ಬೆಂಗಳೂರಿನಲ್ಲಿ ಕೆಎಸ್​ಆರ್​​ಪಿ ಕಾನ್ಸ್​ಟೇಬಲ್​ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಸಂಜೆ ವೇಳೆಗೆ ಹುಚ್ಚೇಗೌಡ ಅವರ ಮೂಗಿನಿಂದ ರಕ್ತ ಬಂದಿತ್ತು. ಆಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅವರು ವಿಶ್ರಾಂತಿ ತೆಗೆದುಕೊಳ್ಳದೆ ತಾನೇ ಕೆಲಸ ಮಾಡುವುದಾಗಿ ಹೇಳಿದ್ದರು.

news18-kannada
Updated:March 26, 2020, 10:29 AM IST
ಬೆಂಗಳೂರಿನಲ್ಲಿ ಕೆಎಸ್​ಆರ್​​ಪಿ ಕಾನ್ಸ್​ಟೇಬಲ್​ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಮಾ.26): ಕೆಎಸ್​ಆರ್​​ಪಿ ಕಾನ್ಸ್​​ಟೇಬಲ್​​ ಇಂದು ಮುಂಜಾನೆ ಕಚೇರಿಯಲ್ಲೇ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ.

ಇಲ್ಲಿ ಬರುವ ಮೂರನೇ ಬೆಟಾಲಿಯನ್​ ಕೆಎಸ್​ಆರ್​​ಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಹುಚ್ಚೇಗೌಡ ಶೂಟ್​ ಔಟ್​ ಮಾಡಿಕೊಂಡ ಪೊಲೀಸ್​ ಕಾನ್ಸ್​​ಟೇಬಲ್​​. ಈ ಮುಖ್ಯ ಪೇದೆ ನಿನ್ನೆ ರಾತ್ರಿ ಪಾಳಿಯಲ್ಲಿದ್ದರು ಎಂದು ತಿಳಿದು ಬಂದಿದೆ.

ಇಂದಿನಿಂದ ಬಿಎಂಟಿಸಿ ಸೇವೆ; ಯಾರೆಲ್ಲ ಬಸ್​ ಹತ್ತಬಹುದು? ಪಾಸ್​ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

ಸಂಜೆ ವೇಳೆಗೆ ಹುಚ್ಚೇಗೌಡ ಅವರ ಮೂಗಿನಿಂದ ರಕ್ತ ಬಂದಿತ್ತು. ಆಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅವರು ವಿಶ್ರಾಂತಿ ತೆಗೆದುಕೊಳ್ಳದೆ ತಾನೇ ಕೆಲಸ ಮಾಡುವುದಾಗಿ ಹೇಳಿದ್ದರು.

ಮುಂಜಾನೆ  4 ಗಂಟೆ ಸುಮಾರಿಗೆ ಕಾನ್ಸ್​​ಟೇಬಲ್​ ಹುಚ್ಚೇಗೌಡ ಇಲಾಖೆಯ ಬಂದೂಕಿನಿಂದ ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading