HOME » NEWS » State » KSRTC ANB BMTC WORKERS TODAY AGIAN PROTEST FOR DEMAND MAK

ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕರರಿಂದ ಇಂದು ಮತ್ತೆ ಪ್ರತಿಭಟನೆ: ಉಗ್ರ ಹೋರಾಟದ ಎಚ್ಚರಿಕೆ!

ಸರ್ಕಾರ ನೀಡಿರೋ ಭರವಸೆಗಳು ಹುಸಿಯಾಗಿರೋ ಹಿನ್ನೆಲೆ ಸಾರಿಗೆ ನೌಕರರು ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಸಿಐಟಿಯು ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಸಾರಿಗೆ ನೌಕರರು ಭಾಗಿಯಾಗಿ ಸರ್ಕಾರ ಹಾಗೂ ನಿಗಮಗಳ ವಿರುದ್ಧ ಕಿಡಿ ಕಾರಿದರು.

news18-kannada
Updated:February 10, 2021, 7:59 PM IST
ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕರರಿಂದ ಇಂದು ಮತ್ತೆ ಪ್ರತಿಭಟನೆ: ಉಗ್ರ ಹೋರಾಟದ ಎಚ್ಚರಿಕೆ!
ಸಾರಿಗೆ ನೌಕರರ ಪ್ರತಿಭಟನೆ.
  • Share this:
ಬೆಂಗಳೂರು (ಫೆಬ್ರವರಿ 10); ಸರ್ಕಾರ ಕೊಟ್ಟ ಹುಸಿ ಭರವಸೆ ವಿರೋಧಿಸಿ ಇಂದು ಸಾರಿಗೆ ನೌಕರರು ಕೆಂಡ ಕಾರಿದ್ರು. ಸದಾ ಒಂದಿಲ್ಲೊಂದು ಸಮಸ್ಯೆ ಆಗ್ತಿದ್ದು, ಕೂಡಲೇ ಬಗೆಹರಿಯಲೇ ಬೇಕು ಎಂದು ಸರ್ಕಾರ ಮತ್ತು ನಿಗಮಗಳ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಎದುರಾಗ್ತಾನೆ ಇರ್ತವೆ. ಇಪ್ಪತ್ತನಾಲ್ಕು ಗಂಟೆ ಕಾಲ ಬಸ್ ಗಳನ್ನು ಓಡಿಸಿದ್ರೂ ಅದ್ಯಾಕೋ ಏನೋ ನಿಗಮಗಳು ಮಾತ್ರ ನೌಕರರಿಗೆ ಕೊಡುವ ಕಾಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಬೆವರು ಸುರಿಸಿ ದುಡಿಯುತ್ತಿರುವ ಸಾರಿಗೆ ನೌಕಕರಿಗೆ ಪೆಟ್ಟಿನ ಮೇಲೆ ಪೆಟ್ಟು ಎಂಬಂತೆ, ಡಿಸೆಂಬರ್ ಹಾಗು ಜನವರಿಯ ವೇತನದಲ್ಲಿ ಅರ್ದ ಮಾತ್ರ ಪಾವತಿಸಿದೆ‌. ಇದಕ್ಕೆ ಕೆಂಡವಾಗಿರೋ ನೌಕರರು ಇಂದು ಬಿಎಂಟಿಸಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.

ಸರ್ಕಾರ ನೀಡಿರೋ ಭರವಸೆಗಳು ಹುಸಿಯಾಗಿರೋ ಹಿನ್ನೆಲೆ ಸಾರಿಗೆ ನೌಕರರು ಇಂದು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಸಿಐಟಿಯು ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಸಾರಿಗೆ ನೌಕರರು ಭಾಗಿಯಾಗಿ ಸರ್ಕಾರ ಹಾಗೂ ನಿಗಮಗಳ ವಿರುದ್ಧ ಕಿಡಿ ಕಾರಿದರು. ನೌಕರರಿಗೆ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳನ್ನು ಕೂಡಲೆ ಬಗೆಹರಿಸ ಬೇಕೆಂದು ಈ ವೇಳೆ ಆಗ್ರಹಿಸಿದರು.

ಇತ್ತ ಸಾರಿಗೆ ನೌಕರರು ಪ್ರತಿಭಟನೆಗೆ ಕರೆ ಕೊಡ್ತಿದ್ದಂತೆ BMTC ನಿಗಮ‌ವು ನಿನ್ನೆಯೇ ಸುತ್ತೋಲೆ ಹೊರಡಿಸಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಬಾರದು ಎಂಬ ಕಾರಣಕ್ಕೆ ಅನಿವಾರ್ಯ ಕಾರಣ ಹೊರತುಪಡಿಸಿ ರಜೆ ಮಂಜೂರು ಮಾಡಲಾಗದು ಎಂದು ಬಿಎಂಟಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿತ್ತು. ಇದಕ್ಕೆ ಬೆಲೆ ಕೊಟ್ಟ ಪ್ರತಿಭಟನಾ ನಿರತರರು ಪಾಳಿಯ ಕೆಲಸ ಮುಗಿಸಿಯೇ ಪ್ರತಿಭಟನೆಯಲ್ಲಿ ಸಜ್ಜಾಗಿ ನಿಗಮಕ್ಕೆ ಮನವಿಯನ್ನ ಸಲ್ಲಿಸಿದ್ರು. ಬಿಎಂಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ರವರಿಗೆ ಮನವಿಸಿ  ಸಲ್ಲಿಸಿ, ಆದಷ್ಟು ಬೇಗ ಎದುರಾಗಿರುವ ವೇತನದ ಸಮಸ್ಯೆ ಸೇರಿ ಇನ್ನಿತರ ಕಂಟಕಗಳನ್ನು ಸರಿಪಡಿಸಿ ಎಂದು ಬೇಡಿಕೆ ಇಟ್ಟರು.

ಇದನ್ನೂ ಓದಿ: ಗುಜರಾತ್​ನ ಜುನಾಘಡದಲ್ಲಿ ಹೋಟೆಲ್​ಗೆ ನುಗ್ಗಿದ ಸಿಂಹ; ಸಿಸಿಟಿವಿ ವಿಡಿಯೋ ವೈರಲ್​!

ಈ ವರ್ಷದ ಆರಂಭದಲ್ಲಿ ಸಂಘಟಿತವಾಗಿ ಮುಷ್ಕರ ಮಾಡಿದ್ದ ಸಾರಿಗೆ ನೌಕರರು ಬೃಹತ್ ಹೋರಾಟವನ್ನೇ ಸಾರಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹೋರಾಟ ಇದಾಗಿದ್ದು ಸುದೀರ್ಘವಾದ ನಾಲ್ಕು ದಿನಗಳ ಕಾಲ ಮುಷ್ಕರ ನಡೆದಿತ್ತು. ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಜನರು ಪರದಾಡಿ ಹೋಗಿದ್ದರು. ಈ ವೇಳೆ ಶೀಘ್ರವೇ ನಿಮ್ಮ ಬೇಡಿಕೆಗಳು ಈಡೇರಿಕೆಯಾಗಲಿದೆ ಎಂದಿದ್ದಕ್ಕೆ ನೌಕರರು ಮುಷ್ಕರ ಕೈ ಬಿಟ್ಟರು.
Youtube Video

ಆದರೆ ಇಷ್ಟೂ ದಿನಗಳಾದರು ಕೂಡ ಕೊಟ್ಟ ಮಾತನ್ನು ಉಳಿಸಿಕೊಳ್ಳೋಕೆ ಸರ್ಕಾರಕ್ಕಾಗಲಿ, ನಿಗಮಗಳಿಗಾಗಲಿ ಸಾಧ್ಯವಾಗಿಲ್ಲ. ಹೀಗಾಗಿ ಈಗ ಮತ್ತೆ ಸಾಂಕೇತ ಹೋರಾಟ ನಡೆಸಿರುವ ಸಾರಿಗೆ ನೌಕರರು ಆದಷ್ಟು ನಮ್ಮ ಅಹವಾಲಿಗೆ ಸ್ಪಂದಿಸಿ ಇಲ್ಲದೆ ಹೋದರೆ ಮತ್ತೆ ಬೃಹತ್ತಾದ ಮುಷ್ಕರಕ್ಕೆ ಇಳಿಯಲಿದ್ದೇವೆ ಎಂಬ ಸಂದೇಶ ರವಾನಿಸಿದರು.(ವರದಿ- ಆಶಿಕ್ ಮುಲ್ಕಿ)
Published by: MAshok Kumar
First published: February 10, 2021, 7:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories