ಸರ್ಕಾರದೊಂದಿಗೆ ಸಾರಿಗೆ ನೌಕರರ ಸಂಧಾನ ವಿಫಲ: ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ

ಸಾರಿಗೆ ಸಂಚಾರ ಸಂಪೂರ್ಣ ಬಂದಿರುತ್ತದೆ., ಬಸ್ ಗಳು ರಸ್ತೆಗೆ ಇಳಿಯೋಲ್ಲ. ಅಲ್ಲಿ ಚರ್ಚೆ ಅಷ್ಟೇ ಮಾಡಲಾಗಿದೆ. ತೀರ್ಮಾನ ಈಗ ನಾವು ಹೇಳುತ್ತಿದ್ದೇವೆ. ಸಂಧಾನ ವಿಫಲವಾಗಿದೆ.  ಯಾವುದೇ ಗೊಂದಲ ಇಲ್ಲ.

ಕೆಎಸ್​ಆರ್​ಟಿಸಿ

ಕೆಎಸ್​ಆರ್​ಟಿಸಿ

  • Share this:
ಬೆಂಗಳೂರು(ಡಿಸೆಂಬರ್​. 13): ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಪ್ರಮುಖ ಬೇಡಿಕೆ‌ ಈಡೇರದ ಕಾರಣ ಮುಷ್ಕರ ಮುಂದುವರಿಸಿರುವುದಾಗಿ ಸಾರಿಗೆ ನೌಕರರರು ನಿರ್ಧರಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಕೆಎಸ್​​ಆರ್​​ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರುಶೇಖರ್​ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು. ಆದರೆ, ಫ್ರೀಂಡಂ ಪಾರ್ಕ್​ ಬಂದ ನಂತರದಲ್ಲಿ ಚಂದ್ರು ಸರ್ಕಾರದ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ. ಈಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಯಾರೂ ಬಸ್​ ತೆಗೆಯಬಾರದು ಎಂದು ಕೋರಿದ್ದಾರೆ.

ಇನ್ನು  ಈ ಬಗ್ಗೆ ಮಾತನಾಡಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​, ಅಂತಿಮ ಸರ್ಕಾರ ಅಪೂರ್ಣ ವಾದ ತೀರ್ಮಾನ ತೆಗೆದುಕೊಂಡಿದೆ. ಮಂತ್ರಿಗಳು ಬೇಕಾದ ಹಾಗೆ ಹೇಳಿಕೆ ಕೊಟ್ಟು ಜನರ ದಿಕ್ಕು ತಪ್ಪಿಸಿದ್ದಾರೆ. ಸರ್ಕಾರ ತೀರ್ಮಾನದ ಒಂದು ಕಾಪಿಯನ್ನು ನಮಗೆ ಕೊಡಬೇಕಿತ್ತು. ಇದು ಬೇಜವಾಬ್ದಾರಿ ನಡೆ. ಸರ್ಕಾರ ತಮ್ಮವರನ್ನು ಇಟ್ಕೊಂಡು ನಮ್ಮ ಮೇಲೆ ಟೀಕೆ ಟಿಪ್ಪಣಿ ಮಾಡಿಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ಇಂದಿಗೆ ಅಂತ್ಯವಾಗಿದೆ. ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ವಾಗ್ದಾಳಿ ನಡೆಸಿದರು.

ಸಾರಿಗೆ ಸಂಚಾರ ಸಂಪೂರ್ಣ ಬಂದಿರುತ್ತದೆ., ಬಸ್ ಗಳು ರಸ್ತೆಗೆ ಇಳಿಯೋಲ್ಲ. ಅಲ್ಲಿ ಚರ್ಚೆ ಅಷ್ಟೇ ಮಾಡಲಾಗಿದೆ. ತೀರ್ಮಾನ ಈಗ ನಾವು ಹೇಳುತ್ತಿದ್ದೇವೆ. ಸಂಧಾನ ವಿಫಲವಾಗಿದೆ. ಯಾವುದೇ ಗೊಂದಲ ಇಲ್ಲ. ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಅದು ಆಗಲೇ ಬೇಕು ಅದರ ಹೊರತು ಯಾವುದೇ ಸವಲತ್ತು ಕೊಟ್ಟರೂ ನಮ್ಮ ಮುಷ್ಕರ ಮುಂದುವರೆಯುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.

ನಾಳೆ ಖಾಸಗಿ ಬಸ್ ಕೂಡ ಇರೋದಿಲ್ಲ

ಈ ಹೋರಾಟಕ್ಕೆ ಖಾಸಗಿ ಬಸ್ ಒಕ್ಕೂಟದ ಸಂಪೂರ್ಣ ಬೆಂಬಲ ಇದೆ. ನಾನು ಇದೇ ಬೆಜೆಪಿ ಪಕ್ಷದ ಕಾರ್ಯಕರ್ತರ. ಆದರೆ, ಇವರ ನಡೆಗಳು ಅತಿರೇಕವಾದದ್ದು, ಕಾರ್ಮಿಕ ಎಲ್ಲಾ ಬೇಡಿಕೆ ಈಡೇರಿಸುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ಸಾರಿಗೆ ಸಚಿವ ಲಕ್ಷಣ ಸವದಿ ಅವರ ವೈಫಲ್ಯ. ಟೊಳ್ಳು ಭರವಸೆಗಳು ಇದಕ್ಕೆ ಬಲಿಯಾಗೋದಕ್ಕೆ ನಾವು ಸಿದ್ಧರಿಲ್ಲ ಎಂದು ಖಾಸಗಿ ಬಸ್ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.

ಖಾಸಗಿ ಬಸ್ ಗಳ ಒಕ್ಕೂಟದ ಜೊತೆ ಮಾತುಕತೆ ನಡೆಸಿದ್ದೀವಿ ಅಂತ. ಆದರೆ,‌ ಸರ್ಕಾರ ಖಾಸಗಿ ಬಸ್ ಗಳ‌ ಒಕ್ಕೂಟದ ಯಾವುದೇ ಸಂಘಟನೆಗಳ ಜೊತೆ ಸಂಪರ್ಕ ಮಾಡಿಲ್ಲ. ಅದಾಗಿಯೂ ಮಾಧ್ಯಮಗಳ ಮುಂದೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ ಎಂದು ನಟರಾಜ್​​​​ ಶರ್ಮಾ ತಿಳಿಸಿದರು.

ಮುಷ್ಕರ ಕೈಬಿಡಲು ಮುಖ್ಯಮಂತ್ರಿಗಳು ಕರೆ

ಮುಷ್ಕರ ನಿರತ ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರವನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ಇಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಚರ್ಚೆಯಲ್ಲಿ ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆನ್ನುವ ಬೇಡಿಕೆಯನ್ನು ಹೊರತುಪಡಿಸಿ ವೇತನ ತಾರತಮ್ಯ, ಕೋವಿಡ್ 19 ರಿಂದ ಮೃತರಾದ ಸಾರಿಗೆ ನೌಕರರ ಕುಟುಂಬಗಳಿಗೆ 30 ಲಕ್ಷ ರೂ.ಗಳ ಪರಿಹಾರ, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ ಮುಂತಾದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು.  ಇವುಗಳಿಗೆ ಸಭೆಯಲ್ಲಿ ಒಪ್ಪಿಕೊಂಡು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಕಟಿಸುವುದಾಗಿ ಹೇಳಿದ ಸಾರಿಗೆ ನೌಕಕರ ಸಂಘದ ಮುಖಂಡರು, ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೂಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ.

ಇದನ್ನೂ ಓದಿ : ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಕುರಿತ ಸಿದ್ಧರಾಮಯ್ಯ ಹೇಳಿಕೆ ತಿರುಕನ ಕನಸು ; ಸಚಿವ ಈಶ್ವರಪ್ಪ ಲೇವಡಿ

ಕೋಡಿಹಳ್ಳಿ ಚಂದ್ರಶೇಖರ್ ಅವರು ಅನಗತ್ಯವಾಗಿ ನೌಕರರ ದಾರಿತಪ್ಪಿಸುತ್ತಿರುವುದು ಸರಿಯಲ್ಲ. ಅವರ ದುರುದ್ದೇಶಪೂರಿತ ನಡೆ ಖಂಡನೀಯ ಎಂದಿರುವ ಮುಖ್ಯಮಂತ್ರಿಗಳು ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ, ಸಾರಿಗೆ ಸಂಸ್ಥೆಗೆ ನಷ್ಟ ಹಾಗೂ ಸಾರಿಗೆ ಸಂಸ್ಥೆಯ ನೌಕರರಿಗೂ ತೊಂದರೆಯಾಗುತ್ತದೆ. ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ಬೆಳಿಗ್ಗೆ 10 ಘಂಟೆಯಿಂದ ಮಾತುಕತೆ ನಡೆಸಿದ್ದೇವು. ಎಲ್ಲವು ಸಂಧಾನದಲ್ಲಿ ಒಪ್ಪಿಗೆ ಕೊಟ್ಟಿದ್ದರು. ಮಾಧ್ಯಮಗಳ ಮುಂದೆ ಸಕಾರಾತ್ಮಕವಾಗಿದೆ ಅಂದ್ರು. ಕೋಡಿಹಳ್ಳಿ ಚಂದ್ರಶೇಖರ್ ಮಾತು ಕೇಳಿ ಬದಲಾಗಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಸಂಬಳ ಕೊಟ್ಟಿದ್ದೇವೆ. ಕರ್ನಾಟಕದಲ್ಲೂ ಈ ಹಿಂದೆ ಎಸ್ಮಾ ಕಾಯಿದೆ ಜಾರಿಯಾಗಿತ್ತು. ಇಲ್ಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ ತಿಳಿಸಿದರು.
Published by:G Hareeshkumar
First published: