ಬಪ್ಪರೇ ಕೆಎಸ್​ಪಿಸಿಬಿ..! ಮಾಲಿನ್ಯ ನಿಯಂತ್ರಣಕ್ಕೆ ಫ್ರೀ ಗಣೇಶನ ವಿಗ್ರಹ ದೇವಸ್ಥಾನಗಳಿಗೆ ಗಿಫ್ಟ್​

news18
Updated:July 25, 2018, 5:23 PM IST
ಬಪ್ಪರೇ ಕೆಎಸ್​ಪಿಸಿಬಿ..! ಮಾಲಿನ್ಯ ನಿಯಂತ್ರಣಕ್ಕೆ ಫ್ರೀ ಗಣೇಶನ ವಿಗ್ರಹ ದೇವಸ್ಥಾನಗಳಿಗೆ ಗಿಫ್ಟ್​
news18
Updated: July 25, 2018, 5:23 PM IST
ಸೌಮ್ಯ ಕಳಸ, ನ್ಯೂಸ್​ 18 ಕನ್ನಡ

ಬೆಂಗಳೂರು (ಜು.25): ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ) ಗಣೇಶನ ಮೂರ್ತಿ ಮಾರಾಟ ನಿಯಂತ್ರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಎಷ್ಟೇ ಜಾಗೃತಿ ಕಾರ್ಯಕ್ರಮ ಮೂಡಿಸಿದರೂ ಇದರ ಮಾರಾಟ ಮಾತ್ರ ನಿಂತಿಲ್ಲ. ಇದಕ್ಕಾಗಿ ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶೇಷ ಯೋಜನೆ ರೂಪಿಸಿದ್ದು, ಈ ಯೋಜನೆ ಯಶಸ್ವಿಯಾಗಲಿದೆ ಎಂಬ ಭರವಸೆಯಲ್ಲಿದ್ದಾರೆ.

ಮಣ್ಣಿನ ಗಣಪತಿ ಬಳಕೆಗೆ ಈಗಾಗಲೇ ಚಾಲನೆ ಕೈಗೊಂಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಇದರ ಮಾರಾಟಕ್ಕೆ ಜಾಗ ಹುಡುಕಿರುವ ಸ್ಥಳ ದೇವಸ್ಥಾನ. ನಗರದಲ್ಲಿರುವ ಬಹುತೇಕ ದೇವಾಲಯಗಳಲ್ಲಿಯೂ ಮಣ್ಣಿನ ಗಣೇಶವನ್ನು ನೀಡಲಿದ್ದು,  ಮುಜರಾಯಿ ಇಲಾಖೆಯಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿಯೂ ಗಣೇಶ ನೀಡುವುದು ಖಚಿತವಾಗಿದೆ. ಈ ಮೂರ್ತಿಗಳು ಜನರಿಗೆ ಉಚಿತವಾಗಿ ವಿತರಿಸಲಾಗಿದ್ದು, ಈ ಕಾರ್ಯಕ್ಕೆ ಎನ್​ಜಿಒಗಳು ಕೈಜೋಡಿಸಿದೆ.

ನಗರದ ದೇವಸ್ಥಾನಗಳಲ್ಲಿ ಭಕ್ತರಿಗೆ ಖುದ್ದು ದೇವಸ್ಥಾನದ ಅರ್ಚಕರ ಕೈಯಲ್ಲೇ ಮಣ್ಣಿನ ಮೂರ್ತಿ ಸಿಕ್ಕರೆ ಜನ ಕೂಡ ಅದನ್ನು ಸ್ವೀಕರಿಸುತ್ತಾರೆ ಇದರಿಂದ ಪಿಒಪಿ ಮೂರ್ತಿಗಳನ್ನು ಕೊಳ್ಳೋದಿಲ್ಲ ಎನ್ನುವುದು ಮಂಡಳಿ ಲೆಕ್ಕಾಚಾರ.ವಾಗಿದೆ. ಇನ್ನು ಈ ಸಂಬಂಧ ಈಗಾಗಲೇ ಒಂದಷ್ಟು ಸ್ವಯಂಸೇವಾ ಸಂಸ್ಥೆಗಳೊಂದಿಗೆ  ಮಾಲಿನ್ಯ ನಿಯಂತ್ರಣ ಮಂಡಳಿ ಮಾತುಕತೆ ನಡೆಸಿದೆ.

ಈ ಯೋಜನೆಗೆ  ಕೆಲವು  ಸಂಸ್ಥೆಗಳೇ ಖುದ್ದಾಗಿ ಒಂದಷ್ಟು ದೇವಸ್ಥಾನಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಜನರಿಗೆ ನೀಡುವ ವ್ಯವಸ್ಥೆ ಮಾಡಲು ಒಪ್ಪಿಗೆಯನ್ನು ಸೂಚಿಸಿದೆ. 50ರಿಂದ 100 ರೂಪಾಯಿ ಬೆಲೆಬಾಳುವ ಮಣ್ಣಿನ ಮೂರ್ತಿಗಳನ್ನು ಜನರಿಗೆ ನೀಡುವ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮಂಡಳಿ ರೆಡಿಯಾಗಿದೆ. ಇವರ ಈ ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿವರ್ಷ ಪಿಒಪಿ ಗಣೇಶನಿಂದಾಗಿ ಈಗಾಗಲೇ ಬೆಂಗಳೂರಿನ ಕೆರೆಗಳು ಮಲಿನವಾಗಿದ್ದು, ಜಲ, ನೆಲ ಎಲ್ಲವೂ ಮಲಿನವಾಗುತ್ತಿದೆ.  ಕಳೆದೆರಡು ವರ್ಷಗಳಿಂದ ಪಿಒಪಿ ಮೂರ್ತಿಗಳನ್ನು ನಿಷೇಧಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಪ್ರವೃತ್ತವಾಗಿದೆ. ಆದರೂ ಕೂಡ ಮಂಡಳಿ ಕದ್ದು ಮುಚ್ಚಿ ಗಣೇಶನ ವಿಗ್ರಹಗಳು ಮಾರಾಟವಾಗುತ್ತಿದೆ.

ಕದ್ದುಮುಚ್ಚಿ ಪಿಒಪಿ ಮೂರ್ತಿಗಳ ತಯಾರಿಕಾ ಘಟಕಗಳ ಮೇಲೆ ರೇಡ್ ಮಾಡಿ ಸೀಜ್ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ವಿಭಾಗಗಳಿಗೆ ಮಂಡಳಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಜನರಿಗೆ ಮಣ್ಣಿನ ಮೂರ್ತಿಗಳು ಸುಲಭವಾಗಿ ಸಿಗುವಂತೆ ಮಾಡುವ ಮೂಲಕ  ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸುವತ್ತ ಬಹುದೊಡ್ಡ ಹೆಜ್ಜೆಯಾಗುವ ನಿರೀಕ್ಷೆಯಿದೆ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...