• Home
 • »
 • News
 • »
 • state
 • »
 • ಆರನೇ ವೇತನ ಆಯೋಗ ಜಾರಿಗೆ ಆಗ್ರಹ; ಬೇಡಿಕೆ ಈಡೇರದಿದ್ದರೆ ಏಪ್ರಿಲ್ 7ರಿಂದ ಸಾರಿಗೆ ಮುಷ್ಕರ ನಿಶ್ಚಿತ

ಆರನೇ ವೇತನ ಆಯೋಗ ಜಾರಿಗೆ ಆಗ್ರಹ; ಬೇಡಿಕೆ ಈಡೇರದಿದ್ದರೆ ಏಪ್ರಿಲ್ 7ರಿಂದ ಸಾರಿಗೆ ಮುಷ್ಕರ ನಿಶ್ಚಿತ

ಕೆಂಪೇಗೌಡ ಬಸ್​ ನಿಲ್ದಾಣ

ಕೆಂಪೇಗೌಡ ಬಸ್​ ನಿಲ್ದಾಣ

6 ನೇ ವೇತನ ಆಯೋಗ ಜಾರಿಯಾದ್ರೆ ಭಾರೀ ಪ್ರಮಾಣದ ಹೊರೆ ನಿಗಮಗಳ ಮೇಲೆ ಬೀಳಲಿದೆ.  ಕೋವಿಡ್ ಹಿನ್ನಲೆ ನಾಲ್ಕೂ ನಿಗಮಗಳು ಪ್ರಯಾಣಿಕರಿಲ್ಲದೇ ನಷ್ಟದ ಸವಾರಿ ಮಾಡ್ತಿವೆ.  ಈ ಎಲ್ಲಾ ಕಾರಣದಿಂದ 6 ನೇ ವೇತನ ಆಯೋಗದ ಬದಲಿಗೆ ಸಂಬಳ ಏರಿಕೆ ಸಾಕು ಅನ್ನೋ ತೀರ್ಮಾನಕ್ಕೆ  ಸಿಎಂ ಹಾಗೂ ಸಾರಿಗೆ ಸಚಿವರು ಬಂದಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
 • Share this:

  ಬೆಂಗಳೂರು(ಏ.05): ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನಾ ಸಪ್ತಾಹ ನಡೆಸುತ್ತಿದ್ದಾರೆ.  ಸಾರಿಗೆ ನೌಕರರ ವೇತನ ಹೆಚ್ಚಿಸಬೇಕೆಂದು ಸಾರಿಗೆ ನೌಕರರು ಆಗ್ರಹಿಸುತ್ತಿದ್ದಾರೆ.  ಜೊತೆಗೆ ಸರ್ಕಾರಕ್ಕೆ ಏಪ್ರಿಲ್ 6ರವರೆಗೆ ಗುಡುವು ಕೊಟ್ಟಿದ್ದಾರೆ. ಏಪ್ರಿಲ್ 6ರೊಳಗೆ ಆರನೇ ವೇತನ ಆಯೋಗ ಜಾರಿ ಆಗಬೇಕು.  ಇಲ್ಲದಿದ್ದರೆ ಏಪ್ರಿಲ್  7ರಿಂದ ಮುಷ್ಕರ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.


  ಆರನೇ ವೇತನ ಆಯೋಗ ಜಾರಿಯಾಗದಿದ್ದರೆ, ಏಪ್ರಿಲ್ 7ರಂದು ಮುಷ್ಕರ ಮಾಡುವುದಾಗಿ ಸಾರಿಗೆ ನೌಕರರು ಕರೆಕೊಟ್ಟಿದ್ದಾರೆ. ಈ ಹಿನ್ನಲೆ ಇಂದು ವೇತನ ಹೆಚ್ಚಳದ ಬಗ್ಗೆ ಸರ್ಕಾರದಿಂದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಇಂದು ವೇತನ ಹೆಚ್ಚಳದ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಎಂ ಬಿಎಸ್ ಯಡಿಯೂರಪ್ಪನವರ ಜೊತೆ ಚರ್ಚೆ ಮಾಡಲಿದ್ದಾರೆ.  ಬಳಿಕ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.


  Coronavirus: ದೇಶದಲ್ಲಿ ಮುಂದುವರೆದ ಕೊರೋನಾ ಆರ್ಭಟ; ಭಾನುವಾರ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆ


  ಸದ್ಯ 6 ನೇ ವೇತನ ಆಯೋಗ ಜಾರಿ ಮಾಡುವ ಮನಸು ಸರ್ಕಾರಕ್ಕಿಲ್ಲ.  ಕೇವಲ ಹಿಂದಿನಂತೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲು ಸಾರಿಗೆ ಸಚಿವರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. 6 ನೇ ವೇತನ ಆಯೋಗ ಜಾರಿಯಾದ್ರೆ ಭಾರೀ ಪ್ರಮಾಣದ ಹೊರೆ ನಿಗಮಗಳ ಮೇಲೆ ಬೀಳಲಿದೆ.  ಕೋವಿಡ್ ಹಿನ್ನಲೆ ನಾಲ್ಕೂ ನಿಗಮಗಳು ಪ್ರಯಾಣಿಕರಿಲ್ಲದೇ ನಷ್ಟದ ಸವಾರಿ ಮಾಡ್ತಿವೆ.  ಈ ಎಲ್ಲಾ ಕಾರಣದಿಂದ 6 ನೇ ವೇತನ ಆಯೋಗದ ಬದಲಿಗೆ ಸಂಬಳ ಏರಿಕೆ ಸಾಕು ಅನ್ನೋ ತೀರ್ಮಾನಕ್ಕೆ  ಸಿಎಂ ಹಾಗೂ ಸಾರಿಗೆ ಸಚಿವರು ಬಂದಿದ್ದಾರೆ ಎನ್ನಲಾಗಿದೆ.


  ಆದರೆ ಆರನೇ ವೇತನ ಆಯೋಗವೇ ನಮ್ಮ ಬೇಡಿಕೆ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.  ಸಂಬಳ ಏರಿಕೆ ಬೇಡ್ವೇ ಬೇಡ, ವೇತನ ಆಯೋಗ ಜಾರಿ ಆಗ್ಲೇಬೇಕು ಎಂದು  ಸಾರಿಗೆ ನೌಕರರಯ ಪಟ್ಟು ಹಿಡಿದು ಕುಳಿತಿದ್ದಾರೆ. ಸದ್ಯ ಸರ್ಕಾರ ಒತ್ತಡಲ್ಲಿದೆ. ಸಿಎಂ ಇಂದು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.


  ಒಂದು ವೇಳೆ ಸಾರಿಗೆ ನೌಕರರ ಬೇಡಿಕೆಯಂತೆ 6 ನೇ ವೇತನ ಆಯೋಗ ಜಾರಿಯಾಗದಿದ್ದರೆ,  ಏಪ್ರಿಲ್7 ರಿಂದ ಸಾರಿಗೆ ಮುಷ್ಕರ ನಿಶ್ಚಿತ ಎಂದು ಹೇಳಲಾಗುತ್ತಿದೆ.

  Published by:Latha CG
  First published: