ಕೆಎಸ್ಆರ್​ಟಿಸಿ ಹಾಗೂ ಟೋಲ್ ಕಂಪನಿ ಮಧ್ಯೆ ನಡೆದಿದ್ಯಾ ಬಾರಿ ಡೀಲ್..?

news18
Updated:September 2, 2018, 3:59 PM IST
ಕೆಎಸ್ಆರ್​ಟಿಸಿ ಹಾಗೂ ಟೋಲ್ ಕಂಪನಿ ಮಧ್ಯೆ ನಡೆದಿದ್ಯಾ ಬಾರಿ ಡೀಲ್..?
news18
Updated: September 2, 2018, 3:59 PM IST
- ಅಭಿಷೇಕ್ ಡಿ.ಆರ್. ನ್ಯೂಸ್ 18 ಕನ್ನಡ

ನೆಲಮಂಗಲ (ಸಪ್ಟೆಂಬರ್ 02)  : ಸಂಸ್ಥೆಯ ಅದೇಶಗಳನ್ನ ಅಲ್ಲಿನ ಸಿಬ್ಬಂದಿಗಳೇ ಗಾಳಿಗೆ ತೂರಿ ಜನಸಾಮಾನ್ಯರ, ಕೋಟಿಕೋಟಿ ರೂಪಾಯಿ ಹಣವನ್ನ ನೀರಿನಲ್ಲಿ ಹೋಮ ಮಾಡುತಿದ್ದಾರೆ. ಆದ್ರೆ ಆ ಇಲಾಖೆಯ ಸಚಿವರು ಮಾತ್ರ ಇಲಾಖೆ ತುಂಬ ನಷ್ಟದಲ್ಲಿದೆ ಅಂತಾರೆ. ಕೋಟಿಕೋಟಿ ಹಣ ಹೇಗೆ ದುರುಪಯೋಗ ವಾಗ್ತಿದೆ.

ಜನರ ಜೀವನಾಡಿಯಾಗಿರುವ ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂಬ ಸಚಿವರ ಉತ್ತರಕ್ಕೆ ಮಹತ್ತರವಾದ ಸಾಕ್ಷಿ ಇಲ್ಲಿದೆ. ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವರು ನೋಡಲೇ ಬೇಕಾದ ಸ್ಟೋರಿ ಇದು. ಸಾರಿಗೆ ಸಂಸ್ಥೆಯ ಎಂ.ಡಿ ಮಾಡಿರುವ ಆದೇಶ, ಕೇವಲ ನೆಪಮಾತ್ರಕ್ಕೆ ಮಾತ್ರನಾ.

ಹೌದು ಎಲ್ಲ ಆರೋಪಗಳಿಗೆ ಕಾರಣವಾಗಿರೋದು ಕೆ.ಎಸ್.ಅರ್.ಟಿ.ಸಿ ಸಂಸ್ಥೆ. ಎಸ್ ಟೋಲ್ ಕಂಪನಿ ಹಾಗೂ ಕೆ.ಎಸ್.ಆರ್.ಟಿ.ಸಿ ನಡುವೆ ನಡೆದಿದ್ಯ ಬಾರಿ ಪ್ರಮಾಣದ ಡೀಲ್ ಎನ್ನುವ ಪ್ರಶ್ನೆಗೆ, ಸ್ವತಃ ಸಾರಿಗೆ ಸಚಿವರೇ ಉತ್ತರ ನೀಡಿಬೇಕಿದೆ. ಈ ಎಲ್ಲಾ ಆರೋಪಗಳು ಮಾಹಿತಿ ಹಕ್ಕು ನಿಯಮದಡಿ ಬಹಿರಂಗವಾಗಿದೆ.

ಕೆ.ಎಸ್.ಅರ್.ಟಿ.ಸಿ ಬಸ್​ಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶವಿದ್ದರೂ, ಚಾಲಕರು ಸರ್ವೀಸ್ ರಸ್ತೆಯಲ್ಲಿ ಬರದೆ, ಹೆದ್ದಾರಿಯ ಟೋಲ್​ಗಳಲ್ಲಿ ಸಂಚಾರ ಮಾಡುವುದರಿಂದ ಬರೋಬ್ಬರಿ 70 ಕೋಟಿ ರೂಪಾಯಿ ಸಾರಿಗೆ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆಯಂತೆ. ಇಲ್ಲಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರ ಆದೇಶವಿದ್ದರೂ ಹಲವಾರು ಬಸ್​ಗಳು, ಬೆಂಗಳೂರು ನಗರದ ಗೊರಗುಂಟೆಪಾಳ್ಯದಿಂದ ನೇರವಾಗಿ ಟೋಲ್​ನಲ್ಲಿ ಸಂಚರಿಸುತ್ತಿವೆ.

ಆದರೆ ಬಸ್​ಗಳು ಟೋಲ್ ಗೇಟ್​ಗಳಲ್ಲಿ ಸಂಚರಿಸದೇ ಸರ್ವೀಸ್ ರಸ್ತೆಯಲ್ಲಿ ಸಂಚಾರವನ್ನ ನಡೆಸಬೇಕು, ಆದರೆ ಈ ಎಲ್ಲಾ ನಿಯಮಗಳು ಅಧಿಕಾರಿಗಳ ಕಡತದಲ್ಲಿ ಮಾತ್ರ ಇದೆ ಎನ್ನುವ ಗಂಭೀರವಾದ ಆರೋಪವಿದೆ.

ಇನ್ನೂ ರಾಜ್ಯದ 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು ಹೊರವಲಯ ನೆಲಮಂಗಲ ಮೂಲಕ ಹಾದುಹೋಗಬೇಕಾದ, ಸಾವಿರಾರು ಬಸ್​ಗಳು ಟೋಲ್ ಶುಲ್ಕ ನೀಡಿ ಎಲಿವೇಟೆಡ್ ಕಾರಿಡಾರ್ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಹೀಗಾಗಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಕೋಟಿ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
Loading...

ಇನ್ನೂ ಹೋರಾಟಗಾರರು ಹಲವಾರು ಬಾರಿ ಸಂಸ್ಥೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರು, ಕ್ರಮ ಕೈಗೊಳ್ಳದ ಸಂಸ್ಥೆಯ ವಿಭಾಗಗಳ ಸಾರಿಗೆ ಅಧಿಕಾರಿಗಳು, ಟೋಲ್ ಅಧಿಕಾರಿಗಳೊಂದಿಗೆ ಆಂತರಿಕವಾಗಿ ಹೊಂದಾಣೆಕೆ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟುಮಾಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಹೀಗಿರುವಾಗ ಟೋಲ್ ರಸ್ತೆಯಲ್ಲಿ ಬಸ್​ಗಳ ಸಂಚಾರದಿಂದ ಪ್ರಯಾಣಿಕರು ಸಹ, ಸಾಕಷ್ಟು ಸಮಸ್ಯೆಗಳನ್ನ ಪ್ರತಿನಿತ್ಯ ಎದುರಿಸುವಂತಾಗಿದೆ.

ಒಟ್ಟಾರೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ತಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ, ಜನಸಾಮಾನ್ಯರ ಕೋಟಿಕೋಟಿ ರೂಪಾಯಿ ಹಣ ದುರುಪಯೋಗ ಆಗ್ತಿರೋದು ವಿಪರ್ಯಾಸವೇ ಸರಿ. ಇನ್ನಾದರು ಸಚಿವರು ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕುತ್ತಾರಾ  ಎನ್ನುವುದನ್ನು ಕಾದು ನೋಡಬೇಕಾಗಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ