದ್ದ ಈ ವೇಳೆ ಚಾಲಕರಿಗೆ ಹೃದಯಾಘಾತ ಸಂಭವಿಸಿದೆ.


ಇದನ್ನೂ ಓದಿ:  Winter Holiday: ಕೋಲಾರದ ಶಾಲೆಗಳಿಗೆ ರಜೆ ಘೋಷಣೆ, ಮುಂದುವರೆದ ಚಳಿ, ಮಳೆ!


ರಾಜ್ಯಪಾಲರನ್ನು ಕಾರಿನಲ್ಲಿ ಕರೆದೊಯ್ಯಲು ಸಿದ್ದತೆ ಮಾಡಿಕೊಳ್ಳುವ ವೇಳೆ ರವಿಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೃದಯಾಘಾತವೂ ಆಗಿದೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯ್ತು. ಆದರೆ, ಅಷ್ಟರಲ್ಲಾಗಲೇ ಚಾಲಕ ರವಿಕುಮಾರ್ ಸಾವನ್ನಪ್ಪಿದ್ದರು.

Published by:Mahmadrafik K
First published: